ಆಸ್ತಿಗಾಗಿ ಮನೆಯಿಂದ ಹೊರಹಾಕಿದ ಮಕ್ಕಳು, ಸೊಸೆಯಂದಿರಿಗೆ ತಕ್ಕ ಪಾಠ ಕಲಿಸಿದ ಹೆತ್ತ ತಾಯಿ!!!

ಇತ್ತೀಚೆಗೆ ಇಳಿ ವಯಸ್ಸಿನಲ್ಲಿರುವ ತಂದೆ ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳೋದಿಲ್ಲ ಎಂಬ ಸಮಸ್ಯೆ, ದೂರುಗಳು ಹೆಚ್ಚಾಗಿ ಕೇಳಿಬರುತ್ತಿದೆ. ತಮ್ಮ ಮಕ್ಕಳಿಗಾಗಿ ದುಡಿಯುವ, ಆಸ್ತಿ ಮಾಡುವ ಹೆತ್ತವರನ್ನು ಅವರದ್ದೇ ಮನೆಯಿಂದ ಹೊರಹಾಕಿರುವ ಎಷ್ಟೋ ಘಟನೆಗಳು ನಮ್ಮ ಕಣ್ಣ ಮುಂದೆ ಸಾಕಷ್ಟಿದೆ.

ಈ ರೀತಿ ತಂದೆ ತಾಯಿಗಳನ್ನು ನಡು ದಾರಿಯಲ್ಲಿ ಬಿಟ್ಟು ಕರುಣೆಯಿಲ್ಲದೆ ವರ್ತಿಸುವ ಮಕ್ಕಳಿಗೆ ಬಿಸಿ ಮುಟ್ಟಿಸುವಂತಹ ಸುದ್ದಿ ಇದು.

ಈ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ ನಡೆದಿದೆ. ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡು ತಾಯಿಯನ್ನು ಮಕ್ಕಳು ಹೊರಹಾಕಿದ್ದಾರೆ.ಈಗ ಈ ತಾಯಿ ತನ್ನ ಮಕ್ಕಳ ವಿರುದ್ಧವೇ ಹೋರಾಡಿ ಜಯ ಸಾಧಿಸಿದ್ದಾರೆ. ಈ ಕುರಿತು ಇತ್ತೀಚೆಗಷ್ಟೇ ಹಾವೇರಿ ಜಿಲ್ಲೆಯ ಕಂದಾಯ ಅಧಿಕಾರಿಗಳು ವೃದ್ಧ ತಾಯಿಯ ಪರವಾಗಿ ತೀರ್ಪು ನೀಡಿದ್ದಾರೆ.

ಸವಣೂರು ಎಸಿ ಅನ್ನಪೂರ್ಣ ಮುದಕಮ್ಮನವರ್ ಅವರು ಜನವರಿ 6 ರಂದು ತಾಯಿಗೆ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ – 2007 ರ ಅಡಿಯಲ್ಲಿ ಆಸ್ತಿಯಲ್ಲಿ ಪಾಲು ಮಂಜೂರು ಮಾಡಿದರು. ಹಾವೇರಿ ಜಿಲ್ಲೆಗಳ ಹಂಗಳ ತಾಲೂಕಿನ ವೀರಾಪುರ ಗ್ರಾಮದ 76 ವರ್ಷದ ಮಹಿಳೆ ಪ್ರೇಮವ್ವ ಹವಳಣ್ಣವರ್ ಅವರನ್ನು ಇಬ್ಬರೂ ಪುತ್ರರು ದೂರ ಮಾಡಿದ್ದಾರೆ. ಎಸಿ ಮತ್ತು ತಹಶೀಲ್ದಾರ್ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾನೂನು ಹೋರಾಟದ ನಂತರ ತಾಯಿ ತನ್ನ ಮಕ್ಕಳಿಂದ ಆಸ್ತಿಯಲ್ಲಿ ಪಾಲು ಪಡೆದಿದ್ದಾರೆ.

ಮಕ್ಕಳಾದ ಧನಿಕ್ ಕುಮಾರ್ ಮತ್ತು ಸಂತೋಷ್ ಇವರುಗಳು ಸಂಚಿನಿಂದ ಆಸ್ತಿ ದಾಖಲೆಗಳಲ್ಲಿ ತಮ್ಮ ಹೆಸರಿಲ್ಲದ ಕಾರಣ ಮ್ಯುಟೇಶನ್ ರದ್ದುಗೊಳಿಸುವಂತೆ ಸವಣೂರು ಎಸಿಗೆ ಪ್ರೇಮವ್ವ ಮನವಿ ಮಾಡಿದ್ದಾರೆ. ತನ್ನ ಪತಿ ಶ್ರೀಕಾಂತ್ ಅವರ ಮರಣದ ನಂತರ ತನ್ನ ಹೆಣ್ಣುಮಕ್ಕಳು, ಗಂಡುಮಕ್ಕಳು ಮತ್ತು ಸೊಸೆಯಂದಿರು ಸೇರಿ ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಇಲ್ಲಿನ ಇಡಾರಿ ಸಂಸ್ಥೆಯ ಆರೈಕೆಯಲ್ಲಿದ್ದೆ ಎಂದು ಪ್ರೇಮವ್ವ ತಿಳಿಸಿದ್ದರು. ಎಸಿ ಅನ್ನಪೂರ್ಣ ಅವರು ವೃದ್ಧೆಯ ವಾದವನ್ನು ಆಲಿಸಿ ಈ ಹಿಂದೆ ಮಾಡಿದ್ದ ಮ್ಯುಟೇಶನ್ ರದ್ದುಗೊಳಿಸಿದರು.

ಹಂಗಲ್ ತಹಶಿಲ್ದಾರ್ ಯರ್ರಿಸ್ವಾಮಿ ಅವರು ಜಮೀನು ಹಾಗೂ‌ ಮನೆಯ ದಾಖಲೆಯಲ್ಲಿ ಪ್ರೇಮವ್ವ ಹೆಸರನ್ನು ಸೇರಿಸುವಂತೆ ಆದೇಶಿಸಿದ್ದಾರೆ.

ತಹಶೀಲ್ದಾರ್ ಯರ್ರಿಸ್ವಾಮಿ ಮಾತನಾಡಿ, ಪತಿಯ ಆಸ್ತಿಯಲ್ಲಿ ಮಹಿಳೆಗೆ ಹಕ್ಕಿದೆ. ಆದರೆ ಈ ಪ್ರಕರಣದಲ್ಲಿ ತಂದೆ ತೀರಿಕೊಂಡ ನಂತರ ಅವರ ಪುತ್ರರು ಅಕ್ರಮವಾಗಿ ಆಸ್ತಿ ದಾಖಲೆಯಲ್ಲಿ ಪ್ರೇಮವ್ವನ ಹೆಸರನ್ನು ಬಿಟ್ಟು ಬಿಟ್ಟಿದ್ದರು. ಹೀಗಾಗಿ ಮಹಿಳೆ ಪರವಾಗಿ ಆದೇಶ ನೀಡಲಾಗಿದೆ. ಪ್ರೇಮವ್ವ ಪ್ರಕರಣದಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ – 2007 ಅನ್ನು ಉಲ್ಲಂಘಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ನ್ಯಾಯ ಕೊಡಿಸಿದ್ದೇವೆ ಎಂದು ತಿಳಿಸಿದರು.

1 Comment
  1. e-commerce says

    Wow, amazing weblog structure! How lengthy have you been blogging for?
    you made blogging look easy. The total look of your website is magnificent, let alone the content material!
    You can see similar here sklep internetowy

Leave A Reply

Your email address will not be published.