ಪೊಲೀಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಜೈಲಿನಲ್ಲಿ ಕದ್ದು ಉಪಯೋಗಿಸುತ್ತಿದ್ದ ಮೊಬೈಲನ್ನೇ ನುಂಗಿದ ಖೈದಿ !!

ಕಳ್ಳರು ಪೊಲೀಸರಿಂದ ತಪ್ಪಿಸಿಕೊಳ್ಳಲು ಏನು ಬೇಕಾದರೂ ಮಾಡಲು ರೆಡಿ ಇರುತ್ತಾರೆ. ಹಾಗೆಯೇ ಇಲ್ಲಿ ಈಗಾಗಲೇ ಜೈಲು ಪಾಲಾಗಿರುವ ಖೈದಿಯೊಬ್ಬ‌ ಅಧಿಕಾರಿಗಳ ಕಣ್ಣ್ತಪ್ಪಿಸಲು ಮೊಬೈಲ್ ನುಂಗಿರುವ ಘಟನೆ ದೆಹಲಿಯ ತಿಹಾರ್ ಜೈಲಿನಲ್ಲಿ ನಡೆದಿದೆ.

ಖೈದಿ ಅಕ್ರಮವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದನು. ಜನವರಿ 5ರಂದು ಜೈಲು ನಂಬರ್ 1ಕ್ಕೆ ಪೊಲೀಸ್‌ ಅಧಿಕಾರಿಗಳು ಮೊಬೈಲ್ ಪರಿಶೀಲನೆಗೆ ಬಂದಾಗ ಹೆದರಿ ಬೇರೆ ದಾರಿ ಕಾಣದೆ ಮೊಬೈಲ್ ನುಂಗಿದ್ದಾನೆ. ಆತನನ್ನು ಕೂಡಲೇ ಡಿಡಿಯು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಆರೋಗ್ಯವಾಗಿದ್ದಾನೆ, ಆದರೆ ಮೊಬೈಲ್ ಫೋನ್ ಇನ್ನೂ ಹೊಟ್ಟೆಯಲ್ಲಿಯೇ ಇದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

ತಿಹಾರ್ ಜೈಲು ಶೀಘ್ರದಲ್ಲೇ ಎರಡು ಎಕ್ಸ್-ರೇ ಆಧಾರಿತ ಮಾನವ ದೇಹ ಸ್ಕ್ಯಾನರ್‌ಗಳನ್ನು ಹಾಕಲಾಗುತ್ತದೆ. ಆಗ ಜೈಲು ಆವರಣದೊಳಗೆ ಅಕ್ರಮ ವಸ್ತುಗಳು ಮತ್ತು ಗ್ಯಾಜೆಟ್‌ಗಳು ಒಳನುಸುಳುವಿಕೆಯನ್ನು ತಡೆಯುಲಾಗುತ್ತದೆ. ಮೊಬೈಲ್ ಬಳಕೆಯನ್ನು ತಡೆಯಲು ಹೊಸ ತಂತ್ರಜ್ಞಾನ ಮತ್ತು ಸಿಗ್ನಲ್ ನಿರ್ಬಂಧಿಸುವ ಟವರ್‌ಗಳನ್ನು ಹಾಕಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.