ಕೇವಲ 1 ರೂ. ಗೆ ರಿಚಾರ್ಜ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ !! | ದೇಶದಲ್ಲೇ ಅತ್ಯಂತ ಅಗ್ಗದ ಪ್ರಿಪೇಯ್ಡ್ ಪ್ಲಾನ್ ಮೂಲಕ ಹೊಸ ಕ್ರಾಂತಿ

ಭಾರತದಲ್ಲಿ ಡೇಟಾ ಹಾಗೂ ಮೊಬೈಲ್ ನೆಟ್‌ವರ್ಕ್ ಮೂಲಕ ಕ್ರಾಂತಿ ಮಾಡಿರುವ ಕಂಪನಿ ಎಂದರೆ ಅದು ರಿಲಯನ್ಸ್ ಜಿಯೋ. ಬೆಲೆ ಏರಿಕೆ ನಂತರವೂ ಗ್ರಾಹಕರನ್ನು ಸೆಳೆಯುವ ಸಲುವಾಗಿ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆ ಜಿಯೋ ದಾಪುಗಾಲಿಟ್ಟಿದೆ.

ಭಾರತದ ನಂಬರ್ ಒನ್ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇದೀಗ ಅತ್ಯಂತ ಅಗ್ಗದ ಪ್ಲಾನ್ ಪ್ರಾರಂಭಿಸಿದೆ. ಜಿಯೋ ನೀಡುವ ಪ್ಲಾನ್ ಗೆ ಪಾವತಿಸಬೇಕಾಗಿರುವುದು ಕೇವಲ 1 ರೂ (one rupee plan). ಈ ಉತ್ತಮ ಯೋಜನೆಯನ್ನು ವಿಶೇಷವಾಗಿ My Jio ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡಲಾಗಿದೆ. ವೆಬ್‌ನಲ್ಲಿ ನೋಡಿದರೆ, ಈ ಪ್ಲಾನ್ ಬಗ್ಗೆ ಮಾಹಿತಿ ಕಾಣಿಸುವುದಿಲ್ಲ. ಇದನ್ನು ವ್ಯಾಲ್ಯೂ ಪ್ಯಾಕ್ ನ ಇತರ ಪ್ಯಾಕ್‌ಗಳಲ್ಲಿ ಇರಿಸಲಾಗಿದೆ.

ಜಿಯೋ 1 ರೂ. ಪ್ಲಾನ್ :

ಸಿಮ್ ಅನ್ನು ಸಕ್ರಿಯವಾಗಿಡಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯಲ್ಲಿ ಯಾವುದೇ ಕರೆ ಮತ್ತು SMS ಸೌಲಭ್ಯ ಇರುವುದಿಲ್ಲ. 1 ರೂ. ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ಲಾನ್ ನಲ್ಲಿ 100MB ಡೇಟಾವನ್ನು ಸಿಗುತ್ತದೆ. ಡೇಟಾ ಮುಗಿದ ನಂತರ ಇಂಟರ್ನೆಟ್ ಸ್ಪೀಡ್ 60kbpsಗೆ ಇಳಿಯುತ್ತದೆ.

ಗ್ರಾಹಕರಿಗೆ ನೀಡಲಾಗುವ 100MB ಡೇಟಾ ಸಹ 30 ದಿನಗಳವರೆಗೆ ಇರುತ್ತದೆ. ಆದ್ದರಿಂದ ಯಾರಿಗಾದರೂ ಕೇವಲ 400MB ಡೇಟಾ ಅಗತ್ಯವಿದ್ದರೆ, ಅವರು ಈ ಯೋಜನೆಯೊಂದಿಗೆ 4 ಬಾರಿ ರೀಚಾರ್ಜ್ ಮಾಡಬಹುದು. ಒಟ್ಟು ಮೊತ್ತದ ಡೇಟಾ ಅಗತ್ಯವಿಲ್ಲದಿದ್ದಾಗ 4G ಡೇಟಾ ವೋಚರ್‌ಗಳನ್ನು ಖರೀದಿಸುವುದಕ್ಕಿಂತ ಇದು ಉತ್ತಮವಾಗಿದೆ.

ಆದರೆ, ಇದೀಗ ಈ ಯೋಜನೆಯೊಂದಿಗೆ ಬಳಕೆದಾರರು ಎಷ್ಟು ರೀಚಾರ್ಜ್ ಮಾಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಕಂಪನಿಯು ಈ ಯೋಜನೆಯ ಬಗ್ಗೆ ಹೆಚ್ಚು ಮಾಹಿತಿ ತಿಳಿಸಿಲ್ಲ. ಜಿಯೋವಿನ ಈ ರೂ 1 ಪ್ರಿಪೇಯ್ಡ್ ಯೋಜನೆಯು ಇತರೆ ಯಾವುದೇ ಕಂಪೆನಿ ನೀಡುವ ಅಗ್ಗದ ಪ್ರಿಪೇಯ್ಡ್ ಕೊಡುಗೆಯಾಗಿದೆ. ಏಕೆಂದರೆ, ಇತರ ಯಾವುದೇ ಖಾಸಗಿ ಆಪರೇಟರ್‌ಗಳು ತಮ್ಮ ಬಳಕೆದಾರರಿಗೆ ಅಂತಹ ಅನುಕೂಲವನ್ನು ನೀಡುತ್ತಿಲ್ಲ.

ಭಾರತದ ಅತ್ಯಂತ ಅಗ್ಗದ ಯೋಜನೆ :

ಜಿಯೋದ 1 ರೂ. ಪ್ಲಾನ್, ದೇಶದ ಅತ್ಯಂತ ಅಗ್ಗದ ಯೋಜನೆಯಾಗಿದೆ. ಜಿಯೋ ಹೊರತುಪಡಿಸಿ, ಯಾವುದೇ ಟೆಲಿಕಾಂ ಕಂಪನಿಯು ಕೂಡಾ ಒಂದು ರೂಪಾಯಿ ಪ್ಲಾನ್ ನೀಡುತ್ತಿಲ್ಲ.

ಜಿಯೋ 10 ರೂ ಮತ್ತು 20 ರೂ ಯೋಜನೆ :

ಜಿಯೋ 10 ಮತ್ತು 20 ರೂಪಾಯಿಗಳ ಅಗ್ಗದ ಯೋಜನೆಗಳನ್ನು ಸಹ ಹೊಂದಿದೆ. 10 ರೂಪಾಯಿ ಪ್ಲಾನ್ ನಲ್ಲಿ 7.47 ರ ಟಾಕ್-ಟೈಮ್ ಅನಿಯಮಿತ ಮಾನ್ಯತೆಯೊಂದಿಗೆ ಲಭ್ಯವಿದೆ. ಇನ್ನು 20 ರೂ. ಪ್ಲಾನ್ ನಲ್ಲಿ 14.95 ರೂ. ಟಾಕ್ ಟೈಮ್ ಅನಿಯಮಿತ ಮಾನ್ಯತೆಯೊಂದಿಗೆ ಲಭ್ಯವಿರುತ್ತದೆ.

Leave A Reply

Your email address will not be published.