ಚೀನಾ : ಹಣ್ಣಿನಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ !

ಚೀನಾ ದೇಶದಲ್ಲಿ ವಿಯೆಟ್ನಾಂನಿಂದ ಆಮದಾಗುವ ಹಣ್ಣುಗಳಲ್ಲಿ ಕೊರೊನಾ ವೈರಸ್ ಕುರುಹುಗಳು ಪತ್ತೆಯಾದ ನಂತರ ಚೀನಾದ ಅಧಿಕಾರಿಗಳು ಹಲವಾರು ಸೂಪರ್ ಮಾರ್ಕೆಟ್‌ಗಳನ್ನು ಲಾಕ್ ಮಾಡಿದ್ದಾರೆ.

ರೋಜಿಯಾಂಗ್ ಮತ್ತು ಜಿಯಾಂಗ್ಲಿ ಪ್ರಾಂತ್ಯಗಳ ಕನಿಷ್ಠ ಒಂಬತ್ತು ನಗರಗಳು ವಿಯೆಟ್ನಾಂನಿಂದ ಆಮದು ಮಾಡಿಕೊಂಡ ಡ್ರಾಗನ್ ಹಣ್ಣಿನಲ್ಲಿ ಕೊರೊನಾ ವೈರಸ್ ಮಾದರಿಗಳನ್ನು ಕಂಡುಕೊಂಡಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.

ಡ್ರಾಗನ್ ಹಣ್ಣಿನಲ್ಲಿ ಕೊರೋನಾ ವೈರಸ್ ಪತ್ತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಮದು ಮಾಡಿದ ಆಹಾರ ಉತ್ಪನ್ನಗಳ ತುರ್ತು ತಪಾಸಣೆಯನ್ನು ಪ್ರಾರಂಭಿಸಿದ್ದಾರೆ. ಆಹಾರದಿಂದ ಕೊರೊನಾ ವೈರಸ್ ಹರಡಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲದಿದ್ದರೂ ಹಣ್ಣು ಖರೀದಿದಾರರನ್ನು ಸ್ವಯಂ ಕ್ವಾರಂಟೈನ್ ಮಾಡಲು ಸೂಚಿಸಿದ್ದಾರೆ.

Leave A Reply

Your email address will not be published.