ಜಗತ್ತಿನ ಅತ್ಯಂತ ಕಡು ಕಪ್ಪು ಸುಂದರಿ ಈಕೆ | ಆಕೆಯ ಈ ಬಣ್ಣಕ್ಕಾಗೇ ಆಕೆ ಸೇರಿದ್ದಾಳೆ ಗಿನ್ನೆಸ್ ಬುಕ್ !!

ನ್ಯೂಯಾರ್ಕ್: ಈಕೆ ಪ್ರಪಂಚದ ಕಡು ಕಪ್ಪು ಸುಂದರಿ. ಕಪ್ಪು ಬಣ್ಣ ಎನ್ನುವುದು ಈಕೆಯ ಪಾಲಿಗೆ ಒಲಿದು ಬಂದ ವರ. ಆಕೆ ಅದೆಷ್ಟು ಕಪ್ಪು ಇದ್ದಾಳೆ ಎಂದರೆ, ಕಪ್ಪು ಪೈಂಟ್ ಅನ್ನು ಮೈಯ್ ಕೈ ಗೆ ಬಳಿದು ಬಳಿ ಬಂದಿದ್ದಾಳೆಯೋ ಎಂಬಂತೆ ಕಾಣುತ್ತಿದೆ.

ಕಾಳ ಕತ್ತಲನ್ನು ಮೈಮೇಲೆ ಹೊದ್ದುಕೊಂಡಂತೆ ಇರುವ ಈ ಕೃಷ್ಣ ಸುಂದರಿಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಅತೀಯಾದ ಕಪ್ಪು ಬಣ್ಣ ಹೊಂದಿದ ಆಫ್ರಿಕನ್ ಪ್ರಜೆಯಾಗಿರುವ ಈ ಮಹಿಳೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸೇರ್ಪಡೆಯಾಗಿದ್ದಾಳೆ, ವಿಶ್ವದ ಅತ್ಯಂತ ಕಪ್ಪಗಿರುವ ಮಹಿಳೆ ಎಂದು ಈಕೆಯನ್ನು ಗುರುತಿಸಲಾಗಿದೆ ಎಂದು ಎಲ್ಲೆಡೆ ಹರಿದಾಡುತ್ತಿದೆ.

ಮುಖ ಕೈ ಕಾಲುಗಳು ಮಾತ್ರವಲ್ಲ, ಒಳ ಅಂಗಾಂಗಗಳು ಕೂಡಾ ಕಡು ಮಿಂಚುವ ಕಪ್ಪಾಗಿರುವ ಈಕೆಯ ಹೆಸರು ನ್ಯಾಕೀಮ್ ಗಲ್ವೇಚ್. ದಕ್ಷಿಣ ಸುಡಾನ್ ನ ಈ ಕಡು ಕಪ್ಪು ಸುಂದರಿ ಹುಟ್ಟುತ್ತಲೇ ಕಪ್ಪುಕಪ್ಪು ದೇಹದ ಜತೆಗೇ ಜನ್ಮ ತಾಳಿದ್ದಾರೆ. ಮೊದಮೊದಲು ಆಕೆಗೆ ತನ್ನ ಕಪ್ಪು ಬಣ್ಣದ ಬಗ್ಗೆ ಕೀಳರಿಮೆ ಇತ್ತು. ಇದೀಗ ಆಕೆಗೆ ಅದೇ ಬಣ್ಣ ಫೇಮ್ ತಂದುಕೊಟ್ಟಿದೆ. ಆಕೆಗೆ ಈ ಕಪ್ಪೇ ಬಣ್ಣದ ಲೋಕದಲ್ಲಿ ಬದುಕು ಕಲ್ಪಿಸಿದೆ. ಆಕೆ ಮಾಡೆಲಿಂಗ್ ನಲ್ಲಿ ಕಪ್ಪುಬಣ್ಣದಲ್ಲೇ ಮಿಂಚುತ್ತಿದ್ದಾಳೆ.

ಈಕೆಯ ಫೋಟೋ ಸಕತ್ ವೈರಲ್ ಆಗಿದ್ದು, ಈಗ ಆಕೆ ತುಂಬಾ ಚರ್ಚೆಗೆ ದೊಡ್ಡ ವಿಷಯ. ಈಕೆಯನ್ನು ‘ಕತ್ತಲೆಯ ರಾಣಿ’ (‘Queen of Darkness) ಎಂದು ಗಿನ್ನೆಸ್ ದಾಖಲೆಯಲ್ಲಿ ಹೆಸರಿಸಲಾಗಿದೆ ಎಂದು ಪೋಸ್ಟ್ ಮಾಡಲಾಗಿದೆ. ಈ ರೀತಿ ಮಹಿಳೆಯೊಬ್ಬಳನ್ನು ಆಕೆಯ ಬಣ್ಣದ ಆಧಾರದ ಮೇಲೆ ಕತ್ತಲೆ, ಬೆಳಕು ಎಂದೆಲ್ಲಾ ಗುರುತಿಸುವುದು ದೊಡ್ಡ ತಪ್ಪು ಎಂದು ಆಫ್ರಿಕಾದಲ್ಲಿ ಕೂಡ ಅಭಿಯಾನವೇ ಶುರುವಾಗಿದೆ. ಸದ್ಯ ಗಿನ್ನೆಸ್ ಸಂಸ್ಥೆ ವಕ್ತಾರರು ಆಕೆಗೆ ಕಪ್ಪು ಬಣ್ಣದ ಕಾರಣಕ್ಕೆ ಗಿನ್ನೆಸ್ ಪ್ರಮಾಣಪತ್ರ ನೀಡಿಲ್ಲ ಅಂದಿದ್ದಾರೆ.

Leave A Reply

Your email address will not be published.