ಜ್ಯೋತಿಷಿಯ ಮಾತು ಕೇಳಿ ತನ್ನ ಮಗಳಿಗೆ ವಿಷವುಣಿಸಿ, ತಾಯಿಯೂ ಆತ್ಮಹತ್ಯೆಗೆ ಶರಣು |ಅಷ್ಟಕ್ಕೂ ಜ್ಯೋತಿಷಿ ಹೇಳಿದ ಮಾತೇನು ಗೊತ್ತೇ?

ನೂರರಲ್ಲಿ ಒಬ್ಬರು ಎಂಬಂತೆ ಕೆಲವೊಂದು ಜನರು ಜ್ಯೋತಿಷಿಗಳು ಮಂತ್ರವಾದಿಗಳ ಬಳಿ ತೆರಳಿ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುತ್ತಾರೆ.ಅವರ ಮಾತನ್ನು ಅನುಸರಿಸಿ ಅದನ್ನೇ ನಂಬಿರುತ್ತಾರೆ.ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೊಂಡು ಬಂದ ಅಮಾಯಕ ಜನರನ್ನು ತಮ್ಮ ಬಲೆಗೆ ಬೀಳಿಸಿ ದುಡ್ಡು ಮಾಡಲು ನೋಡುವ ಜ್ಯೋತಿಷಿಗಳೇ ಹೆಚ್ಚು. ಇದಕ್ಕೆ ಉದಾಹರಣೆ ಎಂಬಂತೆ ಅದೆಷ್ಟೋ ಘಟನೆಗಳು ನಡೆದಿದೆ.ಆದ್ರೆ ಇಲ್ಲೊಂದು ಕಡೆ ಇದಕ್ಕೆಲ್ಲ ಮಿಗಿಲಾಗಿ,ತಾಯಿಯೊಬ್ಬಳು ಜ್ಯೋತಿಷಿಯ ಮಾತು ಕೇಳಿ ತನ್ನ ಪ್ರಾಣ ಮಾತ್ರವಲ್ಲದೆ ಮಗಳನ್ನೂ ಕೊಂದ ಘಟನೆ ಬೆಳಕಿಗೆ ಬಂದಿದೆ.

Ad Widget

ಈ ಘಟನೆ ಕೊಯಮತ್ತೂರು ತುಡಿಯಲೂರ್ ಪಕ್ಕದಲ್ಲಿರುವ ಅಪ್ಪನಾಯಕನಪಾಳ್ಯಂ ನಡೆದಿದ್ದು,ಧನಲಕ್ಷ್ಮಿ (58) ತನ್ನವಿಕಲಚೇತನ ಮಗಳು ಸುಗನ್ಯಾ (30) ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

Ad Widget . . Ad Widget . Ad Widget . Ad Widget

Ad Widget

ಧನಲಕ್ಷ್ಮೀ ಎಂಬುವವರ ಪುತ್ರ ಶಶಿಕುಮಾರ್‌ಗೆ ಮದುವೆಯಾಗಿದ್ದು,ಸರವಣಂಪಟ್ಟಿಯಲ್ಲಿ ವಾಸಿಸುತ್ತಿದ್ದು,ತಾಯಿ ತನ್ನ ಮಗಳೊಂದಿಗೆ ಮನೆಯಲ್ಲೇ ಇದ್ದರು.ಧನಲಕ್ಷ್ಮಿ ಜ್ಯೋತಿಷಿ ಮಾತುಗಳನ್ನು ಹೆಚ್ಚಾಗಿ ನಂಬುತ್ತಿದ್ದರಿಂದ ಈ ಘಟನೆ ನಡೆದಿದೆ. ಅಷ್ಟಕ್ಕೂ ಆ ಜ್ಯೋತಿಷಿ ಹೇಳಿದ್ದಾದರೂ ಏನು ಗೊತ್ತೇ?

Ad Widget
Ad Widget Ad Widget

ಹೌದು.ಜ್ಯೋತಿಷಿ ಮಾತುಗಳನ್ನು ನಂಬುತ್ತಿದ್ದ ಧನಲಕ್ಷ್ಮೀ ಈ ಬಾರಿಯೂ ಮಾತನ್ನು ಗಂಭೀರವಾಗಿ ತೆದುಕೊಂಡಿದ್ದಾರೆ.ಜ.4ರಂದು ಮಗ ಶಶಿಕುಮಾರ್‌ಗೆ ಕಾಲ್ ಮಾಡಿ “ಜ್ಯೋತಿಷಿ ಮೂಲಕ ನನ್ನ ಬಗ್ಗೆ ತಿಳಿದಿದ್ದೇನೆ. ಅವರು ನಾನು ಕೈ ಅಥವಾ ಕಾಲುಗಳಿಲ್ಲದೇ ಬದಲಾಗುತ್ತೇನೆ ಎಂದು ಹೇಳಿದ್ದಾರೆ.ಸಹೋದರಿ ಸುಗನ್ಯಾ ಜೊತೆ ನಾನು ಸಹ ಹಾಗೇ ಬದಲಾದರೆ ನಿನಗೆ ಸಮಸ್ಯೆಗಳು ಎದುರಾಗುತ್ತವೆ. ಜ್ಯೋತಿಷಿ ಹೇಳಿದಂತೆ ಆದರೆ ನಮ್ಮನ್ನು ನೋಡಿಕೊಳ್ಳುವವರು ಯಾರೂ ಇರುವುದಿಲ್ಲ. ಹೀಗಾಗಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದುಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ತಾಯಿ ಮಾತುಗಳನ್ನು ಕೇಳಿ ಗಾಬರಿಗೊಂಡ ಶಶಿಕುಮಾರ್ ತಾಯಿಗೆ ಭರವಸೆ ಮೂಡಿಸುವ ಪ್ರಯತ್ನ ಮಾಡಿದ್ದು ಮರುದಿನ ಜ.5 ರಂದು ತಾಯಿ ಬಳಿ ಹೋಗಲು ಶಶಿಕುಮಾರ್ ನಿರ್ಧರಿಸಿದ್ದನು.ಬಳಿಕ ತನ್ನ ತಾಯಿಗೆ ಕರೆ ಮಾಡಿದ್ದರೂ ಪ್ರತಿಕ್ರಿಯೆ ಬಾರದೆ ಇದ್ದಾಗ ಗಾಬರಿಗೊಂಡು ಶಶಿಕುಮಾರ್ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು.
ಅವರು ಶಶಿ ಕುಮಾರ್ ಮನೆಗೆ ಹೋಗಿ ನೋಡಿದಾಗ ಧನಲಕ್ಷ್ಮಿ ನೇಣು ಬಿಗಿದ ಸ್ಥಿತಿಯಲ್ಲಿ ಮತ್ತು ಸಹೋದರಿ ಬಾಯಿಯಲ್ಲಿ ನೊರೆ ಬಂದು ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡಿದ್ದಾರೆ.ಮನೆಯವರು ಶಶಿಕುಮಾರ್‌ಗೆ ವಿಷಯ ತಿಳಿಸಿದ್ದು ಬಳಿಕ ಅವರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ವಶಕ್ಕೆ
ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಧನಲಕ್ಷ್ಮಿಮೊದಲು ತನ್ನ ಮಗಳಿಗೆ ವಿಷವುಣಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವುದು ಪ್ರಾಥಮಿಕ ತನಿಖೆ ಮೂಲಕ ಪೊಲೀಸರು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: