Day: January 13, 2022

ಉಡುಪಿ : ಹಿರಿಯ ಪತ್ರಕರ್ತ, ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ

ಉಡುಪಿ : ಖ್ಯಾತ ಸಂಗೀತ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ, ಇಂದ್ರಾಳಿಯ ನಿವಾಸಿ ವಾಸುದೇವ ಭಟ್ ನಿಧನರಾಗಿದ್ದಾರೆ‌. ಉಡುಪಿಯಲ್ಲಿ ನಾದವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿದ ಕೀರ್ತಿ ವಾಸುದೇವ ಭಟ್ ಅವರಿಗೆ ಸಲ್ಲುತ್ತದೆ. 1994 ರಲ್ಲಿ ಭುವನ ಜ್ಯೋತಿ ಎಂಬ ಐದು ಭಾಷೆಗಳಲ್ಲಿ ರಚಿತವಾದ ಪ್ರಭು ಯೇಸು ಸ್ವಾಮಿಯ ಜೀವನಾಧಾರಿತ ಚಲನಚಿತ್ರ ತಯಾರಿಸಿ ಹಲವರಿಗೆ ಪಾತ್ರ ನೀಡಿದ್ದರು. ಅನೇಕ ಸಂಗೀತ ನೃತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ ನಿರ್ದೇಶಿಸಿ ಪಾತ್ರವನ್ನು ಮಾಡಿ ಸೈ ಎನಿಸಿಕೊಂಡವರು ವಾಸುದೇವ …

ಉಡುಪಿ : ಹಿರಿಯ ಪತ್ರಕರ್ತ, ಖ್ಯಾತ ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ Read More »

ಬೆಂಗಳೂರು : ಭೀಕರ ಅಪಘಾತದಲ್ಲಿ ಧಾರವಾಹಿ ನಟಿಯ ಮಗಳ ದಾರುಣ ಸಾವು : ಕಳೆದವಾರವಷ್ಟೇ ‘ ರಿಯಾಲಿಟಿ ಶೋ’ ಒಂದರಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಅಮ್ಮ ಮಗಳು

ಬೆಂಗಳೂರಿನ ಕೋಣನಕುಂಟೆ ವಾಜರಹಳ್ಳಿಯಲ್ಲಿ ಇಂದು ಸಂಜೆ ದ್ವಿಚಕ್ರ ವಾಹನದಲ್ಲಿ ತಾಯಿ ಮಗಳು ಪ್ರಯಾಣಿಸುತ್ತಿದ್ದ ಗಾಡಿಯು ಟಿಪ್ಪರ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆರು ವರ್ಷದ ಸಮನ್ವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ರಿಯಾಲಿಟಿ ಶೋ ಒಂದರಲ್ಲಿ ಭಾಗಿಯಾಗಿದ್ದ, ತಾಯಿ ಅಮೃತ ಮತ್ತು ಮಗಳು ಸಾನ್ವಿ ಕಳೆದ ವಾರ ರಿಯಾಲಿಟಿ ಶೋನಿಂದ ಎಲಿಮಿನೇಟ್ ಆಗಿದ್ದರಷ್ಟೇ. ಅಪಘಾತದಲ್ಲಿ ತಾಯಿ ಅಮೃತಾ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ. ಗಾಯಗೊಂಡಿರುವ ಅಮೃತಾ ನಾಯ್ಡು ಅವರು …

ಬೆಂಗಳೂರು : ಭೀಕರ ಅಪಘಾತದಲ್ಲಿ ಧಾರವಾಹಿ ನಟಿಯ ಮಗಳ ದಾರುಣ ಸಾವು : ಕಳೆದವಾರವಷ್ಟೇ ‘ ರಿಯಾಲಿಟಿ ಶೋ’ ಒಂದರಲ್ಲಿ ಎಲಿಮಿನೇಟ್ ಆದ ಸ್ಪರ್ಧಿ ಅಮ್ಮ ಮಗಳು Read More »

ಕಡಲ ಕಿನಾರೆಯಲ್ಲಿ ಕಳವಳ | ದಕ್ಷಿಣ ಕನ್ನಡ ಸೇರಿ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಕೋರೋನಾತಂಕ

ರಾಜ್ಯದಲ್ಲಿ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದ್ದು, ಬೆಂಗಳೂರಿನಲ್ಲಿ ಇಂದು ಹೊಸದಾಗಿ 18,374 ಜನರಿಗೆ ಸೋಂಕು ತಗಲಿದ್ದು, ಮೂವರು ಮೃತಪಟ್ಟಿದ್ದಾರೆ. 1132 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 90,893 ಸಕ್ರಿಯ ಪ್ರಕರಣಗಳು ಇವೆ.ದಕ್ಷಿಣ ಕನ್ನಡದಲ್ಲಿ 625 ಮಂದಿಗೆ ಕೋವಿಡ್ ಸೋಂಕು ದೃಢವಾಗಿದೆ. ಜಿಲ್ಲಾವಾರು ಮಾಹಿತಿ ಈ ರೀತಿ ಇದೆ. ದಕ್ಷಿಣಕನ್ನಡ 625, ದಾವಣಗೆರೆ 92, ಧಾರವಾಡ 399, ಹಾಸನ 490, ಕಲಬುರ್ಗಿ 346,ಬಳ್ಳಾರಿ 185, ಬೆಳಗಾವಿ 276, ಬೆಂಗಳೂರು ಗ್ರಾಮಾಂತರ 390, ಬೀದರ್ 97, ಚಾಮರಾಜನಗರ 176, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು …

ಕಡಲ ಕಿನಾರೆಯಲ್ಲಿ ಕಳವಳ | ದಕ್ಷಿಣ ಕನ್ನಡ ಸೇರಿ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಕೋರೋನಾತಂಕ Read More »

ರಾಜ್ಯದಲ್ಲಿ 24 ಗಂಟೆಯಲ್ಲಿ 25 ಸಾವಿರ ಹೊಸ ಕೋವಿಡ್ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಒಮಿಕ್ರಾನ್ ಆರ್ಭಟ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ 25,005 ಹೊಸ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಅತ್ಯಧಿಕ 18,374 ಹೊಸ ಪ್ರಕರಣ ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಈ ಕುರಿತು ಇಂದು ಟ್ವೀಟ್ ಮಾಡಿರುವ ಸಚಿವರು, 2,363 ಸೋಂಕಿತರು ಗುಣಮುಖರಾಗಿದ್ದಾರೆ. ಬೆಂಗಳೂರು ಮೂವರು ಸೇರಿದಂತೆ ರಾಜ್ಯದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ. 12.39 ರಷ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಸದ್ಯ 1,15,733 ಸಕ್ರಿಯ ಪ್ರಕರಣಗಳಿದ್ದು, ಬೆಂಗಳೂರಿನಲ್ಲಿ 91 ಸಾವಿರ ಸಕ್ರಿಯ …

ರಾಜ್ಯದಲ್ಲಿ 24 ಗಂಟೆಯಲ್ಲಿ 25 ಸಾವಿರ ಹೊಸ ಕೋವಿಡ್ ಪ್ರಕರಣಗಳು ಪತ್ತೆ Read More »

ಕಡಬ : ಬಾಲಕಿಯ ಅತ್ಯಾಚಾರಗೈದು ಗರ್ಬಿಣಿಯಾಗಿಸಿದ ಪ್ರಕರಣ | ಆರೋಪಿ ಪೊಲೀಸ್ ಶಿವರಾಜ್‌ ಜಾಮೀನು ಅರ್ಜಿ ತಿರಸ್ಕೃತ

ಕಡಬ : ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಕಾನೂನು ನೆರವು ನೀಡುವ ನೆಪದಲ್ಲಿ ಸಲುಗೆ ಬೆಳೆಸಿ ಬಳಿಕ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಆರೋಪದಡಿ ಬಂಧಿತನಾಗಿರುವ ಕಡಬ ಠಾಣೆ ಪೊಲೀಸ್ ಕಾನ್‌ಸ್ಟೆಬಲ್ ಶಿವರಾಜ್ ಎಂಬಾತನ ಜಾಮೀನು ಅರ್ಜಿಯನ್ನು ಪುತ್ತೂರಿನ 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆರೋಪಿ ಶಿವರಾಜ್ ನನ್ನು ಸೆ. 28 ರಂದು ಪೊಲೀಸರು ಬಂಧಿಸಿದ್ದರು. ಆರೋಪಿಯ ವಿರುದ್ಧ …

ಕಡಬ : ಬಾಲಕಿಯ ಅತ್ಯಾಚಾರಗೈದು ಗರ್ಬಿಣಿಯಾಗಿಸಿದ ಪ್ರಕರಣ | ಆರೋಪಿ ಪೊಲೀಸ್ ಶಿವರಾಜ್‌ ಜಾಮೀನು ಅರ್ಜಿ ತಿರಸ್ಕೃತ Read More »

ಚೆನ್ನಾವರ : ಮಸೀದಿಯ ಗೌರವಕ್ಕೆ ದಕ್ಕೆ ತರುವ ರೀತಿಯಲ್ಲಿ ಫೋಟೋ ದುರ್ಬಳಕೆ ಇಬ್ಬರ ವಿರುದ್ದ ಪೊಲೀಸರಿಗೆ ದೂರು

ಸವಣೂರು : ಐತಿಹಾಸಿಕ ಹಿನ್ನೆಲೆಯುಳ್ಳ ಪಾಲ್ತಾಡಿ ಗ್ರಾಮದ ಚೆನ್ನಾವರ ಮುಹಿಯುದ್ದೀನ್ ಜುಮಾ ಮಸೀದಿಗೆ ಪ್ರವೇಶಿಸಿ ಮಸೀದಿಯ ಮುಂಭಾಗದಲ್ಲಿರುವ ಮಸೀದಿಯ ದೀಪವನ್ನು ಬೆಳಗಿಸಿ ಮಸೀದಿಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅದರ ಫೋಟೋ ದುರ್ಬಳಕೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಇಬ್ಬರು ಕಿಡಿಗೇಡಿಗಳ ವಿರುದ್ಧ ಜಮಾಅತ್ ಕಮಿಟಿ ಅಧ್ಯಕ್ಷರು ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ. ಜುಮಾ ಮಸೀದಿ ಐತಿಹಾಸಿಕ ಚೆನ್ನಾವರ ಹಿನ್ನೆಲೆಯುಳ್ಳದ್ದಾಗಿದ್ದು ಇಲ್ಲಿ ವಿದ್ಯುದ್ದೀಪ ಬರುವ ಮೊದಲು ದೀಪದ ಬೆಳಕಿನಲ್ಲಿ ನಮಾಜ್ ಮಾಡುತ್ತಿದ್ದರು. ಅಂದಿನಿಂದ ನಡೆದುಕೊಂಡು ಬಂದ …

ಚೆನ್ನಾವರ : ಮಸೀದಿಯ ಗೌರವಕ್ಕೆ ದಕ್ಕೆ ತರುವ ರೀತಿಯಲ್ಲಿ ಫೋಟೋ ದುರ್ಬಳಕೆ ಇಬ್ಬರ ವಿರುದ್ದ ಪೊಲೀಸರಿಗೆ ದೂರು Read More »

‘ಇನ್ಫೊಸಿಸ್’ ಕಂಪನಿಯಿಂದ 55 ಸಾವಿರ ಉದ್ಯೋಗಿಗಳ ನೇಮಕಕ್ಕೆ ಸಿದ್ಧತೆ !!

ಭಾರತದ ಎರಡನೇ ಅತಿದೊಡ್ಡ ಐಟಿ ಕಂಪನಿಯಾದ ಇನ್ಫೊಸಿಸ್, ತನ್ನ ಜಾಗತಿಕ ಪದವೀಧರ ನೇಮಕಾತಿ ಕಾರ್ಯಕ್ರಮದ ಭಾಗವಾಗಿ ಎಫ್ ವೈ22 ಗೆ 55,000 ಫ್ರೆಶರ್ ಗಳನ್ನು ನೇಮಿಸಿಕೊಳ್ಳಲು ಯೋಚಿಸುತ್ತಿದೆ ಎಂದು ಬುಧವಾರ ಹೇಳಿದೆ. ಮೂರನೇ ತ್ರೈಮಾಸಿಕದಲ್ಲಿ 5,809 ಕೋಟಿ ರೂ.ಗಳ ಲಾಭವನ್ನು ಘೋಷಿಸಿದ ನಂತರ,ವಿವಿಧ ಸುದ್ದಿ ಸಂಸ್ಥೆಗಳಿಗೆ ವಿವರಗಳನ್ನು ಮುಖ್ಯ ಹಣಕಾಸು ಅಧಿಕಾರಿ ನೀಲಂಜನ್ ರಾಯ್ ನೀಡಿದ್ದಾರೆ.ಐಟಿ ಸಂಸ್ಥೆಯು ಪ್ರತಿಭೆ ಸ್ವಾಧೀನ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆಗೆ ಆದ್ಯತೆ ನೀಡುವುದನ್ನು ಮುಂದುವರಿಸಿದ್ದು,ಬೆಳವಣಿಗೆಯ ಮಹತ್ವಾಕಾಂಕ್ಷೆಗಳನ್ನು ಬೆಂಬಲಿಸಲು ಎಫ್ ವೈ22 ಗೆ ಜಾಗತಿಕ …

‘ಇನ್ಫೊಸಿಸ್’ ಕಂಪನಿಯಿಂದ 55 ಸಾವಿರ ಉದ್ಯೋಗಿಗಳ ನೇಮಕಕ್ಕೆ ಸಿದ್ಧತೆ !! Read More »

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸಿಬಿ ದಿಢೀರ್ ದಾಳಿ !! | ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೂವರು ಅಧಿಕಾರಿಗಳು

ಉಡುಪಿ ಜಿಲ್ಲೆಯ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ತಂಡ ದಿಢೀರ್ ದಾಳಿ ಮಾಡಿದ್ದು, ಸಾರ್ವಜನಿಕರೊಬ್ಬರಿಂದ 2.50 ಲಕ್ಷ ರೂಪಾಯಿ ಲಂಚ ಸ್ವೀಕಾರ ಮಾಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಮೂವರು ಅಧಿಕಾರಿಗಳು ಸಿಕ್ಕಿಬಿದ್ದಿದ್ದ ಘಟನೆ ನಡೆದಿದೆ. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಎಂಜಿನಿಯರ್ ಗುರುಪ್ರಸಾದ್, ಪ್ರಾಧಿಕಾರ ಅಧಿಕಾರಿಗಳಾದ ನಯಿಮಾ ಸಯೀದ್ ಮತ್ತು ಪ್ರಸಾದ್‍ನನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಖಾಸಗಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕೆ ಕನ್ವರ್ಷನ್ ಮಾಡಿ ಪರವಾನಿಗೆ ಕೊಡುವ ವಿಚಾರಕ್ಕೆ ಲಂಚ ಪಡೆಯುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ …

ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಎಸಿಬಿ ದಿಢೀರ್ ದಾಳಿ !! | ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಮೂವರು ಅಧಿಕಾರಿಗಳು Read More »

ಇಡೀ ವಿಶ್ವವೇ ನನ್ನ ಮನೆ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ವಿಶ್ವಕ್ಕೆ ನೀಡಿದೆ !! – ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ

ಮಂಗಳೂರಿನ ಬೊಂದೆಲ್ನಲ್ಲಿರುವ ಮಹಾತ್ಮ ಗಾಂಧಿ ಸೆಂಟಿನರಿ ಪಿ ಯು ಕಾಲೇಜಿನಲ್ಲಿ “One Humanity Many Paths” ಎಂಬ ವಿಶೇಷ ಕಾರ್ಯಕ್ರಮ ದಿನಾಂಕ 12 ಜನೆವರಿ 2022 ರಂದು ಆಯೋಜನೆಯನ್ನು ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಹಿಂದೂ ಧರ್ಮದ ಪ್ರತಿನಿಧಿಯಾಗಿ ಸನಾತನ ಸಂಸ್ಥೆಯ ಸೌ. ಲಕ್ಷ್ಮಿ ಪೈ ಇವರನ್ನು ಆಹ್ವಾನಿಸಲಾಗಿತ್ತು. ಬೋಂದೆಲ್ ಚರ್ಚ್ ನ ಫಾದರ್ ಗೊನ್ಸಾಲ್ವಿಸ್ ಇವರು ಕ್ರೈಸ್ತ ಧರ್ಮದ ಪ್ರತಿನಿಧಿಯಾಗಿ ಹಾಗೂ ಶಂಶಾದ್ ಇವರು ಇಸ್ಲಾಂ ನ ಪ್ರತಿನಿಧಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಸೌ. ಲಕ್ಷ್ಮಿ ಪೈಯವರು ತಮ್ಮ …

ಇಡೀ ವಿಶ್ವವೇ ನನ್ನ ಮನೆ ಎಂಬ ಉದಾತ್ತ ಚಿಂತನೆಯನ್ನು ಹಿಂದೂ ಧರ್ಮವೇ ವಿಶ್ವಕ್ಕೆ ನೀಡಿದೆ !! – ಸೌ. ಲಕ್ಷ್ಮೀ ಪೈ, ಸನಾತನ ಸಂಸ್ಥೆ Read More »

ಮಕರಸಂಕ್ರಮಣ ವಿಶೇಷತೆ : ಶಬರಿಮಲೆಯ 18 ಮೆಟ್ಟಿಲುಗಳ ಸ್ವಾರಸ್ಯಕರ ಮಾಹಿತಿ

ಕೇರಳದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಮಕರ ಜ್ಯೋತಿಯಂದು ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.ಎಷ್ಟು ಶ್ರದ್ಧಾ ಭಕ್ತಿಯಿಂದ ಅಯ್ಯಪ್ಪನಿಗೆ ಪೂಜೆ ಸಲ್ಲಿಸುತ್ತಾರೋ ಆ ನಿಟ್ಟಿನಲ್ಲಿ ಅವರ ಕಷ್ಟವೆಲ್ಲ ಪರಿಹಾರ ಆಗುತ್ತದೆ ಎಂಬ ನಂಬಿಕೆ. ಈ ಪುಣ್ಯಕ್ಷೇತ್ರಕ್ಕೆ ಹೋಗಲು 41 ದಿನಗಳ ಕಠಿಣ ವ್ರತವನ್ನು ಅನುಸರಿಸಬೇಕು. ಬ್ರಹ್ಮಚರ್ಯೆ, ಸಾತ್ವಿಕ ಆಹಾರ, ಮಾಂಸ – ಮಧ್ಯ, ಧೂಮಪಾನ ಇವುಗಳಿಂದ ದೂರವೇ ಇರಬೇಕು.ಈ ವ್ರತದ ಸಮಯದಲ್ಲಿ ಅಯ್ಯಪ್ಪ ಭಕ್ತರು ಕಾಲಿಗೆ ಚಪ್ಪಲಿ ಕೂಡಾ ಧರಿಸುವುದಿಲ್ಲ‌. ಕೊರಳಿಗೆ ರುದ್ರಾಕ್ಷಿ ಮಾಲೆಗಳನ್ನು ಧರಿಸುತ್ತಾ, …

ಮಕರಸಂಕ್ರಮಣ ವಿಶೇಷತೆ : ಶಬರಿಮಲೆಯ 18 ಮೆಟ್ಟಿಲುಗಳ ಸ್ವಾರಸ್ಯಕರ ಮಾಹಿತಿ Read More »

error: Content is protected !!
Scroll to Top