ರಾಜ್ಯಾದ್ಯಂತ ಹೆಣ್ಣುಮಕ್ಕಳ ತರಾತುರಿಯ ‌ವಿವಾಹಕ್ಕೆ ಮುಗಿಬಿದ್ದ ಮುಸ್ಲಿಂ ಸಮುದಾಯ !! | ಹೊಸ ಮಸೂದೆ ಜಾರಿಯ ಭೀತಿಯಿಂದ ಎದ್ದೋ-ಬಿದ್ದೋ ಮದುವೆ ಮಾಡುತ್ತಿದ್ದಾರೆ ಪೋಷಕರು

ಇತ್ತೀಚಿಗೆ ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸನ್ನು 18‌ ರಿಂದ 21ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ ಹಿನ್ನೆಲೆಯಲ್ಲಿ ಮುಸ್ಲಿಮರು ತರಾತುರಿಯಾಗಿ ಹೆಣ್ಣು ಮಕ್ಕಳ ಮದುವೆ ಮಾಡುವ ಕೆಲಸಕ್ಕೆ ಇಳಿದಿದ್ದಾರೆ.

ಕೇಂದ್ರ ಸರ್ಕಾರ ಮಹಿಳೆಯರ ವಿವಾಹದ ಕಾನೂನುಬದ್ಧ ವಯೋಮಿತಿ 18 ರಿಂದ 21 ವರ್ಷಕ್ಕೆ ಏರಿಕೆ ಮಾಡಲು ಪ್ರಸ್ತಾಪ ಮಾಡಿದೆ. ಈ ಬೆನ್ನಲ್ಲೇ ತೆಲಂಗಾಣ ರಾಜ್ಯಾದ್ಯಂತ ಮುಸ್ಲಿಂ ಸಮುದಾಯ ತಮ್ಮ ಹೆಣ್ಣು ಮಕ್ಕಳ ವಿವಾಹಕ್ಕಾಗಿ ಮುಗಿಬಿದ್ದಿವೆ.

ಕಳೆದ ತಿಂಗಳು ಸಂಸತ್ತಿನಲ್ಲಿ ಬಾಲ್ಯ ವಿವಾಹ ತಿದ್ದುಪಡಿ ಕಾಯ್ದೆ 2021ನ್ನು ಮಂಡಿಸಲಾಗಿತ್ತು. ವಿರೋಧ ಪಕ್ಷಗಳು ಆಕ್ಷೇಪಿಸಿದ ಕಾರಣ ಈ ಮಸೂದೆಯನ್ನು ಆಯ್ಕೆ ಸಮಿತಿಗೆ ರವಾನಿಸಲಾದರೂ ಮುಂಬರುವ ಅಧಿವೇಶನದಲ್ಲಿ ಇದಕ್ಕೆ ಒಪ್ಪಿಗೆ ಸಿಗಲಿದೆ ಎನ್ನುವ ಭೀತಿಯಿಂದ ಮುಂದಿನ ವರ್ಷ ನಿಗದಿಯಾದ ವಿವಾಹವನ್ನು ಕೂಡಲೇ ಮಾಡಲು ಪಾಲಕರು ಮುಂದಾಗುತ್ತಿದ್ದಾರೆ.

ಈ ಹಿಂದೆ ದಿನಕ್ಕೆ 3 ರಿಂದ 4 ವಿವಾಹಗಳು ಜರುಗುತ್ತಿದ್ದವು. ಆದರೆ ಇದೀಗ ಹಲವಾರು ಖಾಜಿಗಳು ದಿನಕ್ಕೆ 10 ರಿಂದ 20 ವಿವಾಹಗಳನ್ನು ಮಾಡಿಸುತ್ತಿದ್ದಾರೆ. ವಧುವಿನ ಪಾಲಕರು ವರನ ಮನೆಯವರೊಂದಿಗೆ ಸೇರಿ ಕೇವಲ ಕಾನೂನಾತ್ಮಕವಾಗಿ ವಿವಾಹದ ಪ್ರಕ್ರಿಯೆಯನ್ನು ಮುಗಿಸಿಕೊಳ್ಳುತ್ತಿದ್ದಾರೆ. ಆದರೆ ಸಾಂಪ್ರದಾಯಿಕ ಆಚರಣೆಗಳನ್ನು ಪೂರ್ವ ನಿಗದಿ ಸಮಯದಲ್ಲೇ ಮಾಡಿಕೊಳ್ಳುತ್ತಿದ್ದಾರೆ.

Leave A Reply

Your email address will not be published.