ಹೆಂಡತಿಯನ್ನು ನಿರ್ದಾಕ್ಷಿಣ್ಯವಾಗಿ ಕೊಲೆಗೈದ ಪಾಪಿ ಪತಿ!! ರಾಡ್ ನ ಏಟಿಗೆ ಆಕೆ ಮೇಲೇಳಲೇ ಇಲ್ಲ!!

ಇಳಕಲ್: ಇಲ್ಲಿನ ಕವಿಶೆಟ್ಟಿ ಎಂಬ ಗಲ್ಲಿಯಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿಯನ್ನು ರಾಡ್ ನಿಂದ ಹೊಡೆದು ಕೊಲೆ ನಡೆಸಿದ್ದು, ಘಟನೆಯನ್ನು ಕಣ್ಣಾರೆ ಕಂಡ ಇಬ್ಬರು ಪುಟಾಣಿ ಮಕ್ಕಳ ರೋದನೆ ಮುಗಿಲುಮುಟ್ಟಿತ್ತು.

Ad Widget

ಮೃತ ಮಹಿಳೆಯನ್ನು ಮದೀನಾ ಬಂಡಿ(27) ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಮೆಹಬೂಬ್ ಬಂಡಿ ಕೊಲೆ ನಡೆಸಿದ ಆರೋಪಿಯಾಗಿದ್ದಾನೆ.

Ad Widget . . Ad Widget . Ad Widget .
Ad Widget

ಘಟನೆ ವಿವರ: ನಗರದಲ್ಲಿ ಪಾನಿಪುರಿ ಅಂಗಡಿ ನಡೆಸುತ್ತಿದ್ದ ಮೆಹಬೂಬ್ ಬಂಡಿಗೆ ಟೈಲರ್ ಆಗಿದ್ದ ಮದೀನಾ ಬಂಡಿ ಜೊತೆಗೆ ವಿವಾಹವಾಗಿ ಇಬ್ಬರು ಮಕ್ಕಳಿದ್ದರು. ವಿಪರೀತ ಕುಡಿತದ ಚಟ ಹೊಂದಿದ್ದ ಮೆಹಬೂಬ್ ಪ್ರತಿದಿನವೂ ಮನೆಯಲ್ಲಿ ಜಗಳಕಾಯುತ್ತಿದ್ದ ಎನ್ನಲಾಗಿದೆ.

Ad Widget
Ad Widget Ad Widget

ಘಟನೆ ನಡೆದ ದಿನವೂ ಪತಿ ಪತ್ನಿಯ ನಡುವೆ ಜಗಳ ಉಂಟಾಗಿದ್ದು, ಕೋಪದಲ್ಲಿ ಆಕೆಯ ಮೇಲೆ ರಾಡ್ ನಿಂದ ಹೊಡೆದ ಪರಿಣಾಮ ಮದೀನಾ ಪ್ರಾಣಪಕ್ಷಿ ಹಾರಿಹೋಗಿತ್ತು. ಘಟನೆಯನ್ನು ಕಂಡ ಮಕ್ಕಳು ಹೊರಗೆ ಹೇಳುತ್ತಾರೆ ಎಂದು ಮಕ್ಕಳನ್ನು ಮನೆಯೊಳಗೇ ಕೂಡಿ ಹಾಕಿ ಮೆಹಬೂಬ್ ನಿದ್ದೆಗೆ ಜಾರಿದ್ದ.

ಇತ್ತ ತಾಯಿಯ ಶವದ ಮುಂದೆ ರೋಧಿಸುತ್ತಿದ್ದ ಮಕ್ಕಳು ತಂದೆ ನಿದ್ದೆಗೆ ಜಾರಿದ್ದುದನ್ನು ಕಂಡು ನೆರೆ ಮನೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ನೆರೆಮನೆಯವರು ಧಾವಿಸಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮೆಮಬೂಬ್ ಬಂಡಿಯನ್ನು ಪೊಲೀಸರು ಬಂಧಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: