ಮನೆಯಲ್ಲಿನ ನೋಟಿನ ರಾಶಿ ಕಂಡು ತಬ್ಬಿಬ್ಬಾದ ಅಧಿಕಾರಿಗಳು | ಬರೋಬ್ಬರಿ 150 ಕೋಟಿ ನಗದು ವಶಕ್ಕೆ

ಉತ್ತರ ಪ್ರದೇಶ : ಸುಗಂಧ ದ್ರವ್ಯ ಇಂಡಸ್ಟ್ರಿ ನಡೆಸುತ್ತಿರುವ ಉತ್ತರ ಪ್ರದೇಶದ ಕಾನ್ಪುರ ಮೂಲದ ಉದ್ಯಮಿ ಪಿಯೂಷ್‌ ಜೈನ್‌ಗೆ ಸಂಬಂಧಿತ ಪ್ರದೇಶಗಳ ಮೇಲೆ ನಡೆದ ದಾಳಿಯ ವೇಳೆ ಈವರೆಗೆ ಬರೋಬ್ಬರಿ 150 ಕೋಟಿ ರೂಪಾಯಿ ನಗದು ಹಣ ವಶಕ್ಕೆ ಪಡೆದಿರುವುದಾಗಿ ಆದಾಯ ತೆರಿಗೆ ಇಲಾಖೆಯ ಮೂಲಗಳು ಶುಕ್ರವಾರ ತಿಳಿಸಿದ್ದಾರೆ.

ಐಟಿ ಮತ್ತು ಜಿಎಸ್‌ಟಿ ಅಧಿಕಾರಿಗಳ
ದಾಳಿಗೆ ಸಂಬಂಧಿಸಿದ ಫೋಟೋಗ್ರಾಫ್‌ಗಳು ಬಿಡುಗಡೆಯಾಗಿದ್ದು, ಅದರಲ್ಲಿ ನೋಟಿನ ಕಂತೆಗಳ ರಾಶಿಯನ್ನು ಕಾಣಬಹುದಾಗಿದೆ. ನೋಟಿನ ಕಂತೆಗಳನ್ನು ಬಹುದೊಡ್ಡ ವಾರ್ಡ್‌ರೋಬ್‌ಗಳಲ್ಲಿ ತುಂಬಿಡಲಾಗಿತ್ತು.

ಎಲ್ಲಾ ನೋಟಿನ ಕಂತೆಯನ್ನು ಪ್ಲಾಸ್ಟಿಕ್ ಕವರ್‌ನಿಂದ ಸುತ್ತಿ, ಹಳದಿ ಟೇಪ್‌ನಿಂದ ಸುತ್ತಿದ ಬಂಡಲ್‌ಗಳು ಫೋಟೋದಲ್ಲಿ ಕಾಣುತ್ತದೆ. ಮತ್ತೊಂದು ಕೋಣೆಯೊಂದರ ನೆಲದ ಮೇಲೆ ಕುಳಿತಿರುವುದನ್ನು ಮತ್ತು ಅವರ ಸುತ್ತ ನೋಟಿನ ಕಂತೆಗಳ ರಾಶಿ ಹಾಗೂ ಮೂರು ಹಣ ಎಣಿಸುವ ಯಂತ್ರಗಳನ್ನು ಕಾಣಬಹುದು.

ಇದುವರೆಗಿನ ನೋಟಿನ ಎಣಿಕೆಯ ಪ್ರಕಾರ ಉದ್ಯಮಿ ಮನೆಯಲ್ಲಿ 150 ಕೋಟಿ ರೂ. ನಗದು ಹಣ ಪತ್ತೆಯಾಗಿದೆ. ತೆರಿಗೆ ವಂಚನೆ ಆರೋಪದ ಮೇಲೆ ಜಿಎಸ್‌ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಉದ್ಯಮಿ ಮನೆಯಲ್ಲಿ ಕಂಡುಬಂದು ನೋಟಿನ ಕಂತೆಗಳನ್ನು ನೋಡಿ ಐಟಿ ಇಲಾಖೆಗೆ ಮಾಹಿತಿ ನೀಡಿದ ಬಳಿಕ ದಾಳಿಯಲ್ಲಿ ಕೈಜೋಡಿಸಿದ್ದಾರೆ.

Leave A Reply