ಕಡಲೆಕಾಯಿಯ ಕಡ ತೀರಿಸಲು ಅಮೆರಿಕದಿಂದ ಭಾರತಕ್ಕೆ ಬಂದ ಅಣ್ಣ-ತಂಗಿ

2010ರಲ್ಲಿ ಅಮೆರಿಕವಾಸಿಯಾಗಿದ್ದ ಕುಟುಂಬ ಕೆಲ ದಿನಗಳಿಗೆಂದು ಭಾರತಕ್ಕೆ ಬಂದಿತ್ತು. ಆ ಕುಟುಂಬ ಸದಸ್ಯರು ಬೀಚಿಗೆ ತೆರಳಿದ್ದರು. ಅಲ್ಲಿ ಅವರ ಕುಟುಂಬ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯೊಬ್ಬರಿಂದ ಕಡಲೆ ಖರೀದಿಸಿದ್ದರು.

ಕಡಲೆ ಖರೀದಿಸಿದ ಹಣವನ್ನು ನೀಡಲು ಮಕ್ಕಳ ತಂದೆ ಜೇಬಿಗೆ ಕೈ ಹಾಕಿದರು. ಆದರೆ ಅವರು ತಮ್ಮ ಪರ್ಸನ್ನು ವಾಹನದಲ್ಲೇ ಮರೆತು ಬಂದಿದ್ದರು. ಹೀಗಾಗಿ ಆ ಅಜ್ಜಿಯ ಫೋಟೊ ಕ್ಲಿಕ್ಕಿಸಿ ತಾವು ಹಣ ಮರಳಿಸುವುದಾಗಿ ಭರವಸೆ ನೀಡಿ ವಾಪಾಸ್ಸಾಗಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಕುಟುಂಬ ಅಮೆರಿಕಕ್ಕೆ ವಾಪಸ್ಸಾಗಿತ್ತು.

ಅಮೆರಿಕಕ್ಕೆ ವಾಪಸ್ಸಾದ ನಂತರ ಆ ಕುಟುಂಬಕ್ಕೆ ಕಡಲೆಕಾಯಿ ಅಜ್ಜಿಯ ಸಾಲ ಹಿಂದಿರುಗಿಸದೇ ಇದ್ದುದು ನೆನಪಾಗಿತ್ತು. 2010ರಲ್ಲಿ ಕುಟುಂಬ ಸದಸ್ಯರಾದ ಪ್ರಣವ್‌ಗೆ 10 ವರ್ಷ, ಆತನ ತಂಗಿ ಸುಚಿತಾಗೆ 9 ವರ್ಷ.

ಇದೀಗ ಅಜ್ಜಿಯ ಕಡಲೆಕಾಯಿ ಸಾಲವನ್ನು ತೀರಿಸುವ ಸಲುವಾಗಿಯೇ ಆಣ್ಣ-ತಂಗಿ ಇಬ್ಬರೂ ಭಾರತಕ್ಕೆ ಬಂದು ಕಾಕಿನಾಡದಲ್ಲಿ ಅಜ್ಜಿಯ ವಿಳಾಸವನ್ನು ಹರಸಾಹಸಪಟ್ಟು ಪತ್ತೆ ಹಚ್ಚಿದ್ದಾರೆ.
ಹಳ್ಳಿಯೊಂದರಲ್ಲಿ ವಾಸವಿದ್ದ ಕಡಲೆಕಾಯಿ ಅಜ್ಜಿಗೆ 25,000 ರೂ. ನೆರವನ್ನೂ ಅವರು ನೀಡಿದ್ದಾರೆ.

Leave A Reply

Your email address will not be published.