ಅಂಗಡಿಯಲ್ಲಿ ಆಮ್ಲೆಟ್ ಮಾಡುತ್ತಿದ್ದ ವ್ಯಾಪಾರಿಗೆ ಬಿಗ್ ಶಾಕ್ | ಆಮ್ಲೆಟ್ ಮಾಡಲು ಮೊಟ್ಟೆ ಒಡೆದಾಗ ಹೊರಬಂತು ಕೋಳಿಮರಿ !!

ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಆಘಾತಕಾರಿ ವೀಡಿಯೋಗಳನ್ನು ಹರಿದಾಡುತ್ತಿರುತ್ತವೆ. ಕೆಲವು ವೀಡಿಯೋಗಳನ್ನಂತು ನೋಡಿದ ಮೇಲೆ ನಮ್ಮ ಕಣ್ಣನ್ನೇ ನಂಬದ ಹಾಗೆ ಇರುತ್ತವೆ. ಇಂತಹದೊಂದು ವೀಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Ad Widget

ಅಂಗಡಿಯೊಂದರಲ್ಲಿ ನಡೆದ ಘಟನೆಯ ವೀಡಿಯೋ ವೈರಲ್ ಆಗಿದೆ. ಅಂಗಡಿಯವನು ದೊಡ್ಡ ಬಾಣಲೆಯ ಮೇಲೆ ಮೊಟ್ಟೆ ಒಡೆದು ಆಮ್ಲೆಟ್ ಮಾಡಲು ಹೊರಟಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಈ ವೇಳೆ ಮೊಟ್ಟೆ ಒಡೆದ ನಂತರ ಏನಾಗುತ್ತದೆ ಎಂಬುದನ್ನು ನೋಡಿ ಅಲ್ಲಿದ್ದವರು ಒಂದು ಕ್ಷಣ ದಿಗ್ಬ್ರಮೆಗೊಂಡಿದ್ದಾರೆ.

Ad Widget . . Ad Widget . Ad Widget .
Ad Widget

ಏಕೆಂದರೆ ಆಮ್ಲೆಟ್ ಮಾಡುವಾಗ ಮೊಟ್ಟೆಯಿಂದ ಕೋಳಿ ಮರಿಯೊಂದು ಹೊರಬಂದಿದೆ. ಇದನ್ನು ನೋಡಿ ಸಾಮಾಜಿಕ ಜಾಲತಾಣ ಬಳಕೆದಾರರೂ ಅಚ್ಚರಿಗೊಂಡಿದ್ದಾರೆ. ನೀವು ಮೊಟ್ಟೆಯನ್ನು ಒಡೆದಾಗ ಅದರಿಂದ ಮರಿ ಹೊರಬರಬಹುದೆಂದು ಯಾವಾಗಲಾದರೂ ಭಾವಿಸಿದ್ದೀರಾ? ಚಾನ್ಸ್ ಇಲ್ಲ ಅಲ್ವಾ. ಆದರೆ ಇಲ್ಲಿ ಆ ವಿಚಿತ್ರ ಘಟನೆ ನಡೆದುಹೋಗಿದೆ.

Ad Widget
Ad Widget Ad Widget

ಆಮ್ಲೆಟ್ ಮಾಡಲು ಮೊಟ್ಟೆ ಒಡೆದಾಗ ಹೊರಬಿದ್ದ ಮರಿ ಪಾನ್‌ನ ಬಿಸಿಗೆ ಜಿಗಿದಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಕೂಡಲೇ ಆಮ್ಲೆಟ್ ಮಾಡುತ್ತಿದ್ದಾತ ಆ ಮುದ್ದು ಕೋಳಿ ಮರಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಈ ಶಾಕಿಂಗ್ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Leave a Reply

error: Content is protected !!
Scroll to Top
%d bloggers like this: