ಸ್ಮಾರ್ಟ್ ಮೀಟರ್ ಅಳವಡಿಕೆಗೆ ಬೆಸ್ಕಾಂ ನಿರ್ಧಾರ|2025ರೊಳಗೆ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಅಳವಡಿಸಲು ನಿರ್ಧಾರ|ಏನಿದು ಸ್ಮಾರ್ಟ್ ಮೀಟರ್? ಇದರ ಉಪಯೋಗವೇನು? ಇಲ್ಲಿದೆ ನೋಡಿ.

ಟೆಕ್ನಾಲಜಿಗಳು ದಿನದಿಂದ ದಿನಕ್ಕೆ ಮುಂದುವರಿಯುತ್ತಲೇ ಇದ್ದು, ಎಲ್ಲೆಡೆ ಡಿಜಿಟಲೀಕರಣವಾಗಿದೆ.ಸ್ಮಾರ್ಟ್‌ಫೋನ್, ಸ್ಮಾಟ್‌ ಹೋಂಗಳು, ಸ್ಮಾರ್ಟ್ ಸಿಟಿಗಳ ಬಳಿಕ ಇದೀಗ ವಿದ್ಯುತ್ ಮೀಟರ್‌ಗಳು ಸಹ ಸ್ಮಾರ್ಟ್ ಆಗುತ್ತಿದ್ದು,ಇದರಿಂದ ವಿದ್ಯುತ್ ಬಳಕೆಯ ಮಟ್ಟ ಸ್ಪಷ್ಟವಾಗಿ ತಿಳಿಯಲಿದೆ.

ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಸ್ಮಾರ್ಟ್ ಮೀಟರ್‌ ಅಳವಡಿಸುವ ಕಾರ್ಯವನ್ನು ಮಾರ್ಚ್ 2025ರ ಒಳಗೆ ಮಾಡಿ ಮುಗಿಸಲು ಬೆಸ್ಕಾಂ ಲೆಕ್ಕಾಚಾರ ಹಾಕುತ್ತಿದೆ.ಬೆಂಗಳೂರು ದಕ್ಷಿಣದಲ್ಲಿರುವ ಚಂದಾಪುರದಲ್ಲಿ ಪೈಲಟ್ ಹಂತದಲ್ಲಿ 1,200 ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ ಮಾಡಿ ಅದರ ಯಶಸ್ಸಿನಿಂದ ಪ್ರೇರಿತಗೊಂಡ ಬೆಸ್ಕಾಂ ಇದೀಗ ಇಡೀ ನಗರಕ್ಕೆ ಸ್ಮಾರ್ಟ್ ಮೀಟರ್‌ಗಳ ಅಳವಡಿಕೆಗೆ ಮುಂದಾಗಲಿದೆ.

ಯೋಜನೆಯ ಮೊದಲ ಹಂತವನ್ನು ಡಿಸೆಂಬರ್‌ 2023ರ ಒಳಗೆ ಮಾಡಿ ಮುಗಿಸಲು ರೂಪುರೇಷೆ ಸಿದ್ಧವಾಗಿದೆ.ಈ ಹಂತದಲ್ಲಿ 17-17.5 ಲಕ್ಷ ಸ್ಮಾರ್ಟ್‌ಮೀಟರ್‌ಗಳನ್ನು ಅಳವಡಿಸಲಾಗುವುದು. ಸರ್ಕಾರಿ ಕಚೇರಿಗಳು, ವಾಣಿಜ್ಯ ಕಟ್ಟಡಗಳು, ಕೈಗಾರಿಕೆಗಳು, ಫೀಡರ್‌ ಮೀಟರ್‌ಗಳನ್ನು ಈ ಹಂತದಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುವುದು.

ಎರಡನೇ ಹಂತದಲ್ಲಿ, ಬೆಂಗಳೂರು ನಗರದಲ್ಲಿರುವ ವಸತಿ ಕಟ್ಟಡಗಳಲ್ಲಿ ಸ್ಮಾರ್ಟ್‌ಮೀಟರ್‌ ಅಳವಡಿಕೆಗೆ ಮುಂದಾಗಲಾಗುವುದು. ಮಾರ್ಚ್ 2025ರ ಡೆಡ್ಲೈನ್‌ನಲ್ಲಿ ಕೆಲಸ ಮಾಡಲಿರುವ ಈ ಹಂತದಲ್ಲಿ 55 ಲಕ್ಷ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲಾಗುವುದು.

ಸ್ಮಾರ್ಟ್ ಮೀಟರ್ ಅಳವಡಿಕೆಯ ಉಪಯೋಗ:

ಈ ಯೋಜನೆ ಮೂಲಕ ವಿದ್ಯುತ್‌ ಹರಿವಿನ ಪರಿ ಹಾಗೂ ಬಳಕೆಯ ಮಟ್ಟಗಳ ಸ್ಪಷ್ಟ ಅಂದಾಜು ಸಿಗಲಿರುವ ಕಾರಣ ಬೆಸ್ಕಾಂಗೆ ಸೋರಿಕೆಗಳನ್ನು ತಡೆಗಟ್ಟಿ, ವಿದ್ಯುತ್‌ ವ್ಯತ್ಯಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.

Leave A Reply

Your email address will not be published.