Day: December 19, 2021

ಉದ್ಯೋಗ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ!! ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವು ಹುದ್ದೆ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯ ಹಾಗೂ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ದಲ್ಲಿ ಖಾಲಿ ಇರುವ ಹಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 206 ಸೀನ್ ಆಫ್ ಕ್ರೈಂ ಆಫೀಸರ್ ಹುದ್ದೆಗಳಿದ್ದು, ಜನವರಿ 15 2022 ರ ಒಳಗಾಗಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಿಂದ ಪದವಿ ಪಡೆದಿದ್ದು, ವಿಜ್ಞಾನ ವಿಷಯದಲ್ಲಿ ಶೇ.55 ಅಂಕ ಗಳಿಸಿರಬೇಕು. ವಯೋಮಿತಿಯಲ್ಲಿ …

ಉದ್ಯೋಗ ಆಕಾಂಕ್ಷಿಗಳಿಗೊಂದು ಸಿಹಿ ಸುದ್ದಿ!! ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವು ಹುದ್ದೆ Read More »

ಜಗತ್ತಿನ ಅತ್ಯಂತ ಕಡು ಕಪ್ಪು ಸುಂದರಿ ಈಕೆ | ಆಕೆಯ ಈ ಬಣ್ಣಕ್ಕಾಗೇ ಆಕೆ ಸೇರಿದ್ದಾಳೆ ಗಿನ್ನೆಸ್ ಬುಕ್ !!

ನ್ಯೂಯಾರ್ಕ್: ಈಕೆ ಪ್ರಪಂಚದ ಕಡು ಕಪ್ಪು ಸುಂದರಿ. ಕಪ್ಪು ಬಣ್ಣ ಎನ್ನುವುದು ಈಕೆಯ ಪಾಲಿಗೆ ಒಲಿದು ಬಂದ ವರ. ಆಕೆ ಅದೆಷ್ಟು ಕಪ್ಪು ಇದ್ದಾಳೆ ಎಂದರೆ, ಕಪ್ಪು ಪೈಂಟ್ ಅನ್ನು ಮೈಯ್ ಕೈ ಗೆ ಬಳಿದು ಬಳಿ ಬಂದಿದ್ದಾಳೆಯೋ ಎಂಬಂತೆ ಕಾಣುತ್ತಿದೆ. ಕಾಳ ಕತ್ತಲನ್ನು ಮೈಮೇಲೆ ಹೊದ್ದುಕೊಂಡಂತೆ ಇರುವ ಈ ಕೃಷ್ಣ ಸುಂದರಿಯ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿದೆ. ಅತೀಯಾದ ಕಪ್ಪು ಬಣ್ಣ ಹೊಂದಿದ ಆಫ್ರಿಕನ್ ಪ್ರಜೆಯಾಗಿರುವ ಈ ಮಹಿಳೆ ಗಿನ್ನೆಸ್ …

ಜಗತ್ತಿನ ಅತ್ಯಂತ ಕಡು ಕಪ್ಪು ಸುಂದರಿ ಈಕೆ | ಆಕೆಯ ಈ ಬಣ್ಣಕ್ಕಾಗೇ ಆಕೆ ಸೇರಿದ್ದಾಳೆ ಗಿನ್ನೆಸ್ ಬುಕ್ !! Read More »

ನರಸಿಂಹಗಡದಲ್ಲಿ ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳದ್ದೇ ಕಾರುಬಾರು | ಟಿಕೇಟ್ ನೀಡದೆ ಹಣ ವಸೂಲಿ ಮಾಡುವ ಸಿಬ್ಬಂದಿಗಳು, ಟಿಕೆಟ್ ಪಡೆಯದೆ ಗಡಾಯಿಕಲ್ಲು ಪ್ರವೇಶಿಸುವ ಪ್ರವಾಸಿಗರಿಂದ ರಕ್ಷಿತ ಸ್ಮಾರಕಗಳಿಗೆ ಹಾನಿ

ಬೆಳ್ತಂಗಡಿ : ಕಾರ್ಕಳ ವನ್ಯಜೀವಿ ವಿಭಾಗದ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದೊಳಗಿರುವ ಗಡಾಯಿ ಕಲ್ಲು ರಕ್ಷಿತ ಸ್ಮಾರಕಕ್ಕೆ ರಕ್ಷಣೆಯಿಲ್ಲದಂತೆ ಕಂಡುಬಂದಿದೆ. ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳ ಕಳ್ಳಾಟದಿಂದ ಅಧಿಕೃತವಾಗಿ ಟಿಕೇಟ್ ಪಡೆಯದೆ ಪ್ರತೀದಿನ ಪ್ರವಾಸಿಗರು ರಕ್ಷಿತ ಸ್ಮಾಕರ ಜಮಲಾಬಾದ್‌ಗೆ ಪ್ರವೇಶಿಸುತ್ತಿದ್ದು, ಸ್ಮಾರಕ ಸುತ್ತ ಅಸಭ್ಯವಾಗಿ ವರ್ತಿಸುವುದು ಸ್ಮಾರಕಕ್ಕೆ ಹಾನಿಗೈಯುವ ಘಟನೆ ಯಥೇಚ್ಚವಾಗಿ ನಡೆಯುತ್ತಿದೆ. ಬೆಳ್ತಂಗಡಿ ತಾಲೂಕಿನ ನಡ ಗ್ರಾಮ ವ್ಯಾಪ್ತಿ ವನ್ಯಜೀವಿ ವಿಭಾಗದ ಕುದುರೆ ಮುಖ ರಾಷ್ಟ್ರೀಯ ಉದ್ಯಾನದೊಳಗಿರು ಐತಿಹಾಸಿಕ ನರಸಿಂಹಗಡ ಅತ್ಯಂತ …

ನರಸಿಂಹಗಡದಲ್ಲಿ ಅರಣ್ಯ ಇಲಾಖೆ ಹಾಗೂ ಪುರಾತತ್ವ ಸರ್ವೇಕ್ಷಣ ಇಲಾಖೆ ಸಿಬ್ಬಂದಿಗಳದ್ದೇ ಕಾರುಬಾರು | ಟಿಕೇಟ್ ನೀಡದೆ ಹಣ ವಸೂಲಿ ಮಾಡುವ ಸಿಬ್ಬಂದಿಗಳು, ಟಿಕೆಟ್ ಪಡೆಯದೆ ಗಡಾಯಿಕಲ್ಲು ಪ್ರವೇಶಿಸುವ ಪ್ರವಾಸಿಗರಿಂದ ರಕ್ಷಿತ ಸ್ಮಾರಕಗಳಿಗೆ ಹಾನಿ Read More »

ಗರ್ಭಿಣಿ ಆಗುವ ಬಯಕೆ ಯುವತಿಯನ್ನು ನವಜಾತ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸುವಂತೆ ಮಾಡಿತು |ಕೊನೆಗೆ ಅದೇ ಆಸೆಯಿಂದ ಆಕೆ ಚಟ್ಟ ಏರುವಂತಾಯಿತು !!

ಗರ್ಭಿಣಿಯಾಗಲು ಬಯಸಿದ್ದ ಯುವತಿ ಹಸುಗುಸಿನ ಹೊಕ್ಕಳ ಬಳ್ಳಿ ಸೇವಿಸಿ ಸಾವನ್ನಪ್ಪಿರುವ ಘಟನೆ ಅಮರಾವತಿ ಜಿಲ್ಲೆಯ ನಾದೆಂಡ್ಲದ ತುಬಡು ಗ್ರಾಮದಲ್ಲಿ ನಡೆದಿದೆ. ದಾಚೆಪಲ್ಲಿ ನಿವಾಸಿ 19 ವರ್ಷದ ಯುವತಿ ಮೃತಪಟ್ಟಿದ್ದಾಳೆ. ತುಬಡು ಗ್ರಾಮದ ರವಿ ಜೊತೆಗೆ ಮೂರು ವರ್ಷದ ಹಿಂದೆ ಮದುವೆಯಾಗಿದ್ದಳು. ಗರ್ಭಿಣಿಯಾಗಲು ಎರಡು ವರ್ಷದಿಂದ ಪ್ರಯತ್ನಿಸುತ್ತಿದ್ದಳು. ಇದಕ್ಕಾಗಿ ನಾಟಿ ಔಷಧಗಳನ್ನೆಲ್ಲಾ ಪಡೆದಿದ್ದರು. ಹಾಗೆಯೇ ಗರ್ಭಿಣಿಯಾಗಲು ಹೊಕ್ಕಳ ಬಳ್ಳಿ ಸೇವಿಸಿ ಆಕೆ ಸಾವನ್ನಪ್ಪಿರುವುದಾಗಿ ಕೆಲ ಸ್ಥಳೀಯರು ಆರೋಪಿಸಿದ್ದಾರೆ. ಆಕೆ ನವಜಾತ ಶಿಶುವಿನ ಹೊಕ್ಕಳ ಬಳ್ಳಿಯನ್ನು ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದು, …

ಗರ್ಭಿಣಿ ಆಗುವ ಬಯಕೆ ಯುವತಿಯನ್ನು ನವಜಾತ ಶಿಶುವಿನ ಹೊಕ್ಕಳ ಬಳ್ಳಿ ಸೇವಿಸುವಂತೆ ಮಾಡಿತು |ಕೊನೆಗೆ ಅದೇ ಆಸೆಯಿಂದ ಆಕೆ ಚಟ್ಟ ಏರುವಂತಾಯಿತು !! Read More »

ವಿಟ್ಲ: ಪತಿಯ ಮೇಲೆ ಮುನಿಸಿಕೊಂಡು ತವರು ಸೇರಿದ್ದ ಪತ್ನಿ!! ಆಕೆಯ ಮೇಲಿನ ಕೋಪಕ್ಕೆ ಪತಿ ತೆಗೆದುಕೊಂಡ ನಿರ್ಧಾರ!??

ಪತಿ ಪತ್ನಿಯ ಜಗಳ ಸಂಬಂಧ ಪತಿಯೊಂದಿಗೆ ಮುನಿಸಿಕೊಂಡು ತವರು ಸೇರಿದ್ದ ಪತ್ನಿಗೆ ಜೀವ ಬೆದರಿಕೆ ಒಡ್ಡಿದ್ದಲ್ಲದೇ, ತವರು ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ ಭಂಡ ಗಂಡನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.ಬಂಧಿತ ವ್ಯಕ್ತಿಯನ್ನು ಗೌಸ್ ಜಲಾಲುದ್ದಿನ್ ಎಂದು ಗುರುತಿಸಲಾಗಿದೆ. ಘಟನೆ ವಿವರ: ವಿಟ್ಲ ಅರೀಪೆಕಟ್ಟೆ ನಿವಾಸಿ ಮಹಿಳೆ ಫಾತಿಮತ್ ಬುಶ್ರಾ ಎಂಬಾಕೆಯನ್ನು ವಿಟ್ಲ ನಿವಾಸಿ ಗೌಸ್ ಜಲಾಲುದ್ದೀನ್ ಕಳೆದ ಕೆಲವರ್ಷಗಳ ಹಿಂದೆ ವಿವಾಹವಾಗಿದ್ದ. ಆದರೆ ಪತಿ ಪತ್ನಿಯ ನಡುವೆ ಅದ್ಯಾವ ಕಾರಣಕ್ಕೋ ಮನಸ್ತಾಪ ಉಂಟಾಗಿ ಕೆಲ ತಿಂಗಳುಗಳ ಹಿಂದೆ …

ವಿಟ್ಲ: ಪತಿಯ ಮೇಲೆ ಮುನಿಸಿಕೊಂಡು ತವರು ಸೇರಿದ್ದ ಪತ್ನಿ!! ಆಕೆಯ ಮೇಲಿನ ಕೋಪಕ್ಕೆ ಪತಿ ತೆಗೆದುಕೊಂಡ ನಿರ್ಧಾರ!?? Read More »

ಚಾರ್ಮಾಡಿ ಘಾಟ್ : ರಸ್ತೆಯಲ್ಲೇ ಸಂಪೂರ್ಣ ಸುಟ್ಟು ಹೋದ ಕಾರು

ಬೆಳ್ತಂಗಡಿ /ಮೂಡಿಗೆರೆ : ಚಾರ್ಮಾಡಿ ಘಾಟ್ ನ ಮಲಯ ಮಾರುತ ಎಂಬಲ್ಲಿ ಬೆಂಕಿ ಕಾರೊಂದು ಬೆಂಕಿಯಿಂದ ಸುಟ್ಟು ಕರಕಲಾದ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದೆ. ಮಂಗಳೂರಿನ ದೇರಳಕಟ್ಟೆಯಿಂದ ಜಾವಗಲ್ ಗೆ ಪ್ರವಾಸಕ್ಕೆ ತೆರಳುವಾಗ ಘಟನೆ ನಡೆದಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹೇಂದ್ರ ಲೋಗನ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ …

ಚಾರ್ಮಾಡಿ ಘಾಟ್ : ರಸ್ತೆಯಲ್ಲೇ ಸಂಪೂರ್ಣ ಸುಟ್ಟು ಹೋದ ಕಾರು Read More »

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನ

ಬೆಂಗಳೂರು: ವಿಜಯಪುರ, ಬಾಗಲಕೋಟೆ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ಖಾಲಿ ಇರುವ 39 ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಜಯಪುರ, ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು.ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ವಿದ್ಯಾರ್ಹತೆ ಹಾಗೂ ವೇತನ: ಸಂಬಂಧಿತ ಹುದ್ದೆಗಳ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವೇತನ ಶ್ರೇಣಿಗಾಗಿ ಈ ಕೆಳಗೆ ನೀಡಿರುವ ವೆಬ್‌ಸೈಟ್‌ನ ಅಧಿಸೂಚನೆಯನ್ನು ನೋಡಿ …

ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನ Read More »

ಕೋವಿಶೀಲ್ಡ್ ಕೋವ್ಯಾಕ್ಸಿನ್ ಲಸಿಕೆಗಿಂತ ಕಡಿಮೆ ಪ್ರತಿರೋಧಕ ಸುದ್ದಿ ಸುಳ್ಳು | ಅಧ್ಯಯನದಲ್ಲಿ ಬಹಿರಂಗ

ಇತ್ತೀಚೆಗೆ ಲಸಿಕೆಗಳ ಪೈಕಿ ಕೋವಿ ಶೀಲ್ಡ್ ಕೋವ್ಯಾಕ್ಸಿನ್ ಗಿಂತ ಕಡಿಮೆ ಪ್ರತಿರೋಧ ಶಕ್ತಿ ಹೊಂದಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಸುದ್ದಿ ನಂಬುವಂತದ್ದಲ್ಲ ಎಂದು ಅಧ್ಯಯನದ ವರದಿಯೊಂದು ಹೇಳುತ್ತಿದೆ. ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆದವರ ಪೈಕಿ ಮೂರರಿಂದ ಏಳು ತಿಂಗಳ ಬಳಿಕವೂ ಕೋವಿಡ್‌-19 ವಿರುದ್ಧ ಪ್ರತಿರೋಧದ ಶಕ್ತಿ ಉತ್ತಮವಾಗಿರುವ ವಿಚಾರವು 500ರಷ್ಟು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಸಿರುವ ಅಧ್ಯಯದಲ್ಲಿ ತಿಳಿದುಬಂದಿದೆ. ಪುಣೆ ಮೂಲದ ಬಿಜೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಾಸ್ಸೋನ್ ಆಸ್ಪತ್ರೆಗಳು ಈ …

ಕೋವಿಶೀಲ್ಡ್ ಕೋವ್ಯಾಕ್ಸಿನ್ ಲಸಿಕೆಗಿಂತ ಕಡಿಮೆ ಪ್ರತಿರೋಧಕ ಸುದ್ದಿ ಸುಳ್ಳು | ಅಧ್ಯಯನದಲ್ಲಿ ಬಹಿರಂಗ Read More »

ಭಾರತದ ಕಂಪನಿ ಸೇರಿದಂತೆ ಒಟ್ಟು ಏಳು ಕಂಪೆನಿಗಳನ್ನು ಬ್ಯಾನ್ ಮಾಡಿದ ಫೇಸ್‌ಬುಕ್ !! | ಬ್ಯಾನ್ ಮಾಡಲು ಕಾರಣ??

ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವೆಂದರೆ ಫೇಸ್‌ಬುಕ್. ಆದರೆ ಇದೇ ಫೇಸ್‌ಬುಕ್ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತದ ಒಂದು ಕಂಪೆನಿ ಸೇರಿದಂತೆ ಏಳು ಖಾಸಗಿ ಪತ್ತೆದಾರಿ(ಸ್ಪೈ) ಸಂಸ್ಥೆಗಳನ್ನು ತನ್ನ ಪ್ಲಾಟ್‌ಫಾರಂನಿಂದ ಫೇಸ್‌ಬುಕ್ ಬ್ಯಾನ್ ಮಾಡಿದೆ. ಹ್ಯಾಕಿಂಗ್ ಹಾಗೂ ಇತರ ಸೈಬರ್ ಅಪರಾಧಗಳನ್ನು ಗುರುತಿಸಿದ ಫೇಸ್‌ಬುಕ್ ಅವುಗಳ ಹೆಸರನ್ನು ಬಹಿರಂಗ ಪಡಿಸಿದ್ದು, ಇದರಲ್ಲಿ ಒಂದು ಭಾರತೀಯ ಸಂಸ್ಥೆಯೂ ಸೇರಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತೀಯ ಕಂಪನಿ ಬೆಲ್ಟ್ರೋಕ್ಸ್ ಸೇರಿದಂತೆ ಬ್ಲ್ಯಾಕ್ ಕ್ಯೂಬ್, …

ಭಾರತದ ಕಂಪನಿ ಸೇರಿದಂತೆ ಒಟ್ಟು ಏಳು ಕಂಪೆನಿಗಳನ್ನು ಬ್ಯಾನ್ ಮಾಡಿದ ಫೇಸ್‌ಬುಕ್ !! | ಬ್ಯಾನ್ ಮಾಡಲು ಕಾರಣ?? Read More »

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾಕೂಟ

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ಪತ್ರಕರ್ತರ ಕ್ರೀಡಾಕೂಟವನ್ನು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಉದ್ಘಾಟಿಸಿದರು.ನೆಹರೂ ಮೈದಾನ ಬಳಿಯ ಫುಟ್ಬಾಲ್ ಮೈದಾನದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ದ.ಕ. ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ನ ಅಧ್ಯಕ್ಷ ಅಮರನಾಥ ರೈ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಕೆಐಒಸಿಎಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಮುರುಗೇಶ್ , ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ಯತೀಶ್, ಪತ್ರಿಕಾ ಭವನ ಟ್ರಸ್ಟ್ ನ ಆರ್. ರಾಮಕೃಷ್ಣ, ಹಿರಿಯ ಪತ್ರಕರ್ತ …

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾಕೂಟ Read More »

error: Content is protected !!
Scroll to Top