‘ಸ್ಟೇಟ್ ಐಕಾನ್ ‘ ಹುದ್ದೆಗೆ ಗುಡ್ ಬೈ ಹೇಳಿದ ನಟ ಸೋನು ಸೂದ್ : ಕಾರಣವೇನು ?

ಚಂಡೀಗಢ : ಕೊರೊನಾ ಸಮಯದಲ್ಲಿ ಹಾಗೂ ಲಾಕ್ ಡೌನ್ ಸಮಯದಲ್ಲಿ ನಟ ಸೋನು ಸೂದ್ ಅವರು ಅನೇಕರಿಗೆ ಸಹಾಯ ಮಾಡಿದ್ದು ಎಲ್ಲರಿಗೂ ತಿಳಿದ ವಿಚಾರ. ಅನೇಕ ವಲಸೆ ಕೂಲಿಕಾರ್ಮಿಕರಿಗೆ ನೆರವು ನೀಡಿದ್ದು, ಲಾಕ್ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ದೊರಕಿಸಿಕೊಟ್ಟದ್ದು ಇದೆಲ್ಲ ಸೋನು ಸೂದ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು.

Ad Widget

ಆದರೆ ಈಗ ಸೋನು ಸೂದ್ ಅವರು ಟ್ವಿಟ್ಟರ್ ನಲ್ಲಿ ಪಂಜಾಬ್ ‘ ಸ್ಟೇಟ್ ಐಕಾನ್ ‘ ಆಗಿ ಮುಂದುವರಿಯುವುದಿಲ್ಲ ಎಂದು ಘೋಷಿಸಿದ್ದಾರೆ.

Ad Widget . . Ad Widget . Ad Widget .
Ad Widget

” ಸ್ಟೇಟ್ ಐಕಾನ್ ಆಗಿ ನಾನು ನನ್ನ ಪ್ರಯಾಣ ಕೊನೆಗೊಳಿಸುತ್ತಿದ್ದೇನೆ. ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ. ಚುನಾವಣಾ ಆಯೋಗದಿಂದ ಸಮಾಲೋಚಿಸಿ ಜಂಟಿಯಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಸಹೋದರಿ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ” ಎಂದು ಸೋನು ಸೂದ್ ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

Ad Widget
Ad Widget Ad Widget

ಕಳೆದ ವರ್ಷ ಪಂಜಾಬ್ ಚುನಾವಣೆಯ ಭಾಗವಾಗಿ ‘ ಸ್ಟೇಟ್ ಐಕಾನ್’ ಆಗಿ ಸೋನು ಸೂದ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಸಹೋದರಿ ಮಾಳವಿಕಾ ಸೂದ್ ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ಸ್ಟೇಟ್ ಐಕಾನ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: