ಚೀನಾದಿಂದ ಹೈಬ್ರಿಡ್ ಮಾನವನ ಸೃಷ್ಟಿ !

ತುಂಬಾ ಹಿಂದಿನಿಂದ ಮನುಷ್ಯರು ಮತ್ತು ಬೇರೆ ಪ್ರಾಣಿಗಳ ನಡುವಿನ ಹೈಬ್ರಿಡ್ ಜೀವಿ ಸೃಷ್ಟಿಗೆ ಪ್ರಯತ್ನ ನಡೀತಾನೇ ಇದೆ, ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಕಲ್ಪನೆಗಳನ್ನು ನೋಡಿರಲೂಬಹುದು. ಹೈಬ್ರಿಟ್ ಸೃಷ್ಟಿಸೋಕೆ ಹೋಗಿ, ಅದು ಅವರ ಮೇಲೆಯೆ ತಿರುಗಿ ಬರುವಂತೆ ಹಲವಾರು ಸಿನಿಮಾಗಳಲ್ಲಿ ಬಿಂಬಿಸಲಾಗಿದೆ.

ಈಗ ಚೀನಾ ಕೂಡ ಅದೇ ರೀತಿಯ ಪ್ರಯೋಗ ನಡೆಸ್ತಾ ಇದೆ ಅಂತ ಗೊತ್ತಾಗಿದೆ. 1967ರಲ್ಲೇ ಈ ಸಂಬಂಧ ಚೀನಾ ಪ್ರಯೋಗ ಶುರು ಮಾಡಿರೋದಕ್ಕೆ ಸಂಬಂಧಿಸಿದಂತೆ ವರದಿಯೊಂದು ಬಿಡುಗಡೆಯಾಗಿತ್ತು.

ಚೀನಾ ಮನುಷ್ಯ ಮತ್ತು ಚಿಂಪಾಂಜಿಯ ಕ್ರಾಸ್ ಬ್ರಿಡ್ಡಿಂಗ್ ಮಾಡ್ತಿದೆ ಅಂತ ಕೂಡ ಹೇಳಲಾಗಿತ್ತು. ಇದಾದ ಬಳಿಕ 1970ರ ದಶಕದಲ್ಲಿ ಸರ್ಕಸ್ ಚಿಂಪಾಂಜಿಯೊಂದು ಈ ಚಿಂತನೆಯನ್ನು ಮತ್ತೆ ಹುಟ್ಟು ಹಾಕಿತ್ತು. ಅಪಾರ ಬುದ್ಧಿವಂತಿಕೆ ಹೊಂದಿದ್ದ ಒಲಿವರ್ ಮೈಯಲ್ಲಿ ಕೂದಲು ಕೂಡ ಕಡಿಮೆ ಇತ್ತು. ಇದು ಮನುಷ್ಯ ಮತ್ತು ಚಿಂಪಾಂಜಿಯ ಹೈಬ್ರಿಡ್ ಇರಬಹುದು ಅಂತೆಲ್ಲಾ ಚರ್ಚೆ ನಡೆದಿತ್ತು. ಆದರೆ ಇದು ಸಾವನ್ನಪ್ಪಿದ ಬಳಿಕ ಪೋಸ್ಟ್ ಮಾರ್ಟಮ್ ಮಾಡಿದಾಗ ಹಾಗೇನೂ ಇಲ್ಲ ಅನ್ನೋದು ಗೊತ್ತಾಯ್ತು.

ಇನ್ನು 2019ರಲ್ಲಿ ಯುಎಸ್ ಸಾಲ್ಟ್ ಇನ್ಸ್ಟಿಟ್ಯೂಟ್ ಫಾರ್ ಬಯೋಲಾಜಿಕಲ್ ಸ್ಟಡೀಸ್‌ನ ಪ್ರೊಫೆಸರ್ ಜುವಾನ್ ಕಾರ್ಲೋಸ್ ನೇತೃತ್ವದ ತಂಡ ಮನುಷ್ಯ ಮತ್ತು ಮಂಗನ ಹೈಬ್ರಿಡ್ ಜೀವಿಯನ್ನು ಸೃಷ್ಟಿಸಿದ್ದು ಇದು 19 ದಿನಗಳವರೆಗೆ ಜೀವಂತವಾಗಿತ್ತು. ಇದಾದ ಬಳಿಕ ಮತ್ತೊಂದು ಹ್ಯುಮಾಂಝಿಯನ್ನು ಸೃಷ್ಟಿಸಿ, ನಂತರ ಲ್ಯಾಬ್ ಸಿಬ್ಬಂದಿಯೇ ಕೊಂದು ಹಾಕಿದ್ದರು ಎಂದು ದಿ ಸನ್ ಪತ್ರಿಕೆ ವರದಿ ಮಾಡಿದೆ.

Leave A Reply

Your email address will not be published.