ಕಾರ್ ನ ಡಿಕ್ಕಿಯಲ್ಲಿ ಪುಟ್ಟ ಮಗನನ್ನು ಕ್ವಾರಂಟೈನ್ ಮಾಡಿ ಕೂಡಿ ಹಾಕಿದ ಹೆತ್ತ ತಾಯಿ !| ಕೊರೋನಾ ಜತೆ ರಾತ್ರಿ ಹೊತ್ತಲ್ಲಿ ಕಂಗಾಲಾದ ಕಂದ

ಅಮೆರಿಕಾದ ಟೆಕ್ಸಾಸ್ ನಲ್ಲಿ ಈ ರೀತಿಯ ಒಂದು ಅಮಾನವೀಯ ಘಟನೆ ನಡೆದಿದೆ. ಹೆತ್ತ ತಾಯಿಯೊಬ್ಬಳು ತಾನು ಹೆತ್ತ ಮಗನಿಂದ ತನಗೆ ಸೋಂಕು ಬರಬಹುದು ಎಂದು ಕಾರಿನ ಡಿಕ್ಕಿಯಲ್ಲಿ ಕೂಡಿ ಹಾಕಿದ್ದಾಳೆ.

Ad Widget

13 ವರ್ಷದ ಮಗನಿಗೆ ಕೋವಿಡ್ ಸೋಂಕು ದೃಢಗೊಂಡಿತ್ತು. ಈ ಸುದ್ದಿ ತಿಳಿದ ತಾಯಿ 41 ವರ್ಷದ ಸರಾ ಬೀಮ್ ತನಗೂ ಈ ಸೋಂಕು ಹರಡಬಹುದು ಎಂದು ಹೆದರಿ ಕಾರ್ ಡಿಕ್ಕಿಯಲ್ಲಿ ಕೂಡಿ ಹಾಕಿದ್ದಾಳೆ.

Ad Widget . . Ad Widget . Ad Widget .
Ad Widget

ಕಾರ್ ಶೆಡ್ ನಲ್ಲಿ ಮಗುವಿನ ಆಕ್ರಂದನ ಕೇಳಿ ಸ್ಥಳೀಯ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಮಗು ಡಿಕ್ಕಿಯಲ್ಲಿ ಮಲಗಿದ್ದು ಪತ್ತೆಯಾಗಿದೆ.

Ad Widget
Ad Widget Ad Widget

ಇದೇ ವೇಳೆ ಬಾಲಕನನ್ನು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಲು ಅನುಮತಿ ನೀಡುವವರೆಗೆ ಯಾವುದೇ ಪರೀಕ್ಷೆಯನ್ನು ಮಾಡಲಾಗುವುದಿಲ್ಲ ಎಂದು ಆರೋಗ್ಯ ಕಾರ್ಯಕರ್ತರು ಪಟ್ಟು ಹಿಡಿದರು. ಕಳೆದ ಒಂದು ವಾರದ ಹಿಂದೆ ಕೂಡಾ ಇದೇ ರೀತಿಯಾಗಿ ಮಗನನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಆಸ್ಪತ್ರೆಗೆ ಕರೆದುಕೊಂಡ ಹೋದ ಬಗ್ಗೆ ದೂರು ದಾಖಲಾಗಿದ್ದು, ಈ ಸಂಬಂಧ ಈ ಮಹಿಳೆಯ ಮೇಲೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.

ಇಷ್ಟೆಲ್ಲದರ ಮಧ್ಯೆ ಮಗುವಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ.

Leave a Reply

error: Content is protected !!
Scroll to Top
%d bloggers like this: