ನೀರು ಕುಡಿಯುತ್ತಾ ಕಾಲ್ ನಲ್ಲಿ ಮಾತನಾಡುತ್ತಿರುವಾಗ ಸ್ಫೋಟಗೊಂಡ ಮೊಬೈಲ್ |ಈ ವಿಡಿಯೋದ ಸತ್ಯಾಂಶ ಇಲ್ಲಿದೆ ನೋಡಿ..

ಮೊಬೈಲ್ ಫೋನ್ ಚಾರ್ಜ್ ಗೆ ಹಾಕಿ ಮಾತಾಡುವುದು ತುಂಬಾ ಅಪಾಯಕಾರಿ ಇದರಿಂದ ಮೊಬೈಲ್ ಸ್ಫೋಟಗೊಂಡು ಸಾವಿನ ಬಾಗಿಲು ಸೇರಬಹುದು. ಇದರಂತೆ ಇದೀಗ ಮೊಬೈಲ್‌ ಫೋನಿನಲ್ಲಿ ಮಾತನಾಡುತ್ತಾ ನೀರು ಕುಡಿಯುವುದು ಅಪಾಯಕಾರಿ ಎಂಬುದು ಒಂದು ವಿಡಿಯೋ ಮೂಲಕ ತಿಳಿಸಿದ್ದಾರೆ.ಇದರಿಂದಾಗುವ ತೊಂದರೆಗಳ ಮನವರಿಕೆಗೋಸ್ಕರ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು,ಸಿಸಿಟಿವಿ ದೃಶ್ಯವೊಂದನ್ನು ಪೋಸ್ಟ್‌ ಮಾಡಿ ಹೀಗೆ ಹೇಳಲಾಗುತ್ತಿದೆ.

Ad Widget

ವಿಡಿಯೋದಲ್ಲಿ ಒಬ್ಬ ವ್ಯಕ್ತಿ ನೀರು ಕುಡಿಯುತ್ತಾ ಚಾರ್ಜಿಗೆ ಹಾಕಿದ್ದ ಫೋನಿನಲ್ಲಿ ಮಾತನಾಡುತ್ತಿರುತ್ತಾರೆ. ಈ ವೇಳೆ ಫೋನ್‌ ಕಿವಿಯಲ್ಲಿ ಸ್ಫೋಟಗೊಂಡು ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುತ್ತಾರೆ. ನೆಟ್ಟಿಗರು ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ‘ಇದು ಅಪಾಯಕಾರಿ. ಪ್ರತಿಯೊಬ್ಬರೂ ಕಾಳಜಿ ವಹಿಸಿ. ದಯವಿಟ್ಟು ಮೊಬೈಲ್‌ ಚಾರ್ಜಿಗೆ ಹಾಕಿ, ನೀರು ಕುಡಿಯುತ್ತಾ ಫೋನಲ್ಲಿ ಮಾತಾಡಬೇಡಿ’ ಎಂಬ ಒಕ್ಕಣೆ ಬರೆದು ಮನವಿ ಮಾಡಿದ್ದಾರೆ

Ad Widget . . Ad Widget . Ad Widget .
Ad Widget

ಆದರೆ ಈ ವಿಡಿಯೋದ ಸತ್ಯಾಸತ್ಯ ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ.ಇದು ನಿಜ ಘಟನೆಯಲ್ಲ, ಚಾರ್ಜ್ ಗೆ ಹಾಕಿ ಮೊಬೈಲ್‌ ಬಳಸದಂತೆ ಸಂದೇಶ ಸಾರುವ ಸಲುವಾಗಿ ನಿರ್ಮಿಸಿದ ಸ್ಕಿರಪ್ಟೆಡ್‌ ವಿಡಿಯೋ ಎಂದು ತಿಳಿದುಬಂದಿದೆ.

Ad Widget
Ad Widget Ad Widget

ವೈರಲ್‌ ವಿಡಿಯೋದ ಪೂರ್ಣ ದೃಶ್ಯವನ್ನು ಬ್ಯಾಡ್ಮಿಂಟನ್‌ ಆಟಗಾರ ಜ್ವಾಲಾ ಗುಟ್ಟಾಅವರು ಹಂಚಿಕೊಂಡಿದ್ದಾರೆ. ಜೊತೆಗೆ, ‘ವಿಡಿಯೋ ವೀಕ್ಷಿಸಿದ್ದಕ್ಕೆ ಧನ್ಯವಾದ. ಈ ಪೇಜಿನಲ್ಲಿ ಮನರಂಜನೆ ಮತ್ತು ಶೈಕ್ಷಣಿಕ ಉದ್ದೇಶದ ಮಾಹಿತಿಪೂರ್ಣ ಕಿರುಚಿತ್ರಗಳನ್ನು ಹಂಚಿಕೊಳ್ಳಲಾಗುತ್ತದೆ’ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇದೇ ವಿಡಿಯೋವನ್ನು ನಿಜವಾದ ಘಟನೆ ಎಂದು ಸುಳ್ಳುಸುದ್ದಿ ಹಬ್ಬಿಸಲಾಗಿದ್ದು,ಆದರೆ ಈ ವಿಡಿಯೋ ಸುಳ್ಳಾಗಿದ್ದರು ವೀಕ್ಷಕರಿಗೆ ಒಂದು ಒಳ್ಳೆಯ ಸಂದೇಶ ನೀಡಿದೆ.

Leave a Reply

error: Content is protected !!
Scroll to Top
%d bloggers like this: