ಕುತೂಹಲ,ಆತಂಕಕ್ಕೆ ಕಾರಣವಾಯಿತು ಗುರುತಿಸಲಾಗದ ಹಾರುವ ವಸ್ತು | ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು?
2021ರ ಡಿಸೆಂಬರ್ 20ರಂದು ರಾತ್ರಿ 7.15ರ ಸುಮಾರಿಗೆ ಆಕಾಶದಲ್ಲಿ ಸಾಲುಗಟ್ಟಿ ಹೋದ ನಕ್ಷತ್ರಗಳನ್ನು ಹೋಲುವ ಆಕಾಶಕಾಯಗಳನ್ನು ನೋಡಿ ಆಶ್ಚರ್ಯ ,ಆತಂಕ ,ಕುತೂಹಲ ಹೊರಹಾಕಿದ್ದಾರೆ. ಈ ನಕ್ಷತ್ರಗಳ ಸಾಲು ಗುರುತಿಸಲಾಗದ ಹಾರುವ ವಸ್ತುಗಳು ಹೌದೋ ಅಲ್ಲವೋ ಎಂಬುದು ಖಗೋಳ ಶಾಸ್ತ್ರಜ್ಞರು ವಿವರಿಸಬೇಕಿದೆ..ಒಟ್ಟಿನಲ್ಲಿ ಗುರುತಿಸಲಾಗದ ಹಾರುವ ವಸ್ತುಗಳ ಮಾಹಿತಿ ಇಲ್ಲಿ ನೀಡಲಾಗಿದೆ. ವಿಶ್ವದಾದ್ಯಂತ ವರದಿಯಾಗಿರುವ ‘ಗುರುತಿಸಲಾಗದ ಹಾರುವ ವಸ್ತು’ಗಳ ಘಟನೆಗಳು, ಖಗೋಳಾಸಕ್ತರಿಂದ ಹಿಡಿದು ಸೇನಾಪಡೆಗಳವರೆಗೆ ಹಲವರ ನಿದ್ದೆಗೆಡಿಸಿವೆ ಸೌರವ್ಯೂಹದ ಬಗೆಗಿನ ತಿಳಿವಳಿಕೆ ಹೆಚ್ಚಾದ ದಿನಗಳಿಂದ ಆಸಕ್ತರು ಹಾಗೂ ಜನಸಾಮಾನ್ಯರೆನ್ನದೆ ಎಲ್ಲರನ್ನೂ …