ವೀಕೆಂಡ್ ಕರ್ಫ್ಯೂ ಸಂದರ್ಭ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವ ಮಾತನ್ನು ಹೇಳಿದ್ದ ಜಿಲ್ಲಾ ಪೊಲೀಸ್ ವಷ್ಠಾಧಿಧಿಕಾರಿ ಹಾಗೂ ಜಿಲ್ಲೆಯ ಜಿಲ್ಲಾಧಿಕಾರಿ ಈ ಒಂದು ವಿಚಾರದಲ್ಲಿ ಮಾತ್ರ ಮೌನ ಮುರಿದಿದ್ದು, ಸಾಮಾನ್ಯ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಈ ನಡುವೆ ವೀಕೆಂಡ್ ಕರ್ಫ್ಯೂ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಿ ಮೀನುಗಾರಿಕ ಬಂದರು ಸಚಿವರಾದ ಸುಳ್ಯ ಶಾಸಕ ಎಸ್.ಅಂಗಾರ ಉಪಸ್ಥಿತಿಯಲ್ಲಿ ಪಂಜದ ಕೃಷ್ಣನಗರದಲ್ಲಿ ಪೆಟ್ರೋಲ್ ಪಂಪ್ ಒಂದು ಅದ್ದೂರಿಯಾಗಿ ಉದ್ಘಾಟನೆಗೊಂಡಿದ್ದು, ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂದಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಯಿದುಕೊಳ್ಳದೆ ಕೋವಿಡ್ ನಿಯಮಗಳನ್ನು ಮರೆತಂತಾಗಿತ್ತು.
ಸಾಮಾಜಿಕ ಅಂತರವನ್ನು ಇಟ್ಟುಕೊಳ್ಳುವುದರ ಜೊತೆಗೆ ಮಾಸ್ಕ್ ಬಳಕೆ ಮಾಡದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ. ಅದಲ್ಲದೇ ಜನಸಾಮಾನ್ಯರಿಗೊಂದು ನ್ಯಾಯ, ಮುಖಂಡರಿಗೊಂದು ನ್ಯಾಯ ಸರಿಯಲ್ಲ ಎಂಬುವುದು ಜನಸಾಮಾನ್ಯರ ವಾದ.
You must log in to post a comment.