ಜಪಾನ್ ರೂಪಿಸಿದೆ ಈ ಹೊಸ ತಂತ್ರಜ್ಞಾನ|ಟಿವಿ ಪರದೆ ಮೇಲೆ ಕಾಣಿಕೊಳ್ಳುವ ಆಹಾರವನ್ನು ಸ್ಕ್ರೀನ್ ನೆಕ್ಕಿ ಟೇಸ್ಟ್ ಮಾಡಬಹುದಂತೆ|ಈ ‘ಟೇಸ್ಟ್ ಟಿವಿ’ಯ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

ಮುಂದೊಂದು ದಿನ ಹೀಗೆಲ್ಲಾ ಆಗಬಹುದೆಂದು ಸಣ್ಣ ಊಹೆ ಕೂಡ ಇರಲಿಕ್ಕಿಲ್ಲ, ಅಂಥಹಾ ತಂತ್ರಜ್ಞಾನಗಳು ನಮ್ಮ ಕಣ್ಣಮುಂದೆ ಬರ್ತಿವೆ. ಕೇವಲ ಕನಸಿನಲ್ಲಿ ಮಾತ್ರ ಇಂಥದ್ದೆಲ್ಲಾ ಸಾಧ್ಯ ಎಂದುಕೊಂಡರೆ ನಿಜವಾಗಿಯೂ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಇದೀಗ ಅಂಥ ಒಂದು ಅಸಾಧ್ಯ ಎನ್ನುವ ತಂತ್ರಜ್ಞಾನವೊಂದನ್ನು ರೂಪಿಸಲಾಗಿದೆ. ಅದೇನೆಂದರೆ ಟಿ.ವಿ ಪರದೆಯ ಮೇಲೆ ಕಾಣಿಸಿಕೊಳ್ಳುವ ಆಹಾರಗಳನ್ನು ಅದರ ಸ್ಕ್ರೀನ್ ನೆಕ್ಕಿ ಟೇಸ್ಟ್ ಮಾಡಬಹುದಾಗಿದೆ!!

ಹೊಸಹೊಸ ತಂತ್ರಜ್ಞಾನ ಎಂದಾಕ್ಷಣ ನೆನಪಾಗುವುದು ಜಪಾನಿಗರೇ ಎನ್ನುವುದು ಹೊಸ ವಿಷಯವೇನಲ್ಲ. ಈಗಲೂ ಜಪಾನಿನ ತಂತ್ರಜ್ಞರು ಇಂಥದ್ದೊಂದು ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ.

ಮೊಬೈಲ್‌ಗಳಲ್ಲಿ ತಿಂಡಿ ತಿನಿಸುಗಳನ್ನು ನೋಡಿದಾಗ, ಅವುಗಳನ್ನೆಲ್ಲಾ ಡೌನ್‌ಲೋಡ್ ಮಾಡಿಕೊಂಡು ತಿನ್ನುವ ಹಾಗೆ ಆಗಬಾರದಾ ಎಂದು ಬಹುತೇಕ ಎಲ್ಲರೂ ಅಂದುಕೊಂಡಿರುವುದು ಉಂಟು. ಅಂಥಹ ತಂತ್ರಜ್ಞಾನ ಮುಂದೊಂದು ದಿನ ಬಂದರೂ ಅಚ್ಚರಿಯಿಲ್ಲ. ಆದರೆ ಅದರ ಆರಂಭಿಕ ಹಂತ ಎನ್ನುವಂತೆ ಟಿ.ವಿ.ಯಲ್ಲಿ ಇರುವ ಆಹಾರಗಳನ್ನು ಟೇಸ್ಟ್ ಮಾಡುವ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ.

ಜಪಾನ್‌ನ ಮೀಜಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹೋಮಿ ಮಿಯಾಶೀಥಾ ಎನ್ನುವವರು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಟಿವಿ ಪರದೆಯ ಮೇಲೆ ಬರುವ ಹಲವು ವಿಧವಾದ ಆಹಾರದ ರುಚಿಗಳನ್ನು ಅದರ ಪರದೆಯನ್ನು ನೆಕ್ಕುವ ಮೂಲಕ ಟೇಸ್ಟ್ ಮಾಡಬಹುದು ಎನ್ನುತ್ತಾರೆ ಇವರು.

ಈ ತಂತ್ರಜ್ಞಾನಕ್ಕೆ ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಹೆಸರು ಇಡಲಾಗಿದೆ. ಒಂದು ನಿರ್ದಿಷ್ಟ ಆಹಾರದ ರುಚಿ ನೀಡುವುದಕ್ಕಾಗಿ 10 ಫೇವರ್ ಡಬ್ಬಿಗಳನ್ನು ಬಳಕೆ ಮಾಡಲಾಗುತ್ತದೆ. ಇದು ನಂತರದಲ್ಲಿ ಟಿ.ವಿ ಪರದೆಯ ಮೇಲೆ ಮೂಡಲಿದ್ದು ಬಳಕೆದಾರರು ರುಚಿ ನೋಡಬಹುದಾಗಿದೆ. ಮನೆಯಲ್ಲೇ ಕುಳಿತು ರೆಸ್ಟೋರೆಂಟ್‌ಗಳಲ್ಲಿ ತಿನ್ನುವ ಅನುಭವವನ್ನು ನೀಡುವುದಕ್ಕಾಗಿ ಇಂಥದ್ದೊಂದು ಟಿವಿಯನ್ನು ತಯಾರಿಸಲಾಗಿದೆ. ಇದಕ್ಕಾಗಿ 30 ವಿದ್ಯಾರ್ಥಿಗಳ ತಂಡ ಒಂದು ವರ್ಷದವರೆಗೆ ಅವಿರಿತವಾಗಿ ದುಡಿದಿದೆ ಎಂದಿದ್ದಾರೆ.

ಅಂದಹಾಗೆ ಈ ಟಿ.ವಿಯ ಬೆಲೆ 875 ಡಾಲರ್ ಅಂತೆ. ರೂಪಾಯಿಗಳಲ್ಲಿ ಹೇಳುವುದಾದರೆ ಸುಮಾರು 65,700 ರೂಪಾಯಿಗಳು. ಹೀಗೆ ಅಭಿವೃದ್ಧಿ ಪಡಿಸಿರುವ ಟಿ.ವಿಯಲ್ಲಿ ಟೇಸ್ಟಿಂಗ್ ಗೇಮ್‌ಗಳು, ಕ್ವಿಜ್ ಸೇರಿದಂತೆ ಹಲವಾರು ಆ್ಯಪ್‌ಗಳನ್ನು ನೀಡಲಾಗಿದೆ.

Leave A Reply

Your email address will not be published.