ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡ ಮುಂಬೈ |ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆ ಪಡೆಯಲಿದೆ ಈ ನಗರ

ಭಾರತದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವೆಂದರೆ ಅದು ಭಾರತದ ಗೇಟ್ ವೇ ಮುಂಬೈ. ಇಂತಹ ಪ್ರಸಿದ್ಧ ಮುಂಬೈ ಇದೀಗ ಹೊಸ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ದೇಶದ ಪ್ರಪ್ರಥಮ ಅತ್ಯಾಧುನಿಕ ವಾಟರ್ ಟ್ಯಾಕ್ಸಿ ಸೇವೆಗಳನ್ನು ಪಡೆಯಲಿರುವ ನಗರ ಎಂಬ ಖ್ಯಾತಿಗೆ ಮುಂಬೈ ಪಾತ್ರವಾಗಲಿದೆ.

ದಕ್ಷಿಣ ಮುಂಬೈಯಿಂದ ನವಿ ಮುಂಬೈಗೆ ಸಂಪರ್ಕ ಕಲ್ಪಿಸುವ ವಾಟರ್ ಟ್ಯಾಕ್ಸಿ ಸೇವೆ ಈ ತಿಂಗಳ ಅಂತ್ಯದ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆ ಇದೆ. ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್‌ಪಿಟಿಗೆ ದಕ್ಷಿಣ ಮುಂಬೈನ ಮಜಗಾನ್‌ನಲ್ಲಿರುವ ಕ್ರೂಸರ್ ಟರ್ಮಿನಲ್‌ನೊಂದಿಗೆ ಸಂಪರ್ಕವನ್ನು ಈ ವಾಟರ್ ಟ್ಯಾಕ್ಸಿಗಳು ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನವಿ ಮುಂಬೈನ ನೆರೂಲ್, ಬೆಲಾಪುಟ್ ಮತ್ತು ಜೆಎನ್‌ಪಿಟಿಗೆ ದಕ್ಷಿಣ ಮುಂಬೈನ ಮಜಗಾನ್‌ನಲ್ಲಿರುವ ಕ್ರೂಸರ್ ಟರ್ಮಿನಲ್‌ನೊಂದಿಗೆ ಸಂಪರ್ಕ ವನ್ನು ಈ ವಾಟರ್ ಟ್ಯಾಕ್ಸಿಗಳು ಕಲ್ಪಿಸಲಿದ್ದು, ಪ್ರಯಾಣಿಕರಿಗೆ ಸುಮಾರು 25 ನಿಮಿಷ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Leave A Reply

Your email address will not be published.