ಮಂಗಳೂರು: ಐಸಿಸ್ ಉಗ್ರರ ನಂಟು, ಮಾಜಿ ಕಾಂಗ್ರೆಸ್ ಶಾಸಕ ಬಿ.ಎಂ ಇದಿನಬ್ಬ ಸೊಸೆ ಮರಿಯಂ ಪೊಲೀಸ್ ಬಲೆಗೆ

ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಪುತ್ರ, ಬಿ.ಎಂ. ಬಾಷಾ ಮನೆಗೆ ಎನ್‌ಐಎ ಅಧಿಕಾರಿಗಳು ಇಂದು ಮತ್ತೆ ದಾಳಿ ನಡೆಸಿದ್ದು, ಬಾಷಾ ಅವರ ಸೊಸೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂಳನ್ನು ಬಂಧಿಸಿದ ಘಟನೆ ನಡೆದಿದೆ.

Ad Widget

ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ, ಬಾಷಾ ಅವರ ಮನೆಗೆ ಕಳೆದ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಳಿಕ, ಬಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುಲ್ ರೆಹಮಾನ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದರು.

Ad Widget . . Ad Widget . Ad Widget .
Ad Widget

ಆ ಸಂದರ್ಭದಲ್ಲಿ ಬಾಷಾ ಅವರ ಇನ್ನೊಬ್ಬ ಪುತ್ರ ಅನಾಸ್ ನನ್ನು ಮದುವೆಯಾಗಿದ್ದ ದೀಪ್ತಿ ಮರಿಯಂ ಬಗ್ಗೆಯೂ ಸಂಶಯ ಕಂಡುಬಂದಿತ್ತು. ಅದರ ಆಧಾರದಲ್ಲಿ ಆಕೆಯನ್ನು ಕೂಡ ವಿಚಾರಣೆ ನಡೆಸಲಾಗಿತ್ತು. ಅನುಮಾನದ ಆಧಾರದಲ್ಲಿ ಮರಿಯಂಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಬಂಧಿಸಿರಲಿಲ್ಲವಾದರೂ ಆಕೆಯ ಚಲನವಲನ ಹಾಗೂ ಆಕೆಯ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದರು.

Ad Widget
Ad Widget Ad Widget

ಅದರಂತೆ ಇಂದು ಬೆಳಗ್ಗೆ ಮತ್ತೆ ಅದೇ ಮನೆಗೆ ಎನ್‌ಐಎ ಡಿಎಸ್ಪಿ ಆಗಮಿಸಿದ್ದು, ದೀಪ್ತಿ ಮರಿಯಂಳನ್ನು ವಿಚಾರಣೆ ನಡೆಸಿ ಸಹಾಯಕ ತನಿಖಾಧಿಕಾರಿ ಕ್ರಿಶ ಕುಮಾರ್ ನೇತೃತ್ವದ ಪಿಐ ಅಜಯ್ ಸಿಂಗ್, ಮೋನಿಕಾ ಧಿಕ್ಷಾಲ್ ಅವರ ತಂಡ ಬಂಧಿಸಿದ್ದಾರೆ.

ಮೂಲತಃ ಕೊಡಗು ಮೂಲದ ದೀಪ್ತಿ ಹತ್ತು ವರ್ಷಗಳ ಹಿಂದೆ ದೇರಳಕಟ್ಟೆಯಲ್ಲಿ ಬಿಡಿಎಸ್ ಕಲಿಯುತ್ತಿದ್ದಾಗ ಬಿಎಂ ಬಾಷಾ ಪುತ್ರ ಅನಾಸ್ ಪರಿಚಯವಾಗಿ ನಂತರ ಪ್ರೇಮ ವಿವಾಹವಾಗಿದ್ದಳು. ಆದರೆ ನಂತರ ಕಟ್ಟರ್ ಮುಸ್ಲಿಂ ಆಗಿ ಪರಿವರ್ತನೆಯಾಗಿದ್ದ ದೀಪ್ತಿ ತನ್ನ ಹೆಸರನ್ನು ಮರಿಯಂ ಎಂದು ಬದಲಿಸಿಕೊಂಡಿದ್ದಳು.

ಇದೇ ಮರಿಯಂ ಕುಖ್ಯಾತ ಜಿಹಾದಿ ಗುಂಪು ಐಸಿಸ್ ನ ಸಂಪರ್ಕ ಪಡೆದಿದ್ದು ಮಂಗಳೂರಿನಲ್ಲಿದ್ದೇ ಜಮ್ಮು ಕಾಶ್ಮೀರದ ಲಿಂಕ್ ಹೊಂದಿದ್ದಳು ಎನ್ನಲಾಗಿತ್ತು. ಐಸಿಸ್ ನೆಟ್ವರ್ಕ್ ಗೆ ಯುವಕರನ್ನು ಸೇರಿಸುವ ಜಾಲದಲ್ಲಿ ಈಕೆಯೂ ಇದ್ದಾಳೆ ಎನ್ನುವ ಶಂಕೆಯಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸಿದ್ದರು. ಆದರೆ ಇದೀಗ ಎನ್‌ಐಎ ಅಧಿಕಾರಿಗಳ ಅನುಮಾನ ನಿಜವಾಗಿದೆ. ಬಲವಾದ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಿದ್ದಾರೆ.

ಉಳ್ಳಾಲದ ಮನೆಯಿಂದ ಟೆಂಪೋ ಟ್ರಾವೆಲರ್ ವಾಹನದಲ್ಲಿ ದೀಪ್ತಿಯನ್ನು ಕರೆದುಕೊಂಡು ಹೋದ ಎನ್ ಐಎ ತಂಡ, ಮಂಗಳೂರಿನ ವೆನ್‌ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ದೆಹಲಿಗೆ ಕರೆದುಕೊಂಡು ಹೋಗಲಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
Scroll to Top
%d bloggers like this: