ಪಾನ್ ಕಾರ್ಡ್ ಆಧಾರ್ ಲಿಂಕ್ ಆಗದಿದ್ದರೆ ಪಾನ್ ಕಾರ್ಡ್ ನಿಷ್ಕ್ರಿಯ, 10 ಸಾವಿರ ದಂಡ

ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಅನ್ನು
ಆಧಾರ್ ಸಂಖ್ಯೆಗೆ ಜೋಡಿಸದೇ ಇದ್ದರೆ 2022ರ ಏಪ್ರಿಲ್ 1ರಿಂದ ಅಂತಹ ಪ್ಯಾನ್ ನಿಷ್ಕ್ರಿಯವಾಗಲಿದೆ.

ಪ್ಯಾನ್-ಆಧಾರ್ ಸಂಖ್ಯೆ ಜೋಡಣೆಗೆ ಗಡುವನ್ನು ಮಾರ್ಚ್ 22ರ ತನಕ ವಿಸ್ತರಿಸಲಾಗಿದ್ದು,ಇನ್ನು ಪ್ರತಿಬಾರಿ ಐಟಿ ರಿಟರ್ನ್ಸ್ ಸಲ್ಲಿಸುವಾಗ ಡೆಡ್‌ಲೈನ್ ಮಿಸ್ ಆದಾಗ ತಲಾ 10,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.

2017ರ ಜುಲೈ 1ರಂದೇ ಪ್ಯಾನ್-ಆಧಾರ್ ಜೋಡಣೆಗೆ ಆದೇಶ ಹೊರಡಿಸಲಾಗಿತ್ತು. ಐಟಿ ರಿಟರ್ನ್ಸ್ ಸಲ್ಲಿಸುವಾಗ ತೆರಿಗೆದಾರರು ಆಧಾರ್ ನಂಬರ್ ನಮೂದಿಸುವುದು ಕಡ್ಡಾಯವಾಗಿದೆ.

ಅದು ಪ್ಯಾನ್ ಜತೆಗೆ ಜೋಡಿಕೊಂಡಿರದೇ ಇದ್ದರೆ ನಿಷ್ಕ್ರಿಯವಾಗಿರುತ್ತದೆ. ಇದರಿಂದ ಮುಂದೆ ಸಂಭವಿಸಲಿರುವ ಎಲ್ಲ ಸಮಸ್ಯೆಗಳನ್ನು ಎದುರಿಸಲು ತೆರಿಗೆದಾರ ಬದ್ಧನಾಗಿರಬೇಕಾಗುತ್ತದೆ.

50,000 ರೂಪಾಯಿ ಮೇಲ್ಪಟ್ಟ ಎಲ್ಲ ವಹಿವಾಟಿಗೂ ಪ್ಯಾನ್ ನಮೂದಿಸುವುದು ಕಡ್ಡಾಯ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಸಿದೆ.

Leave A Reply

Your email address will not be published.