ವೀಕೆಂಡ್ ಕರ್ಪ್ಯೂನಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ – ರಾಜ್ಯ ಸರ್ಕಾರ |ಮದ್ಯ ಬೇಕಿದ್ರೆ ಸೋಮವಾರದವರೆಗೂ ಕಾಯಲೇಬೇಕು!

ಬೆಂಗಳೂರು : ಕೊರೋನ ಎಲ್ಲೆಡೆ ವ್ಯಾಪಾಕವಾಗಿ ಹಬ್ಬುತ್ತಿರುವುದರಿಂದ ಸರ್ಕಾರ ಕಟ್ಟು-ನಿಟ್ಟಿನ ಕ್ರಮ ಜಾರಿಗೊಳಿಸುತ್ತಿದ್ದು,ಶುಕ್ರವಾರದಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ. ಇದೀಗ ರಾಜ್ಯ ಸರ್ಕಾರವು ಎಣ್ಣೆ ಪ್ರಿಯರಿಗೆ ಬಿಗ್ ಶಾಕ್ ನೀಡಿದೆ.

ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಇಲ್ಲ ಎಂದು ಅಬಕಾರಿ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿಲ್ಲದ ಕಾರಣ ವೀಕೆಂಡ್ ನಲ್ಲಿ ಮದ್ಯ ಸಿಗಲ್ಲ. ಮದ್ಯ ಬೇಕು ಅಂದ್ರೆ ಸೋಮವಾರದವರೆಗೆ ಕಾಯಲೇಬೇಕಾಗಿದೆ.

ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹೊರತುಪಡಿಸಿ ಉಳಿದೆಲ್ಲ ಕಡೆ ಆಫ್​ಲೈನ್​ ತರಗತಿ ನಿಲ್ಲುತ್ತದೆ. ಶಾಲಾ ಕಾಲೇಜುಗಳು ಆನ್​ಲೈನ್ ವಿಧಾನದಲ್ಲಿ ನಡೆಯುತ್ತದೆ. ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ವೀಕೆಂಟ್ ಕರ್ಫ್ಯೂ ಇರುತ್ತದೆ. ಆಹಾರ ವಸ್ತು, ಹೊಟೆಲ್​ಗಳಲ್ಲಿ ಪಾರ್ಸೆಲ್​, ಅತ್ಯಗತ್ಯ ಸೇವೆಗಳು ಮಾತ್ರ ಇರುತ್ತವೆ.

Leave A Reply

Your email address will not be published.