ನನಗೆ ಗೃಹ ಖಾತೆ ಕೊಟ್ಟರೆ ಕೋಮು ಗಲಭೆಯ ಮಾತಿರಲಿ, ಒಬ್ಬನೂ ಕಮಕ್ ಕಿಮಕ್ ಎನ್ನದಂತೆ ಮಾಡುತ್ತೇನೆ | ಮತೀಯ ಶಕ್ತಿಗಳ ವಿರುದ್ಧ ಗುಟುರು ಹಾಕಿದ ಬಸನಗೌಡ ಪಾಟೀಲ ಯತ್ನಾಳ್ !

ವಿಜಯಪುರ: ರಾಜ್ಯದಲ್ಲಿ ಕೋಮು ಗಲಭೆಗೆ ಸಂಪೂರ್ಣ ಕಡಿವಾಣ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನಗೆ ಗೃಹ ಖಾತೆ ಕೊಟ್ಟು ನೋಡಲಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸಂಭಾವಿತ ವ್ಯಕ್ತಿ. ಅವರಿಗೆ ಕಂದಾಯ, ಅರಣ್ಯ ಖಾತೆಗಳು ಸೂಕ್ತ ಎಂದರು.

ದೇಶ ಬಾಂಧವರು ದೇಶ ವಿರೋಧಿ ಕೃತ್ಯದಲ್ಲಿ ತೊಡಗುವವರು ಎಂದಿಗೂ ನಮ್ಮ ಅಣ್ಣ- ತಮ್ಮಂದಿರಾಗಲು ಸಾಧ್ಯವಿಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಪದೇ ಪದೇ ಕೋಮು ಸೌಹಾರ್ಧಕ್ಕೆ ಧಕ್ಕೆ ಉಂಟಾಗುತ್ತಿವೆ. ಮತೀಯ ಭಾವನೆ ಕೆರಳಿಸುವ ಗಲಾಟೆಗಳು ಹೆಚ್ಚುತ್ತಿವೆ. ಇಂಥ ಘಟನೆಯಲ್ಲಿ ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಪ್ರಕರಣದಲ್ಲಿ ಏನಾಗಿದೆ. ಇಂಥ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ಕುರಿತು ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಿದ್ದೇನೆ. ಮೆತ್ತಗೆ ಮಾತನಾಡಿದರೆ ಕೆಲವರಿಗೆ ಅರ್ಥವಾಗುವುದಿಲ್ಲ, ಇದರಿಂದ ಕಾನೂನು ಪಾಲನೆ ಅಸಾಧ್ಯ. ನನಗೆ ಗೃಹ ಖಾತೆ ಕೊಟ್ಟರೆ ಕೋಮು ಗಲಭೆಯ ಮಾತಿರಲಿ, ಒಬ್ಬನೂ ಕಮಕ್ ಕಿಮಕ್ ಎನ್ನದಂತೆ ಮಾಡುತ್ತೇನೆ ಎಂದರು.

1971 ರ ಯದ್ದದಲ್ಲಿ ಪಾಕಿಸ್ತಾನದ ಲಾಹೋರ್ ಭಾರತೀಯ ಸೇನೆಯ ವಶವಾಗಿತ್ತು. ಜ್ಯಾತ್ಯಾತೀತ ಅಂತೆಲ್ಲ ಬೊಗಳೆ ಬಿಟ್ಡ ಕೆಲವರು ಲಾಹೋರ್ ಪ್ರದೇಶವನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟರು ಎಂದು ಕಿಡಿಕಾರಿದರು.

ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಹೆದರಿಕೆಯಿಂದ ಬ್ರಿಟೀಷರು ಭಾರತ ಬಿಟ್ಟು ಓಡಿದರೆ ಹೊರತು, ಉಪವಾಸಕ್ಕೆ ಕುಳಿತರೆ ಹೆದರುತ್ತಿರಲಿಲ್ಲ. ದೇಶ ಬಿಟ್ಟು ಹೋಗುತ್ತಿರಲಿಲ್ಲ. ಸ್ವಾತಂತ್ರ್ಯದ ನಂತರ ಸರ್ದಾರ್ ವಲ್ಲಭಬಾಯಿ ಪಟೇಲ್ ಹರಿದು ಹಂಚಿಹೋಗಿದ್ದ ಭಾರತವನ್ನೆಲ್ಲ ಒಂದು ದೇಶವಾಗಿ ಒಗ್ಗೂಡಿಸಿದರು. ಇದರಿಂದಾಗಿ ಭಾರತ ಮತ್ತಷ್ಡು ಛಿದ್ರವಾಗುವುದು ತಪ್ಪಿತು ಎಂದು ಯತ್ನಾಳ್ ಹೇಳಿದರು.

Leave A Reply

Your email address will not be published.