ಪದವಿ ಪೂರೈಸಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಸುವರ್ಣಾವಕಾಶ !! | 5,962 ಗ್ರಾ.ಪಂಗಳಲ್ಲಿ ಪಿಡಿಒ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಜ್ಯದಲ್ಲಿರುವ 5,962 ಗ್ರಾಮ ಪಂಚಾಯಿತಿಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಸಾವಿರಾರು ಹುದ್ದೆಗಳು ಖಾಲಿ ಇದ್ದು, ಆಸಕ್ತ ಆಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಪಿಡಿಒ 727, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2- 1,591, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 505 ಹುದ್ದೆಗಳು ಸೇರಿ ಒಟ್ಟು 2,800ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ.
ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ವೃಂದದ ನೇಮಕಾತಿಗಾಗಿ ಜಿಲ್ಲಾ ಪಂಚಾಯಿತಿಗಳ ಉಪ ಕಾರ್ಯದರ್ಶಿ (ಅಭಿವೃದ್ಧಿ) ನೇತೃತ್ವದಲ್ಲಿ ಪ್ರಾಧಿಕಾರ ರಚಿಸಲಾಗಿದೆ.

ಅರ್ಹತೆ ಆಧಾರದ ಮೇಲೆ ಮುಂಬಡ್ತಿ ಮೂಲಕ ಭರ್ತಿ ಮಾಡಲು ಸರ್ಕಾರದಿಂದ ಎಲ್ಲ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ.

ಹುದ್ದೆಗಳು

ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಗ್ರಾ.ಪಂ ಕಾರ್ಯದರ್ಶಿ ಗ್ರೇಡ್-1, 2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಪಿಡಿಒ ಒಟ್ಟು ಹುದ್ದೆಗಳು: 727
ಗ್ರಾ.ಪಂ ಕಾರ್ಯದರ್ಶಿ ಗ್ರೇಡ್ 1, 2 ಹುದ್ದೆಗಳು: 1,591,
ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳು: 505
ಒಟ್ಟು ಹುದ್ದೆಗಳು: 2,800

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ವೃಂದದ 343 ಹುದ್ದೆಗಳಿಗೆ (80 ಕಲ್ಯಾಣ ಕರ್ನಾಟಕ , 263 ನೇರ ನೇಮಕಾತಿ ಮಾಡಿಕೊಳ್ಳಲು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ 158 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ 55, ಕಲ್ಯಾಣ ಕರ್ನಾಟಕ ಹೊರತುಪಡಿಸಿ 103) ನೇರ ನೇಮಕಾತಿ ಮಾಡಲು ನಿರ್ಧರಿಸಲಾಗಿದೆ.

ಪಿಡಿಒ, ಎಫ್‌ಡಿಎ ಪರೀಕ್ಷೆಗಾಗಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಸಾಕಷ್ಟು ಅಭ್ಯರ್ಥಿಗಳು ಅನೇಕ ವರ್ಷಗಳಿಂದ ಸಿದ್ಧತೆ ನಡೆಸಿದ್ದು, ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗುವುದನ್ನೇ ಕಾಯುತ್ತಿದ್ದಾರೆ.

ಯಾವ ಜಿಲ್ಲೆಗಳಲ್ಲಿ ಎಷ್ಟು ಪಿಡಿಒ ಖಾಲಿ ಹುದ್ದೆಗಳಿವೆ?

ಬಾಗಲಕೋಟೆ: 5
ಬೆಳಗಾವಿ: 32
ಬಳ್ಳಾರಿ: 53
ಬೆಂಗಳೂರು ಗ್ರಾಮಾಂತರ: 4
ಬೀದರ್‌: 32
ಚಾಮರಾಜನಗರ: 27
ಚಿಕ್ಕಬಳ್ಳಾಪುರ: 15
ಚಿಕ್ಕಮಗಳೂರು: 27
ಚಿತ್ರದುರ್ಗ: 3
ದಕ್ಷಿಣ ಕನ್ನಡ: 30
ದಾವಣಗೆರೆ: 45
ಧಾರವಾಡ: 18
ಗದಗ: 24
ಹಾಸನ: 11
ಹಾವೇರಿ: 38
ಕಲಬುರಗಿ: 67
ಕೊಡಗು: 24
ಕೋಲಾರ: 23
ಕೊಪ್ಪಳ: 17
ಮಂಡ್ಯ: 14
ಮೈಸೂರು: 11
ರಾಯಚೂರು: 34
ರಾಮನಗರ: 3
ಶಿವಮೊಗ್ಗ: 31
ತುಮಕೂರು: 51
ಉಡುಪಿ: 17
ಉತ್ತರ ಕನ್ನಡ: 48
ವಿಜಯಪುರ: 5
ಯಾದಗಿರಿ: 18

ಹೆಚ್ಚಿನ ಮಾಹಿತಿಗೆ: https://www.karnatakacareers.in/karnataka-govt-jobs/

Leave A Reply

Your email address will not be published.