ಮಲಯಾಳಂನ ಖ್ಯಾತ ನಟಿ ಅಪಹರಣ ಪ್ರಕರಣ, ತನಿಖಾಧಿಕಾರಿಗೆ ಜೀವ ಬೆದರಿಕೆ ನೀಡಿದ ಹಿನ್ನೆಲೆ : ನಟ ದಿಲೀಪ್ ಮೇಲೆ ಹೊಸ ಕೇಸ್ ದಾಖಲು

ಕೇರಳ ಪೊಲೀಸರ ಅಪರಾಧ ವಿಭಾಗವು ಮಲಯಾಳಂ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಪ್ರಕರಣವೊಂದನ್ನು ದಾಖಲಿಸಿದ್ದಾರೆ. ಹಾಗಾಗಿ 2017 ಮಲಯಾಳಂ ನಟಿ ಅಪಹರಣ ಪ್ರಕರಣಕ್ಕೆ ಹೊಸ ತಿರುವೊಂದು ದೊರಕಿದೆ.

ಮಲಯಾಳಂ ನಟ ದಿಲೀಪ್ ಮತ್ತು ಇತರ ಐವರ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಿದ್ದಾರೆ.

ಪ್ರಕರಣದ ತನಿಖೆ ಮಾಡುತ್ತಿದ್ದ ಅಧಿಕಾರಿಗಳಿಗೆ ನಟ ದಿಲೀಪ್ ಮತ್ತು ಆತನ ಕಡೆಯವರು ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ನಿರ್ದೇಶಕ ಬಾಲಚಂದ್ರ ಕುಮಾರ್, ಮಲಯಾಳಂ ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ ಬೆನ್ನಲ್ಲೇ ಪೊಲೀಸರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ನಿರ್ದೇಶಕ ಬಾಲಚಂದ್ರ ಅವರು ದಿಲೀಪ್ ಮತ್ತು ಆತನ ಕಡೆಯ ವ್ಯಕ್ತಿಗಳು ತನಿಖಾಧಿಕಾರಿಯ ಜೀವಕ್ಕೆ ಅಪಾಯ ಉಂಟುಮಾಡಲು ಪ್ರಯತ್ನಿಸಿದ್ದರು ಎಂದು ಹೇಳಿದ್ದರು. ಈ ಹೇಳಿಕೆ 2017 ರಲ್ಲಿ ನಡೆದ ನಟಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಈ ಹೇಳಿಕೆಯ ಹಲವಾರು ಆಡಿಯೋ‌ ತುಣುಕುಗಳು ಹೊರಬಂದವು. ಈ ಆಡಿಯೋಗಳನ್ನು ಆಧಾರವಾಗಿಟ್ಟುಕೊಂಡು ಪಿತೂರಿ ನಡೆಸಿ, ಬೆದರಿಕೆ ಹಾಕಿದ್ದಕ್ಕಾಗಿ ದಿಲೀಪ್ ಮತ್ತು ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಲಯಾಳಂ ನಟ ದಿಲೀಪ್ ಈ ಪ್ರಕರಣದ ಎ1, ಅಂದರೆ ಮೊದಲ ಆರೋಪಿ, ಅವರ ಸಹೋದರ ಅನೂಪ್ ಎ 2, ಸೋದರ ಮಾವ ಎ 3 ಆರೋಪಿಗಳಾಗಿದ್ದಾರೆ.

2017 ರಲ್ಲಿ ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ಚಲಿಸುತ್ತಿದ್ದ ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಾಗ, ಇಡೀ ದೇಶವೇ ಬೆಚ್ಚಿಬಿದ್ದಿತ್ತು. ನಟ ದಿಲೀಪ್ ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದು, ಹಲವು ವಾರಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಐದು ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದೆ. ಜ.5 ರಂದು ಕೇರಳ ಸರಕಾರವು ಆರು ತಿಂಗಳ ಕಾಲ ವಿಸ್ತರಣೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

Leave A Reply

Your email address will not be published.