ಹಸುಗಳಿಗೂ ಪ್ರತ್ಯೇಕ ರೂಂ, ಹಾಸಿಗೆ ವ್ಯವಸ್ಥೆ…

ಮನೆಯೊಳಗೆ ಇರಿಸಿ, ಅವುಗಳಿಗೆ ನೆಚ್ಚಿನ ಆಹಾರ ಸಾಕುತ್ತೇವೆ.
ಗೋವಿಲ್ಲದೇ ನಮ್ಮ ವೇದ ಇತಿಹಾಸಗಳೇ ಇಲ್ಲ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದಿಗೂ ವೇದ, ಮರಾಣ ಮತ್ತು ಉಪನಿಷತ್ತುಗಳಲ್ಲಿ ಗೋ ಸಂಬಂಧಿ ವಿವರಗಳು ವಿಫಲವಾಗಿ ಕಾಣಸಿಗುತ್ತವೆ. ಒಟ್ಟಾರೆಯಾಗಿ ಸಂಪೂರ್ಣ ವೇದಗಳನ್ನು ಅವಲೋಕಿಸಿದಾಗ ವೇದಗಳು ‘ಗೋಮಯವಾದರೆ,

ಗೋವು ಸರ್ವ ವೇದ ಮಯವಾಗಿದೆ. ಇನ್ನು ಹಿಂದೂ ಧರ್ಮದಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಅನಾದಿ ಕಾಲದಿಂದಲೂ ಗೋವನ್ನು ದೇವರಂತೆ ಪೂಜಿಸುತ್ತಾ ಬರುತ್ತಿದ್ದೇವೆ. ಸಾಮಾನ್ಯವಾಗಿ ನಾವು ಮನೆಯಲ್ಲಿ ನಾಯಿಗಳನ್ನು, ಬೆಕ್ಕುಗಳನ್ನು ತಿನ್ನಿಸುವುದು, ನಮ್ಮ ಕುಟುಂಬದ ಸದಸ್ಯರಂತೆ ಬೆಳಸಿ
ಆದರೆ ರಾಜಸ್ಥಾನದ ಜೋ‌ಪುರ್‌ನಲ್ಲಿ ಕುಟುಂಬವೊಂದು ನಾವು ತಾಯಿಯೆಂದು ಪೂಜಿಸುವ ಗೋವುಗಳನ್ನು ನಿಜವಾಗಿಯೂ ಮಕ್ಕಳಂತೆ ಲಾಲನೆ – ಪಾಲನೆ ಮಾಡುತ್ತಿದೆ.

ವಿಶೇಷ ಅಂದ್ರೆ ಈ ಮನೆಯಲ್ಲಿ ಕರುಗಳು ಎಲ್ಲರಂತೆಯೇ ರೂಮುಗಳಲ್ಲಿ ಹಾಸಿಗಳ ಮೇಲೆ ಮಲಗಿ ನಿದ್ರೆ ಮಾಡುತ್ತವೆ. ಈ ಕುಟುಂಬದ ಸದಸ್ಯರು ಅವುಗಳನ್ನು ಎಲ್ಲರಂತೆ ಮಲಗುವ ಕೋಣೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟಿದ್ದಾರೆ.

ಹೀಗಾಗಿ ಹಸುಗಳು ಕಂಬಳಿ ಹೊದ್ದು ಹಾಸಿಗೆಯ ಮೇಲೆ ಬೆಚ್ಚಗೆ ಮಲಗಿ ಜೀವನ ಸಾಗಿಸುತ್ತಿದೆ.

Leave A Reply

Your email address will not be published.