ಈಕೆ ಹೆಸರಲ್ಲಿದೆ ಬರೋಬ್ಬರಿ 1,019 ಅಕ್ಷರ

ಹೆತ್ತವರು ತಮ್ಮ ಮಕ್ಕಳಿಗೆ ಹೆಸರಿಡುವಾಗ ನಾನಾ ರೀತಿಯಲ್ಲಿ ಯೋಚಿಸುತ್ತಾರೆ. ಮಗುವಿನ ರೂಪ ಲಾವಣ್ಯ, ಹುಟ್ಟಿದ ಸಂದರ್ಭಕ್ಕೆ ತಕ್ಕಂತೆ ಹೆಸರಿಡುವವರಿದ್ದಾರೆ.

ಎಷ್ಟೋ ಮಂದಿ ತಮ್ಮ ಇಷ್ಟದ ವ್ಯಕ್ತಿ, ನಟ, ನಟಿ ಹೆಸರೋ ಅಥವಾ ಕುಟುಂಬದ ಸದಸ್ಯರ ನೆನಪಿನಾರ್ಥ ಅವರ ಹೆಸರನ್ನೇ ಇಡುವವರಿದ್ದಾರೆ, ಇನ್ನೂ ಕೆಲವರು ಶಾಸ್ತ್ರ, ಸಂಪ್ರದಾಯಕ್ಕೆ ತಕ್ಕಂತೆ ಮಕ್ಕಳಿಗೆ ಹೆಸರಿಡುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗಳಿಗೆ ಕೇಳುಗರು ಅಚ್ಚರಿ ಪಡುವಂತ ಹೆಸರಿಟ್ಟಿದ್ದಾರೆ. ಆ ಹೆಸರು ಈಗ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದ್ದು, ರೆಕಾರ್ಡ್ ಕೂಡ ಮಾಡಿದೆ.

ಜಗತ್ತಿನ ಅತೀ ಉದ್ದದ ಹೆಸರು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಹೌದು, ಉತ್ತರ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‌ನ ಜೇಮ್ಸ್ ವಿಲಿಯಮ್ಸ್ ಮತ್ತು ಸಾಂಡ್ರಾ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ವಿಶಿಷ್ಟವಾದ ಹೆಸರನ್ನು ಇಟ್ಟಿದ್ದಾರೆ. ಆ ಹೆಸರಿನ ಜನನ ಪ್ರಮಾಣ ಪತ್ರವೇ 2 ಅಡಿ ಉದ್ದ ಇದೆ.

ಸುಮಾರು 1,019 ಅಕ್ಷರಗಳಿರುವ ಹೆಸರನ್ನು ತನ್ನ ಮಗಳಿಗೆ ನಾಮಕರಣ ಮಾಡಿದ್ದಾರೆ. ಈ రోజ ಹೆಸರನ್ನು ನೋಂದಣಿ ಮಾಡುವಾಗ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿತ್ತು. ಇಷ್ಟು ದೊಡ್ಡದಾದ ಹೆಸರನ್ನು ಹೇಗೆ ನೋಂದಣಿ ಮಾಡುವುದು ಎಂಬುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು.

ಈಕೆಯ ಹೆಸರಿನ ನಂತರ ರಾಜ್ಯ ರಿಜಿಸ್ಟಾರ್‌ ಡಬ್ಲ್ಯೂ.ಡಿ.ಕ್ಯಾರೊಲ್ ಅವರು, 51/8 ಇಂಚಿನ ಜಾಗದಲ್ಲಿ ಎರಡು ಟೈಪ್‌ರೈಟ್ ಲೈನ್‌ಗಳಿಗೆ ಹೊಂದಿಕೆಯಾಗದ ಯಾವುದೇ ಹೆಸರನ್ನು ಕಚೇರಿ ಸ್ವೀಕರಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದರು.

ಈ ಹೆಸರನ್ನಿಡಲು ತಾಯಿ ವರ್ಷ ಯೋಚಿಸಿದ್ದರು, ಸಂಬಂಧಿಕರು, ಹಲವು ದೇಶಗಳು ಮತ್ತು ನಗರಗಳು, ಸ್ನೇಹಿತರು, ಪ್ರೀತಿ ಪಾತ್ರರ ಹೆಸರುಗಳನ್ನು ಸೇರಿಸಿ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ.

Leave A Reply

Your email address will not be published.