ಪಿಡ್ಕ್ ಪ್ರಿಯರ ಗಮನಕ್ಕೆ ಇದೊಂದು ಮಾಹಿತಿ!! ಅಮೃತ ಕುಡಿಯುವಾಗ ತಪ್ಪಿಯೂ ಇದನ್ನು ತಿನ್ನಬೇಡಿ-ತಿಂದರೆ ಲಿವರ್ ಡ್ಯಾಮೇಜ್ ಗ್ಯಾರಂಟಿ

ಇತ್ತೀಚಿಗೆ ಮದ್ಯ ಪ್ರಿಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪಾರ್ಟಿ, ಪಬ್ ಗಳಲ್ಲಿ ಕುಡಿಯುವುದು ಈಗಿನ ಕಾಲದ ಫ್ಯಾಶನ್ ಎಂದೇ ಹೇಳಬಹುದು. ಮಧ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ, ಆದರೂ ಕೂಡ ಮದ್ಯ ಸೇವಿಸುವವರಿಗೆ ಎಷ್ಟು ಕುಡಿಬೇಕು? ಎಂಬುದರ ಬಗ್ಗೆ ತಿಳುವಳಿಕೆ ಇರಬೇಕಾದದ್ದು ಒಳ್ಳೆಯದು.

ಮುಖ್ಯವಾಗಿ ಮದ್ಯಪಾನ ಕುಡಿದ ನಂತರ ಕೆಲವು ಆಹಾರ ಅಥವಾ ಪಾನೀಯಗಳಿಂದ ತಪ್ಪದೇ ದೂರವಿರಬೇಕು. ಹಾಗಾದ್ರೆ ಯಾವೆಲ್ಲ ಆಹಾರಗಳಿಂದ ದೂರ ಉಳಿಯಬೇಕು ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಚಾಕೋಲೇಟ್
ಮದ್ಯಪಾನ ಸೇವಿಸಿದ ನಂತರ ಯಾವುದೇ ಕಾರಣಕ್ಕೂ ಚಾಕೋಲೆಟ್ ಗಳನ್ನು ತಿನ್ನಬಾರದು. ಬಹುತೇಕರು ತಮ್ಮ ಬಾಯಿಯ ವಾಸನೆಯಿಂದ ತಕ್ಷಣ ಮುಕ್ತಿ ಹೊಂದಲು ಚಾಕೋಲೆಟ್ ಗಳನ್ನು ತಿನ್ನುತ್ತಾರೆ. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗುತ್ತದೆ. ಅಲ್ಲದೇ ಅಸಿಡಿಟಿ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಮದ್ಯಪಾನ ಸೇವನೆ ಮಾಡಿದ ನಂತರ ಚಾಕೋಲೆಟ್ ಗಳ ಸೇವನೆಯಿಂದ ದೂರವಿರಿ.

ಬೇಯಿಸಿದ ಆಹಾರ
ಮದ್ಯಪಾನ ಮಾಡಿದ ನಂತರ ಚೆನ್ನಾಗಿ ಬೇಯಿಸಿದ ಆಹಾರದ ಜೊತೆ ಜೊತೆಗೆ ಉಪ್ಪು ಹೆಚ್ಚಾಗಿ ಇರುವ ಆಹಾರಗಳನ್ನು ಸೇವಿಸಬಾರದು. ಇದರಿಂದಾಗಿ ಅತ್ಯಂತ ವೇಗವಾಗಿ ಶರೀರದಲ್ಲಿನ ನೀರು ಕಡಿಮೆಯಾಗುತ್ತದೆ. ಇದರ ಪರಿಣಾಮ ದೇಹದಲ್ಲಿನ ಶಕ್ತಿಯು ಪೂರ್ತಿಯಾಗಿ ತಗ್ಗಿಸಿಬಿಡುತ್ತದೆ. ಇದರ ಬದಲಾಗಿ ಗ್ರಿಲ್ಡ್ ಚಿಕನ್ ತಿನ್ನುವುದು ಉತ್ತಮ.

ಕಾಫಿ
ಮದ್ಯಪಾನದ ನಂತರ ತಿಳಿಯದೇ ಕೂಡ ಕಾಫಿ ಕುಡಿಯಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮದ್ಯಪಾನದ ನಂತರ ಕಾಫಿ ಕುಡಿದರೆ, ಮರುದಿನ ಬೆಳಗ್ಗೆ ವಾಂತಿಯಾಗುವ ಎಲ್ಲಾ ಅವಕಾಶಗಳು ಇರುತ್ತವೆ. ಮದ್ಯ ಸೇವಿಸಿದಾಗ ಹ್ಯಾಂಗೋವರ್ ಗೆ ಸಿಕ್ಕಿ ಹಾಕಿಕೊಳ್ಳುವುದಕ್ಕೆ ಇದು ಕೂಡ ಪ್ರಮುಖ ಕಾರಣವಾಗಿರಬಹುದು.

ಬ್ರೆಡ್
ಮದ್ಯಪಾನವನ್ನು ಸೇವಿಸುವ ಸಮಯದಲ್ಲಿ ಹೊಟ್ಟೆ ತುಂಬಿಸಲು ಬ್ರೆಡ್ ತಿನ್ನುವುದು ಅತ್ಯಂತ ಕೆಟ್ಟ ಅಭ್ಯಾಸ ಎಂದೇ ಹೇಳಬಹುದು. ಯಾವುದೇ ಕಾರಣಕ್ಕೂ ಬ್ರೆಡ್ ಅನ್ನು ಮದ್ಯಪಾನ ಮಾಡುವಾಗ ತಿನ್ನಬಾರದು. ಏಕೆಂದರೆ, ಬ್ರೆಡ್ ಶರೀರದಲ್ಲಿನ ನೀರಿನಾಂಶವನ್ನು ಕಡಿಮೆ ಮಾಡಿ, ಡೀಹೈಡ್ರೇಟ್ ಮಾಡುತ್ತದೆ.

ಬೀನ್ಸ್
ಮುಖ್ಯವಾಗಿ ಬೀನ್ಸ್ ನಲ್ಲಿ ಅಧಿಕವಾಗಿ ಕಬ್ಬಿಣದ ಅಂಶವಿರುತ್ತದೆ. ಹಾಗಾಗಿಯೇ ಮದ್ಯಪಾನ ಮಾಡುವಾಗ ಅಥವಾ ನಂತರ ಬೀನ್ಸ್ ನಂತಹ ತರಕಾರಿಗಳನ್ನು ತಿನ್ನಬಾರದು. ಮದ್ಯಪಾನದ ನಂತರ ಬೀನ್ಸ್ ನಿಂದ ತಯಾರಿಸಿದ ಆಹಾರ ಸೇವಿಸಿದಾಗ ದೇಹದ ಮೇಲೆ ವ್ಯತಿರಿಕ್ತವಾದ ಪರಿಣಾಮ ಉಂಟು ಮಾಡುತ್ತದೆ.

ಸಾಮಾನ್ಯವಾಗಿ ಮದ್ಯಪಾನ ಮಾಡಿದರೆ ಲಿವರ್ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಿರುತ್ತಾರೆ. ಇದು ನಿಜವೇ ಆಗಿದ್ದರೂ ಕೂಡ, ಕೆಲವು ಅಧ್ಯಯನದ ಪ್ರಕಾರ ಆಫ್ರಿಕಾದಲ್ಲಿ ಮದ್ಯಪಾನ ಮಾಡುವವರು ಹಸಿರು ಮೆಣಸಿನಕಾಯಿಯನ್ನು ತಿನ್ನುತ್ತಾರೆ. ಇವರಿಗೆ ಯಾವುದೇ ರೀತಿಯ ಲಿವರ್ ಸಮಸ್ಯೆ ಇಲ್ಲವೆಂದು ತಿಳಿದು ಬಂದಿದೆ.
ಅದೇ ರೀತಿ ಮೆಣಸಿನಕಾಯಿಯನ್ನು ತಿನ್ನದೇ ಮದ್ಯಪಾನ ಸೇವಿಸುವವರಿಗೆ ಲಿವರ್ ಸಮಸ್ಯೆಯ ಜೊತೆ ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳು ಕಂಡು ಬಂದಿದೆ.
ಹಾಗಾಗಿ ಮದ್ಯಪಾನ ಮಾಡುವ ಸಮಯದಲ್ಲಿ ಮೆಣಸಿನಕಾಯಿಯನ್ನು ತಿನ್ನುವುದು ಒಳ್ಳೆಯದು ಎಂದು ತಜ್ಞರು ಸೂಚಿಸುತ್ತಾರೆ.

ಈ ಸಲಹೆಗಳನ್ನು ಪ್ರತಿದಿನ ಕುಡಿಯುವವರು ಹಾಗೆಯೇ ಅಪರೂಪಕ್ಕೊಮ್ಮೆ ಕುಡಿಯುವವರು ಕೂಡ ಪಾಲಿಸಬೇಕು. ಪ್ರತಿನಿತ್ಯ ಕುಡಿಯುವುದು ಅನೇಕ ಆರೋಗ್ಯ ಸಮಸ್ಯೆಗೆ ಆಹ್ವಾನ ಮಾಡಿದಂತೆ. ಹಾಗಂತ ಒಮ್ಮೆಲೆ ಕುಡಿಯುವುದನ್ನು ಬಿಟ್ಟರೂ ಆರೋಗ್ಯಕ್ಕೆ ತೊಂದರೆಯೇ. ಆದರೂ ಪಿಡ್ಕ್ ನಿಂದ ದೂರ ಇರುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲವೇ??

Leave A Reply

Your email address will not be published.