‘ಕೋಳಿ ಮಾರಾಟ ನಿಲ್ಲಿಸಿ, ಇಲ್ಲವಾದಲ್ಲಿ ಜೈಲಿಗೆ ಹೋಗಲು ತಯಾರಾಗಿ’ ಎಂದು ಖಡಕ್ ವಾರ್ನಿಂಗ್ ಕೊಟ್ಟ ಬಿಜೆಪಿ ಶಾಸಕ

ಹೊಸದಿಲ್ಲಿ:ಕೋಳಿ ಮಾರಾಟ ಮಾಡಿದ್ದಕ್ಕೆ ಗರಂ ಆದ ಗಾಝಿಯಾಬಾದ್‍ನ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ಮಾಲೀಕರಿಗೆ ಖಡಕ್ ವಾರ್ನಿಂಗ್ ನೀಡಿ ತಮ್ಮ ಕ್ಷೇತ್ರದಲ್ಲಿ ಕೋಳಿ ಮಾರಾಟ ಮಾಡುವ ಹಾಗಿಲ್ಲ ಎಂದು ಹೇಳಿದ್ದಾರೆ.

ಇದೀಗ ಶಾಸಕರಾದ ನಂದ್ ಕಿಶೋರ್ ಗುರ್ಜರ್ ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಸೋಮವಾರ ಲೋನಿ ಗಡಿ ಭಾಗಕ್ಕೆ ಆಗಮಿಸಿದ ಶಾಸಕ ಅಲ್ಲಿ ಕೋಳಿ ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರುಗಳಿಗೆ ಬೆದರಿಕೆಯೊಡ್ಡಿ ಇನ್ನು ಮುಂದೆ ಅಲ್ಲಿ ಕೋಳಿ ಮಾರಾಟಕ್ಕೆ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ “ಇಲ್ಲಿ ಕೇಳಿ, ಇದನ್ನೆಲ್ಲಾ ನಿಲ್ಲಿಸಿ, ಓಡಿ ಹೋಗಿ ಇಲ್ಲವೇ ನೀವು ಜೈಲಿಗೆ ಹೋಗುತ್ತೀರಿ. ಎಷ್ಟೇ ಬೆಲೆ ತೆತ್ತರೂ ಜಾಮೀನು ದೊರಕುವುದಿಲ್ಲ” ಎಂದು ಒಬ್ಬ ಅಂಗಡಿ ಮಾಲೀಕನನ್ನು ಉದ್ದೇಶಿಸಿ ಶಾಸಕ ಹೇಳುತ್ತಿರುವುದು ವೀಡಿಯೋದಲ್ಲಿ ನೋಡಬಹುದು.

“ಈ ಅಕ್ರಮ ವಹಿವಾಟನ್ನು ಇಲ್ಲಿ ನಿಲ್ಲಿಸಿ, ನಾಳೆ ಇಲ್ಲಿ ಇವುಗಳು ಕಾಣಬಾರದು, ದಿಲ್ಲಿಗೆ ಹೋಗಿ ಮಾರಾಟ ಮಾಡಿ, ಲೋನಿ ಕ್ಷೇತ್ರದಲ್ಲಿ ಕೋಳಿ ಮಾರಾಟ ಮಾಡುವ ಹಾಗಿಲ್ಲ” ಎಂದು ಅವರು ಹೇಳಿದ್ದಾರೆ.ಅಂಗಡಿ ಮುಚ್ಚಲು ಸೂಚಿಸಿ ನಂತರ ಸ್ಥಳೀಯರನ್ನುದ್ದೇಶಿಸಿ “ನಿಮಗೆ ಕೆಟ್ಟ ವಾಸನೆ ಬರುವುದಿಲ್ಲವೇ” ಎಂದು ಅವರು ಕೇಳುತ್ತಾರೆ. ಆದರೆ ಜನರೇನು ಉತ್ತರ ನೀಡಿದ್ದಾರೆಂಬುದುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

Leave A Reply

Your email address will not be published.