ಸೂಪರ್ ಮಾರ್ಕೆಟ್ ನಿಂದ ಖರೀದಿಸಿದ ತರಕಾರಿಯಲ್ಲಿ ಇಲಿಯ ತಲೆ |’ವಾವ್ ಸ್ಪೈಸಿ’ಎಂದು ಬಾಯೊಳಗೆ ಹಾಕಿ ಸವಿದಾಗಲೇ ಅರಿವಾಯ್ತು ಅದು ಇಲಿಯ ‘ಕಣ್ಣು ಮತ್ತು ಮೀಸೆ’ಯೆಂದು

ಸಾಮಾನ್ಯವಾಗಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ ಪದಾರ್ಥಗಳಲ್ಲಿ ಜಿರಳೆ,ಇರುವೆ ಹೀಗೆ ಏನಾದರೊಂದು ಇರುವುದು ನೋಡಿದ್ದೇವೆ.ಇತ್ತೀಚೆಗೆ ಕೆಎಫ್ ಸಿ ಯಲ್ಲಿ ಗರಿ-ಗರಿ ಕರಿದ ಕೋಳಿ ತಲೆ ಕೂಡ ನೋಡಿದ್ದೇವೆ.ಆದ್ರೆ ಇಲ್ಲೊಂದು ಕಡೆ ಏನಾಗಿದೆ ಎಂದು ಒಮ್ಮೆ ಗ್ರಹಿಸಿದಾಗಲೇ ವಾಕರಿಕೆ ಬರುತ್ತದೆ. ಅಷ್ಟಕ್ಕೂ ಇಲ್ಲಿ ನಡೆದಿದ್ದು ಏನೆಂದು ನೀವೇ ನೋಡಿ.

Ad Widget

ಹೌದು. ಇಲ್ಲೊಂದು ಕಡೆ ವ್ಯಕ್ತಿಯೊರ್ವ ತರಕಾರಿ ಹಾಗೂ ಆಲೂಗಡ್ಡೆಯೊಂದಿಗೆ ಆಕಸ್ಮಿಕವಾಗಿ ತಿಳಿಯದೇ ‘ವಾವ್ ಸ್ಪೈಸಿ ‘ಎಂದು ಸತ್ತ ಇಲಿಯನ್ನು ಗಸ-ಗಸ ಸೇವಿಸಿರುವ ಘಟನೆ ಸ್ಪೇನ್‍ನಲ್ಲಿ ನಡೆದಿದೆ.

Ad Widget . . Ad Widget . Ad Widget . Ad Widget

Ad Widget

ಜುವಾನ್ ಜೋಸ್ ಅವರು ಸೂಪರ್ ಮಾರ್ಕೆಟ್‍ನಿಂದ ಕ್ರಿಸ್‍ಮಸ್ ಹಬ್ಬದಂದು ತರಕಾರಿ ಹಾಗೂ ಆಲೂಗಡ್ಡೆ ಪ್ಯಾಕೆಟ್ ಖರೀದಿಸಿ ಮನೆಗೆ ಬಂದು ಬೇಯಿಸಿ ನಂತರ ಅದನ್ನು ತಟ್ಟೆಗೆ ಬಡಿಸಿಕೊಂಡಿದ್ದಾರೆ. ಈ ವೇಳೆ ಯಾವುದೋ ಭಾರದಂತಿರುವ ವಸ್ತು ತಟ್ಟೆಯೊಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಚಮಚದ ಮೂಲಕ ತಿನ್ನಲು ಆರಂಭಿಸಿದಾಗ ಯಾವುದೋ ವಿಚಿತ್ರವಾಗಿರುವ ಕುರುಕುಲಾಗಿರುವ ಪದಾರ್ಥವನ್ನು ಅಗಿಯುತ್ತಿರುವಂತೆ ಫೀಲ್ ಆಗಿದೆನಂತರ ತಟ್ಟೆಯನ್ನು ಗಮನಿಸಿದಾಗ ಸತ್ತ ಇಲಿಯ ತಲೆಯನ್ನು ನೋಡಿ ಶಾಕ್ ಆಗಿದ್ದಾರೆ.

Ad Widget
Ad Widget Ad Widget

ಅಷ್ಟಕ್ಕೂ ತರಕಾರಿಯೊಂದಿಗೆ ಇಲಿಯ ಫ್ರೈ ಹೇಗಿತ್ತು ಗೊತ್ತಾ..ತಲೆಯಲ್ಲಿ ಕಣ್ಣು ಮತ್ತು ಮೀಸೆ ಸಮೇತ ರೋಸ್ಟ್ ಆಗಿದ್ದನ್ನು ಕಂಡಿದ್ದಾರೆ. ನಂತರ ತಾವು ತಿಂದಿದ್ದು, ತರಕಾರಿ ಅಲ್ಲ ಬದಲಿಗೆ ಇಲಿ ಎಂದು ಖಚಿತಪಡಿಸಿಕೊಂಡ ಬಳಿಕ ಸೂಪರ್ ಮಾರ್ಕೆಟ್ ವಿರುದ್ಧ ದೂರು ದಾಖಲಿಸಿದ್ದಾರೆ.ಸದ್ಯ ಈ ಘಟನೆ ಕುರಿತಂತೆ ಸೂಪರ್ ಮಾರ್ಕೆಟ್, ತಯಾರಕರು ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದು, ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: