ರಾಜ್ಯದ ಜನತೆಗೆ ಸಿಹಿಸುದ್ದಿ | ಸರ್ಕಾರಿ ಸೌಲಭ್ಯ ಪಡೆಯಲು ಪ್ರತೀ ಕುಟುಂಬಕ್ಕೆ ಬರಲಿದೆ ಆಧಾರ್ ಮಾದರಿಯ ‘ಕುಟುಂಬ ಐಡಿ’ !!

ಪ್ರತಿಯೊಬ್ಬ ಪ್ರಜೆಗೂ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಇದರಿಂದ ವ್ಯಕ್ತಿಯ ಎಲ್ಲಾ ಆಧಾರಗಳನ್ನು ಗುರುತುಗಳನ್ನು ತಿಳಿಯಬಹುದು.ಇದೇ ರೀತಿ ಇದೀಗ ಆಧಾರ್ ಸಂಖ್ಯೆ ಮಾದರಿಯಲ್ಲಿಯೇ ಪ್ರತಿ ಕುಟುಂಬಕ್ಕೆ ಒಂದು ಐಡಿ ನಂಬರ್ ನೀಡಲಿದ್ದು, ಇದರಿಂದ ಸರ್ಕಾರದ ಸೇವೆ, ಸೌಲಭ್ಯ ಪಡೆಯಬಹುದಾಗಿದೆ.

ಇ -ಆಡಳಿತ ಕೇಂದ್ರ ಕುಟುಂಬಕ್ಕೆ ಒಂದು ಐಡಿ ನಂಬರ್ ನೀಡಲು ಮುಂದಾಗಿದೆ.ಇದರಿಂದ ಎಲ್ಲಾ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಬಹುದು.ಅಲ್ಲದೆ ಇನ್ನು ಮುಂದೆ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕಿಲ್ಲ. ಬದಲಿಗೆ ಇದೊಂದು ನಂಬರ್ ಮೂಲಕ ಸೌಲಭ್ಯ ಪಡೆಯಬಹುದಾಗಿದೆ.

ಈಗಾಗಲೇ ಪಡಿತರ ಚೀಟಿ ಹೊಂದಿದವರಿಗೆ ಕುಟುಂಬದ ಗುರುತಿನ ಸಂಖ್ಯೆ ನೀಡಲಾಗಿದೆ. ಪಡಿತರ ಚೀಟಿ ಇಲ್ಲದವರಿಗೂ ಕೂಡ ಕುಟುಂಬದ ಐಡಿ ನಂಬರ್ ಮಾಡಿಕೊಡಲಾಗುವುದು.ರಾಜ್ಯದ ಜನರಿಗೆ ಐಡಿ ಸಂಖ್ಯೆ ಒದಗಿಸಲಿದ್ದು, ಇದರಿಂದ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ, ವಸತಿ ಸೌಲಭ್ಯ, ವಿದ್ಯಾರ್ಥಿ ವೇತನ, ಕೃಷಿ ಸೌಲಭ್ಯ, ವಾಹನ ನೋಂದಣಿ, ವಾಹನ ಚಾಲನಾ ಪರವಾನಿಗೆ ಮೊದಲಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

www.kutumba.karnataka.gov.in ವೆಬ್ಸೈಟ್ ನಲ್ಲಿ ಮಾಹಿತಿ ಅಪ್ಲೋಡ್ ಮಾಡಿ ಕುಟುಂಬ ಸದಸ್ಯರ ವಿವರ ನೀಡಿ ಐಡಿ ಪಡೆಯಬಹುದು. ಎಲ್ಲಾ ನಾಗರೀಕ ಸೇವಾ ಕೇಂದ್ರಗಳಲ್ಲಿ ಉಚಿತ ಸೇವೆ ಇರುತ್ತದೆ ಎಂದು ಹೇಳಲಾಗಿದೆ.

Leave A Reply

Your email address will not be published.