Day: January 5, 2022

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳ ರದ್ದು,ವಾರಾಂತ್ಯ ದೇವರ ದರ್ಶನಕ್ಕೂ ಅವಕಾಶವಿಲ್ಲ

ಕಡಬ : ದೇಶದಾದ್ಯಂತ ಮತ್ತು ರಾಜ್ಯಾದ್ಯಂತ ಓಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರದ ಆದೇಶದಂತೆ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ರದ್ದು ಮಾಡಲಾಗಿದೆ‌. ಶ್ರೀ ದೇವಳಕ್ಕೆ ಬರುವ ಭಕ್ತಾದಿಗಳಗೆ ಒಂದು ಬಾರಿಗೆ 50 ಮಂದಿಗೆ ಮಾತ್ರ ಶ್ರೀ ದೇವರ ದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ ಹಾಗೂ ವಾರಾಂತ್ಯದ ಶುಕ್ರವಾರ ರಾತ್ರಿ ಗಂಟೆ 10ರಿಂದ ಸೋಮವಾರ ಬೆಳಗ್ಗೆ ಗಂಟೆ 8ರ ವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ ಮತ್ತು ರವಿವಾರಗಳಂದು ಶ್ರೀ ದೇವರ …

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳ ರದ್ದು,ವಾರಾಂತ್ಯ ದೇವರ ದರ್ಶನಕ್ಕೂ ಅವಕಾಶವಿಲ್ಲ Read More »

ದ.ಕ.ಜಿಲ್ಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ನಡೆಸಲು ಅವಕಾಶ-ಡಾ.ರಾಜೇಂದ್ರ ಕೆ.ವಿ
ದ.ಕ.ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿ ಈ ರೀತಿ ಇರಲಿದೆ

ಮಂಗಳೂರು : ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದ್ದು, ಈ ಸಂದರ್ಭ ದ.ಕ. ಜಿಲ್ಲೆಯಲ್ಲಿ ಈ ವಾರದ ವೀಕೆಂಡ್‌ನಲ್ಲಿ ಹೊರಾಂಗಣದಲ್ಲಿ 200 ಜನರಿಗೆ (ಒಳಾಂಗಣ 100) ಸೀಮಿತಗೊಳಿಸಿ ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ …

ದ.ಕ.ಜಿಲ್ಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ನಡೆಸಲು ಅವಕಾಶ-ಡಾ.ರಾಜೇಂದ್ರ ಕೆ.ವಿ
ದ.ಕ.ಜಿಲ್ಲೆಯಲ್ಲಿ ಕೋವಿಡ್ ನಿಯಮಾವಳಿ ಈ ರೀತಿ ಇರಲಿದೆ
Read More »

ಅನಾರೋಗ್ಯದ ಸಮಸ್ಯೆಯನ್ನು ಮುಚ್ಚಿಟ್ಟು ಮದುವೆಯಾಗುವುದು ಅತಿದೊಡ್ಡ ವಂಚನೆ !! | ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್

ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡು ಎಂಬ ಮಾತಿಗೆ. ಆದರೆ ಇದು ಈ ಕಾಲಕ್ಕೆ ಅನ್ವಯವಾಗುವುದಿಲ್ಲ. ಯಾಕೆಂದರೆ ಅನಾರೋಗ್ಯದ ಸಮಸ್ಯೆ ಮುಚ್ಚಿಟ್ಟು ಮದುವೆಯಾಗುವುದು ಬಹುದೊಡ್ಡ ವಂಚನೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಅನಾರೋಗ್ಯದ ಸಮಸ್ಯೆಗಳನ್ನು ಮುಚ್ಚಿಟ್ಟು ಮದುವೆಯಾಗುವುದರಿಂದ ಮದುವೆಯ ಬಳಿಕ ಮದುವೆಯಾದವರು ಸಾಕಷ್ಟು ಸಂಕಷ್ಟ ಪಡಬೇಕಾಗುತ್ತದೆ. ಹೀಗಾಗಿಯೇ ಇದೇ ರೀತಿ ಪ್ರಕರಣವೊಂದರ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಮದುವೆಗೆ ಮುನ್ನ ಅನಾರೋಗ್ಯದ ವಿಚಾರವನ್ನು ಮರೆಮಾಚುವುದು ವಂಚನೆ ಎಂದು ಮಹತ್ವದ ತೀರ್ಪು ನೀಡಿದೆ. ಅಷ್ಟೇ ಅಲ್ಲದೆ …

ಅನಾರೋಗ್ಯದ ಸಮಸ್ಯೆಯನ್ನು ಮುಚ್ಚಿಟ್ಟು ಮದುವೆಯಾಗುವುದು ಅತಿದೊಡ್ಡ ವಂಚನೆ !! | ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್ Read More »

ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಫ್ಲೈ ಓವರ್ ನಲ್ಲೇ 20 ನಿಮಿಷಗಳ ಕಾಲ ಸಿಲುಕಿಕೊಂಡ ಪ್ರಧಾನಿ ಮೋದಿ | ನಾನು ಜೀವಂತವಾಗಿ ಬಂದಿದ್ದೇನೆ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ ಮೋದಿ

ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಪಂಜಾಬ್‍ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದ ವೇಳೆ ಭಾರೀ ಭದ್ರತಾ ಲೋಪವಾಗಿದೆ. ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿದೆ. ಪ್ರತಿಭಟನೆ ಕಾರಣದಿಂದಾಗಿ ಪಿಎಂ ಮೋದಿ ಅವರ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಬಟಿಂಡಾದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ಮೋದಿ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ಪಂಜಾಬ್ ವಿಮಾನ ನಿಲ್ದಾಣಕ್ಕೆ …

ಭದ್ರತಾ ಸಿಬ್ಬಂದಿಯ ಲೋಪದಿಂದಾಗಿ ಫ್ಲೈ ಓವರ್ ನಲ್ಲೇ 20 ನಿಮಿಷಗಳ ಕಾಲ ಸಿಲುಕಿಕೊಂಡ ಪ್ರಧಾನಿ ಮೋದಿ | ನಾನು ಜೀವಂತವಾಗಿ ಬಂದಿದ್ದೇನೆ ಎಂದು ಪಂಜಾಬ್ ಸರ್ಕಾರಕ್ಕೆ ಮಾತಿನಲ್ಲೇ ಕುಟುಕಿದ ಮೋದಿ Read More »

ದೇವರ ಮುಂದೆ ಹಚ್ಚಿಟ್ಟಿದ್ದ ದೀಪ ಇಡೀ ಮನೆಯನ್ನೇ ಸುಟ್ಟು ಭಸ್ಮ ಮಾಡಿತು !! | ಮೂರುವರೆ ಲಕ್ಷ ಹಣದ ಜೊತೆಗೆ ಚಿನ್ನಾಭರಣವೂ ಬೆಂಕಿಗಾಹುತಿ

ಹಿಂದೂ ಮನೆಗಳಲ್ಲಿ ದೇವರಿಗೆ ದೀಪ ಹಚ್ಚುವುದು ಪದ್ಧತಿ. ಆದರೆ ಆ ದೀಪವೇ ಇಲ್ಲೊಂದು ಕಡೆ ಇಡೀ ಮನೆಯೇ ಹೊತ್ತಿ ಉರಿಯುವಂತೆ ಮಾಡಿದೆ. ಹೌದು, ದೇವರ ಮುಂದೆ ಹಚ್ಚಿಟ್ಟಿದ್ದ ದೀಪದಿಂದ ಬೆಂಕಿ ಹೊತ್ತಿಕೊಂಡು ಗುಡಿಸಲಿನಲ್ಲಿದ್ದ ಚಿನ್ನಾಭರಣಗಳು ಸೇರಿ ವಸ್ತುಗಳು ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಬಡಮಲ್ಲಿ ತಾಂಡಾದಲ್ಲಿ ನಡೆದಿದೆ. ಗ್ರಾಮದ ಅಂಗನವಾಡಿ ಸಹಾಯಕಿಯಾದ ವಿನೋದಾ ಎಂಬುವರು ಗುಡಿಸಲಿನಲ್ಲಿ ವಾಸಿಸುತ್ತಿದ್ದು, ದೇವರ ಮುಂದೆ ದೀಪ ಹಚ್ಚಿಟ್ಟು ಅಂಗನವಾಡಿಗೆ ಕೆಲಸಕ್ಕೆ ಹೋಗಿದ್ದರು. ಕೆಲ ಹೊತ್ತಿನಲ್ಲಿ ದೀಪದ ಬೆಂಕಿ …

ದೇವರ ಮುಂದೆ ಹಚ್ಚಿಟ್ಟಿದ್ದ ದೀಪ ಇಡೀ ಮನೆಯನ್ನೇ ಸುಟ್ಟು ಭಸ್ಮ ಮಾಡಿತು !! | ಮೂರುವರೆ ಲಕ್ಷ ಹಣದ ಜೊತೆಗೆ ಚಿನ್ನಾಭರಣವೂ ಬೆಂಕಿಗಾಹುತಿ Read More »

ಕ್ರಿಸ್ಮಸ್ ದಿನದಂದು ಪೆರುವಾಯಿಯಲ್ಲಿ ನಡೆದ ಗೋದಲಿ ಸ್ಪರ್ಧೆಯ ಫಲಿತಾಂಶ

ಪುತ್ತೂರು : – ಬಂಟ್ವಾಳ ತಾಲೂಕಿನ ಪೆರುವಾಯಿ ಫಾತಿಮ ಚರ್ಚ್ ಮುಚ್ಚಿರಪದವು ಅಧೀನದಲ್ಲಿ ಕ್ರಿಸ್ಮಸ್ ಹಬ್ಬದ ದಿನದಂದು ಗೋದಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಹಲವಾರು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು,ರಾಜೇಶ್ ಪ್ರಕಾಶ್ ಡಿಸೋಜ ಮುಳಿಯ ಪೆರುವಾಯಿ ಪ್ರಥಮ ಬಹುಮಾನವನ್ನು ಪಡೆದುಕೊಂಡರು. ಈ ಸ್ಪರ್ಧೆಯ ದ್ವಿತೀಯ ಬಹುಮಾನವನ್ನು ರೋಶನ್ ಡಿಸೋಜ ಅಂಗರಕುಮೇರ್ ಶಾಲೋಮ್ ನಿವಾಸ್ ಪಡೆದುಕೊಂಡರು. ಇವರಿಗೆ ಡಿಸೆಂಬರ್ 31 ರಂದು ರೆl ಫಾದರ್ ವಿಶಾಲ್ ಮೋನಿಸ್ ಅವರ ಉಪಸ್ಥಿಯಲ್ಲಿ ಪೆರುವಾಯಿ ಚರ್ಚ್ ನಲ್ಲಿ ಬಹುಮಾನವನ್ನು ವಿತರಿಸಲಾಯಿತು.

ಅಫ್ಘಾನಿಸ್ತಾನದಲ್ಲಿ ಮತ್ತೊಂದು ಮೂರ್ಖತನದ ಆದೇಶ ಹೊರಡಿಸಿದ ತಾಲಿಬಾನಿಗಳು !! | ಅಂಗಡಿಗಳಲ್ಲಿನ ಹೆಣ್ಣು ಗೊಂಬೆಗಳ ರುಂಡವನ್ನು ಕಡಿದು ವಿಕೃತಿ ಮೆರೆದ ನರ ರಕ್ಕಸರು

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಲೇ ಇದೆ. ಯಾರಿಗೂ ಹೆದರದೆ, ಹಿಂದೇಟು ಹಾಕದೆ ಇಷ್ಟ ಬಂದಂತೆ ಹೊಸ ನಿಯಮ ಜಾರಿಗೊಳಿಸುತ್ತಲೇ ಬಂದಿದ್ದಾರೆ. ಒಟ್ಟಾಗಿ ತಾಲಿಬಾನ್ ಹೆಣ್ಣು ಮಕ್ಕಳ ನರಕ ಎಂದೇ ಹೇಳುವಂತಾಗಿದೆ. ಇತ್ತೀಚೆಗೆ ಜಾಹೀರಾತುಗಳಲ್ಲಿ ಹೆಣ್ಣು ಮಕ್ಕಳು ನಟಿಸಬಾರದು ಎಂದು ಆದೇಶ ಹೊರಡಿಸಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ತಾಲಿಬಾನಿ ಸರ್ಕಾರ ಇದೀಗ ಮತ್ತೊಂದು ವಿಚಿತ್ರ ಕಾನೂನನ್ನ ಹೊರಡಿಸಿದೆ.ಹೌದು.ದೇಶದಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಗೊಂಬೆಯನ್ನ ಇಡಬಾರದು ಅಂತ ಆದೇಶ ಹೊರಡಿಸಿದೆ.ಇಷ್ಟೇ ಅಲ್ಲದೆ ಹೆಣ್ಣು ಗೊಂಬೆಗಳ ರುಂಡವನ್ನು ಕಿತ್ತು …

ಅಫ್ಘಾನಿಸ್ತಾನದಲ್ಲಿ ಮತ್ತೊಂದು ಮೂರ್ಖತನದ ಆದೇಶ ಹೊರಡಿಸಿದ ತಾಲಿಬಾನಿಗಳು !! | ಅಂಗಡಿಗಳಲ್ಲಿನ ಹೆಣ್ಣು ಗೊಂಬೆಗಳ ರುಂಡವನ್ನು ಕಡಿದು ವಿಕೃತಿ ಮೆರೆದ ನರ ರಕ್ಕಸರು Read More »

ಮನೆಯ ಟಾಯ್ಲೆಟ್ ನಲ್ಲಿ ಬುಸುಗುಟ್ಟಿದ ನಾಗಪ್ಪ !! | ನಾಗರ ಹಾವನ್ನು ಹಿಡಿದ ಬಳಿಕ ಆರತಿ ಬೆಳಗಿ, ಪೂಜೆ ಮಾಡಿದ ಮನೆಯೊಡತಿ

ಮನೆಯ ಸುತ್ತಮುತ್ತ ಎಲ್ಲಿಯಾದರೂ ನಾಗರಹಾವು ಕಂಡರೆ ಭಯ ಬೀಳುತ್ತೇವೆ. ಹಾಗಿರುವಾಗ ಮನೆಯೊಳಗೆ ನಾಗಪ್ಪ ಕಂಡರೆ ಮನೆಯವರ ಸ್ಥಿತಿ ಹೇಗಾಗಬೇಡ. ಹಾಗೆಯೇ ಇಲ್ಲಿ ಮನೆಯ ಟಾಯ್ಲೆಟ್‍ನಲ್ಲಿ ನಾಗರ ಹಾವು ಪ್ರತ್ಯಕ್ಷವಾಗಿ, ಮನೆಯವರು ಭಯಭೀತರಾದ ಘಟನೆ ಶಿವಮೊಗ್ಗ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ನಡೆದಿದೆ. ಶಿವಪ್ಪನಾಯಕ ಬಡಾವಣೆ ನಿವಾಸಿ ಶಬರಿ ಅವರು ತಮ್ಮ ಮನೆಯ ಟಾಯ್ಲೆಟ್‍ಗೆ ಹೋದಾಗ, ಟಾಯ್ಲೆಟ್ ಪಿಟ್ ನಲ್ಲಿ ನಾಗರ ಹಾವು ಇರುವುದನ್ನು ಗಮನಿಸಿ ಗಾಬರಿಯಿಂದ ಹೊರಗೆ ಓಡಿ ಬಂದಿದ್ದಾರೆ. ತಕ್ಷಣ ಸ್ನೇಕ್ ಕಿರಣ್‍ಗೆ ಫೋನ್ ಮಾಡಿದ್ದು, ಸ್ಥಳಕ್ಕೆ …

ಮನೆಯ ಟಾಯ್ಲೆಟ್ ನಲ್ಲಿ ಬುಸುಗುಟ್ಟಿದ ನಾಗಪ್ಪ !! | ನಾಗರ ಹಾವನ್ನು ಹಿಡಿದ ಬಳಿಕ ಆರತಿ ಬೆಳಗಿ, ಪೂಜೆ ಮಾಡಿದ ಮನೆಯೊಡತಿ Read More »

ಮುಸ್ಲಿಂ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದ ಇಸ್ಲಾಂ ಸಂಘಟನೆ

ಶಾಲೆಗಳಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ ಮಾಡಬೇಕೆಂಬ ಸರ್ಕಾರದ ನಿರ್ದೇಶನವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದ್ದು, ಮುಸ್ಲಿಂ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದು ತಾಕೀತು ಮಾಡಿದೆ. ಡಿಸೆಂಬರ್ 29ರಂದು ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗವು ಸುತ್ತೋಲೆ ಹೊರಡಿಸಿದ್ದು, “ಸ್ವಾತಂತ್ರ್ಯ ದಿನದ 75ನೇ ವಾರ್ಷಿಕೋತ್ಸವದ ಅಮೃತ ಮಹೋತ್ಸವದ ಸ್ಮರಣಾರ್ಥವಾಗಿ, ಜನವರಿ 1ರಿಂದ ಫೆಬ್ರವರಿ 7ರವರೆಗೆ 30,000 ಸಂಸ್ಥೆಗಳು ಮತ್ತು 3 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಂಡ 30 ರಾಜ್ಯಗಳಲ್ಲಿ 750 ಮಿಲಿಯನ್ ಸೂರ್ಯ …

ಮುಸ್ಲಿಂ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಸೂರ್ಯ ನಮಸ್ಕಾರ ಮಾಡಬಾರದೆಂದು ವಿರೋಧ ವ್ಯಕ್ತಪಡಿಸಿದ ಇಸ್ಲಾಂ ಸಂಘಟನೆ Read More »

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಗಾರ

ಪುತ್ತೂರು: ಸ್ಟಾಕ್ ಅಥವಾ ಷೇರು ಎನ್ನುವುದು ಸಂಸ್ಥೆಯೊಂದರ ಮಾಲೀಕತ್ವದಲ್ಲಿನ ಒಂದು ಪಾಲನ್ನು ಪ್ರತಿನಿಧಿಸುವ ಭದ್ರತಾ ಠೇವಣಿ ಆಗಿದೆ. ಹೂಡಿಕೆದಾರರಿಗೆ ತಮ್ಮ ಹೂಡಿಕೆಗಳನ್ನು ನೈಜ ಸಮಯದ ಆಧಾರದ ಮೇಲೆ ಖರೀದಿಸಲು, ಮಾರಾಟ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲುಷೇರು ಮಾರುಕಟ್ಟೆ ಅನುವು ಮಾಡಿಕೊಡುತ್ತದೆ ಎಂದು ಪುತ್ತೂರಿನ ಶ್ರೀರಾಮ್ ಷೇರಿನಆರ್ಥಿಕ ಸಲಹೆಗಾರ ಉಮೇಶ್ ನಾಯಕ್ ಹೇಳಿದರು. ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ವಾಣಿಜ್ಯ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಷೇರು …

ಪುತ್ತೂರು:ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿಷೇರು ಮಾರುಕಟ್ಟೆಯ ಬಗ್ಗೆ ಮಾಹಿತಿ ಕಾರ್ಯಗಾರ Read More »

error: Content is protected !!
Scroll to Top