ಖಾದ್ಯ ತೈಲಗಳ ಬೆಲೆ ಶೇ.15 ಇಳಿಕೆ | ಗುಡ್ ನ್ಯೂಸ್ ನೀಡಿದ ಎಸ್‌ಇಎ

ಖಾದ್ಯ ತೈಲ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಇದೀಗ ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌(ಎಸ್‌ಇಎ) ಸಿಹಿ ಸುದ್ದಿ ಕೊಟ್ಟಿದೆ.

ಅದಾನಿ ವಿಲ್ಮರ್‌, ರುಚಿ ಸೋಯಾ ಸೇರಿ ಅನೇಕ ಸಂಸ್ಥೆಗಳು ತಮ್ಮ ಅಡುಗೆ ಎಣ್ಣೆಯ ಗರಿಷ್ಠ ಚಿಲ್ಲರೆ ಬೆಲೆ(ಎಂಆರ್‌ಪಿ)ಯನ್ನು ಶೇ.10-15 ಇಳಿಕೆ ಮಾಡಿದೆ.

ಪ್ರಮುಖವಾಗಿ ಅದಾನಿ ವಿಲ್ಮರ್‌ ಸಂಸ್ಥೆ(ಫಾರ್ಚೂನ್‌ ಬ್ರ್ಯಾಂಡ್‌), ರುಚಿ ಸೋಯಾ(ಮಹಾಕೋಶ್‌, ಸನ್‌ರಿಚ್‌, ರುಚಿ ಗೋಲ್ಡ್‌, ನ್ಯುಟ್ರೆಲ್ಲಾ), ಇಮಾಮಿ, ಬುಂಜೆ(ದಾಲ್ಡಾ, ಗಗನ್‌, ಚಂಬಲ್‌ ಬ್ರ್ಯಾಂಡ್‌) ಮತ್ತು ಜೆಮಿನಿ(ಫ್ರೀಡಂ ಸನ್‌ಫ್ಲವರ್‌ ಆಯಿಲ್‌) ಸಂಸ್ಥೆಗಳು ಖಾದ್ಯ ತೈಲದ ಬೆಲೆ ಇಳಿಸಿವೆ.

ಅವುಗಳೊಂದಿಗೆ ಸಿಒಎಫ್ಸಿಒ, ಫ್ರಿಗೊರಿಫಿಕೋ ಅಲ್ಲಾನ, ಗೋಕುಲ್‌ ಆಗ್ರೊ ಹಾಗೂ ಮತ್ತಿತರ ಸಂಸ್ಥೆಗಳೂ ಖಾದ್ಯ ತೈಲದ ಬೆಲೆ ಇಳಿಸಿವೆ ಎಂದು ಎಸ್‌ಇಎ ತಿಳಿಸಿದೆ.

Leave A Reply

Your email address will not be published.