ಓಮಿಕ್ರಾನ್ ಆತಂಕ : ಜ.6ರಿಂದ 2 ವಾರ ಟಫ್ ರೂಲ್ಸ್ ಜಾರಿ

ಬೆಂಗಳೂರು ನಗರದಲ್ಲಿ ಮುಂದಿನ ಎರಡು‌ ವಾರಗಳ ಕಾಲ 10 ಮತ್ತು 12ನೇ ತರಗತಿ ಹೊರತುಪಡಿಸಿ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ರಾಜ್ಯದ ಸಾರ್ವಜನಿಕ ಸ್ಥಳಗಳಾದ ಚಿತ್ರಮಂದಿರ, ಮಾಲ್, ಪಬ್, ಬಾರ್ ಗಳಲ್ಲಿ ಶೇ.50ರ ಮಿತಿಯನ್ನು ಹೇರಲಾಗಿದೆ.

ವಾರಾಂತ್ಯ ಕರ್ಪ್ಯೂ ಜಾರಿಗೊಳಿಸಲಾಗಿದೆ. ನೈಟ್ ಕರ್ಪ್ಯೂ ಮುಂದಿನ ಎರಡು ವಾರ ಮುಂದುವರೆಸಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು.

ಸಿಎಂ ಸಭೆಯ ಬಳಿಕ ಮಾತನಾಡಿದಂತ ಕಂದಾಯ ಸಚಿವ ಆರ್ ಅಶೋಕ್ ಅವರು, ಸಿಎಂ ನೇತೃತ್ವದಲ್ಲಿ ಕೋವಿಡ್ ಸಭೆಯನ್ನು ಮಾಡಲಾಯಿತು. ತಜ್ಞರು ಸಭೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿ ವರ್ಗದವರು ಭಾಗವಹಿಸಿದ್ದರು. ಸಿಎಂ ಬೊಮ್ಮಾಯಿಯವರು ನಾವು ಯಾವುದೇ ನಿರ್ಧಾರ ಕೈಗೊಂಡರು ಕೂಡ, ವಿಶ್ವಆರೋಗ್ಯ ಸಂಸ್ಥೆ. ಕೇಂದ್ರ ಸರ್ಕಾರ, ಹಾಗೂ ನೆರೆಯ ರಾಜ್ಯಗಳ ಕೋವಿಡ್ ಕೇಸ್ ಗಳ ಹೆಚ್ಚಳದ ಬಗ್ಗೆ ತೀರ್ಮಾನಗಳನ್ನು ಮಾಡಿದೆ. ಓಮಿಕ್ರಾನ್ ಕೋವಿಡ್ ಗಿಂತ 5 ಪಟ್ಟು ಜಾಸ್ತಿಯಾಗುತ್ತಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಇವತ್ತು ಬೆಂಗಳೂರಿನಲ್ಲಿ 2048 ಕೇಸ್ ಆಗಿದೆ. ಓಮಿಕ್ರಾನ್ 147 ಕೇಸ್ ಪತ್ತೆಯಾಗಿದೆ ಎಂದರು.

ಕಳೆದ ಮೂರು ದಿನಗಳಿಂದ ಕೋವಿಡ್ ಪ್ರಕರಣಗಳು ಡಬಲ್ ಆಗ್ತಾ ಇದೆ. ಇವತ್ತು ಮೂರು ಸಾವಿರ ಆಗ್ತಾ ಇರೋದು ಆರು ಸಾವಿರ, ಒಂಭತ್ತು ಸಾವಿರ ಆಗುತ್ತಾ ಐದಾರು ದಿನಗಳಲ್ಲಿ ಹತ್ತು ಸಾವಿರ ಆಗೋ ಸಾಧ್ಯತೆ ಇದೆ. ಇದರಿಂದಾಗಿ ವಿಶೇಷವಾಗಿ ಬೆಂಗಳೂರಿಗೆ ವಿಶೇಷ ನಿಯಮ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ಜಾರಿಗೆ ತರೋ ತೀರ್ಮಾನವನ್ನು ಸಿಎಂ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಇವತ್ತು ರಾಜ್ಯದಲ್ಲಿ ಶೇ.3ರಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಕೂಡ ಹೆಚ್ಚಿದೆ. 20 ರಿಂದ 50 ವರ್ಷದವರಿಗೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ಬೆಂಗಳೂರಿನಲ್ಲಿ 10 -12ನೇ ತರಗತಿ ಹೊರತು ಪಡಿಸಿ, 2 ವಾರ ಆಫ್ ಲೈನ್ ತರಗತಿ ಮಾಡಲು ನಿರ್ಧರಿಸಲಾಗಿದೆ. ನಾಳೆ ರಾತ್ರಿ 10 ಗಂಟೆಯಿಂದ ಕೋವಿಡ್ ರೂಲ್ಸ್ ಜಾರಿಯಲ್ಲಿ ಬರಲಿದೆ. 10 ಮತ್ತು 12ನೇ ತರಗತಿಗಳು ಮಾತ್ರ ತೆರೆದಿರಲು ನಿರ್ಧರಿಸಲಾಗಿದೆ. ಆನ್ ಲೈನ್ ತರಗತಿಗಳಲ್ಲಿ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ಕರ್ಪ್ಯೂ ತೀರ್ಮಾನಕೈಗೊಳ್ಳಲಾಗಿದೆ. ನೈಟ್ ಕರ್ಪ್ಯೂ ಮತ್ತೆ ಎರಡುವಾರ ವಿಸ್ತರಿಸಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ ಪಿಲಿಕುಳ ಉದ್ಯಾನವನದ 9 ರ ಹರೆಯದ ಒಲಿವರ್ ಹೆಸರಿನ ಹುಲಿ ಸಾವು
ಸರ್ಕಾರಿ ಕಚೇರಿ, ಮಾಲ್ ಗಳಲ್ಲಿ ಭಾರತ ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿರ್ಧರಿಸಲಾಗಿದೆ. ಮಾಲ್, ಚಿತ್ರಮಂದಿರ, ಪಬ್, ಬಾರ್ ಎಲ್ಲಾ ಸಾರ್ವಜನಿಕ ಸ್ಥಳಗಲ್ಲಿ ಶೇ.50ರ ಮಿತಿ ಜಾರಿಗೊಳಿಸಲಾಗಿದೆ. ಮದುವೆ ಹೊರಾಂಗಣಕ್ಕೆ 200 ಜನರ, ಒಳಾಂಗಣದಲ್ಲಿ 100 ಜನರಿಗೆ ಮಿತಿ ಏರಲಾಗಿದೆ. ಕೋವಿಡ್ ಸಂಪೂರ್ಣ ಡೋಸ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಬರೋರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.

Leave A Reply

Your email address will not be published.