2022ರ SSLC ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ

ಬೆಂಗಳೂರು: 2022ರಲ್ಲಿ ನಡೆಯಲಿರುವಂತಹ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.

ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು, 2022ರ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ದಿನಾಂಕ 28-03-2022ರಿಂದ ದಿನಾಂಕ 11-04-2022ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

ತಾತ್ಕಾಲಿಕ ವೇಳಾಪಟ್ಟಿ:

ದಿನಾಂಕ 28-03-2022 ರಂದು ಪ್ರಥಮ ಭಾಷೆಗಳಾದಂತ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಕೇಂದ್ರ ಪಠ್ಯಕ್ರಮ) ಸಂಸ್ಕೃತ ಪರೀಕ್ಷೆ ನಿಗದಿ ಪಡಿಸಲಾಗಿದೆ.

ದಿನಾಂಕ 30-03-2022ರಂದು ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ

ದಿನಾಂಕ 01-04-2022ರಂದು ಕೋರ್ ಸಬ್ಜೆಕ್ಟ್ – ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ 2, ಇಂಜಿನಿಯರಿಂಗ್ ಗ್ರಾಫಿಕ್ಸ್ 2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥ ಶಾಸ್ತ್ರ

ದಿನಾಂಕ 04-04-2022ರಂದು ಕೋರ್ ಸಬ್ಜೆಕ್ಟ್ – ಗಣಿತ, ಸಮಾಜ ಶಾಸ್ತ್ರ

ದಿನಾಂಕ 06-04-2022ರಂದು ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ

ದಿನಾಂಕ 08-04-2022ರಂದು – ತೃತೀಯ ಭಾಷೆ – ಹಿಂದಿ ( ಕೇಂದ್ರ ಪಠ್ಯಕ್ರಮ ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.

ದಿನಾಂಕ 08-04-2022ರಂದು ಎನ್ ಎಸ್ ಕ್ಯೂ ಎಫ್ ಪರೀಕ್ಷಾ ವಿಷಯಗಳು – ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಡ್ ವೆಲ್ ನೆಸ್

ದಿನಾಂಕ 11-04-2022ರಂದು ಕೋರ್ ಸಬ್ಜೆಕ್ಟ್ – ವಿಜ್ಞಾನ, ರಾಜ್ಯ ಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ

ವೇಳಾಪಟ್ಟಿಗೆ ಅಭ್ಯರ್ಥಿಗಳು, ಪೋಷಕರು ಆಕ್ಷೇಪಣೆಯನ್ನು ದಿನಾಂಕ 06-01-2022ರಿಂದ 14-01-2022ರೊಳಗಾಗಿ ಸಲ್ಲಿಸುವಂತೆ ತಿಳಿಸಿದೆ.

Leave A Reply

Your email address will not be published.