ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ರೈತರಿಗೆ ಹತ್ತನೇ ಕಂತಿನ ಹಣ ಬಿಡುಗಡೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದ ರೈತರಿಗೆ ಈ ಬಾರಿಯ ತಲಾ ಎರಡು ಸಾವಿರದಂತೆ 10ನೇ ಕಂತಿನ ಹಣ ಬಿಡುಗಡೆಗೊಳಿಸಿದೆ.

Ad Widget

10ನೇ ಕಂತಿನಡಿ ಕರ್ನಾಟಕ ರಾಜ್ಯದ ಒಟ್ಟು 34,264,01 ರೈತರಿಗೆ 685.28 ಕೋಟಿ ರೂ.ಗಳನ್ನು ರೈತರಿಗೆ ತಲಾ 2 ಸಾವಿರ ರೂ.ಗಳಂತೆ ಬಿಡುಗಡೆಯಾಗಿದ್ದು,2018-19 ರಿಂದ ಜ.1, 2022 ರ 10ನೇ ಕಂತಿನವರೆಗೆ ರಾಜ್ಯದ ಒಟ್ಟು 54 ಲಕ್ಷದ 52 ಸಾವಿರ ರೈತ ಕುಟುಂಬಗಳಿಗೆ ಒಟ್ಟು 8,707 ಕೋಟಿ, 97ಲಕ್ಷ ರೂ.ಬಿಡುಗಡೆಯಾದಂತಾಗಿದೆ.

Ad Widget . . Ad Widget . Ad Widget .
Ad Widget

ಕರ್ನಾಟಕ ರಾಜ್ಯದಲ್ಲಿ ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕಳೆದ 2019 ಫೆ.1ರಿಂದ ಅನುಷ್ಠಾನಗೊಳಿಸಿದ್ದು, ಯೋಜನೆಯಡಿ ವಾರ್ಷಿಕ ರೂ 6,000 ರೂ.ಗಳ ಆರ್ಥಿಕ ನೆರವನ್ನು ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಲಾಗುತ್ತಿದೆ. ಈ ಅನುದಾನವನ್ನು 2,000 ರೂ.ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ಇದನ್ನು ನೀಡಲಾಗುತ್ತಿದೆ. 2,850 ಕೋಟಿ 54 ಲಕ್ಷ ರೂ.ಗಳಷ್ಟು ಕರ್ನಾಟಕ ಸರ್ಕಾರದಿಂದ ಹೆಚ್ಚುವರಿಯಾಗಿ ರೈತರಿಗೆ ಹಣ ಪಾವತಿಯಾಗಿದೆ.

Ad Widget
Ad Widget Ad Widget

Leave a Reply

error: Content is protected !!
Scroll to Top
%d bloggers like this: