ಭೌತಶಾಸ್ತ್ರ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಕಡಬದ ರೋಹಿತ್ ಪಿ.ಎಸ್.ರಿಗೆ ಡಾಕ್ಟರೇಟ್ ಪದವಿ!!

ಕಡಬ ನಿವಾಸಿ ರೋಹಿತ್ ಪಿ.ಎಸ್ ರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರಕಿದೆ.Growth And Charecterization Of Alkaline Earth Elements Doped single Crystals’ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ.ಎಚ್.ಡಿ ಒಲಿದಿದ್ದು, ಹಳ್ಳಿ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕಡಬ ಪಿಜಕಳ ನಿವಾಸಿ ಸುಂದರ ಪೂಜಾರಿ ಹಾಗೂ ಕುಸುಮಾವತಿ ದಂಪತಿಯ ಪುತ್ರರಾಗಿ 1989 ರಲ್ಲಿ ಜನಿಸಿದ ರೋಹಿತ್, ತನ್ನ ಬಾಲ್ಯ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ಬಿಸ್ಸಿ,ಸ್ನಾತಕೋತ್ತರ ಪದವಿ ಪಡೆದು (NET) ನ್ಯಾಷನಲ್ ಎಂಟ್ರಾನ್ಸ್ ಟೆಸ್ಟ್ ನಲ್ಲಿ ದೇಶಕ್ಕೆ 53 ರಾಂಕ್ ಪಡೆದು,KSET, GATE ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿದ್ದಾರೆ.

ಪ್ರಸ್ತುತ ರೋಹಿತ್ ಮಡಿಕೇರಿಯ FMKMC ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.