ಸುಳ್ಯ: ಪ್ರವಾಸಕ್ಕೆಂದು ಹೊರಟಿದ್ದ ಬೊಲೆರೋ ವಾಹನ ಪಲ್ಟಿ, ಪ್ರಯಾಣಿಕರಿಗೆ ಗಾಯ

ಪ್ರವಾಸಕ್ಕೆ ಹೊರಟಿದ್ದ ಬೊಲೆರೋ ವಾಹನವೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸುಳ್ಯ ತಾಲೂಕಿನ ಅರಂತೋಡಿನಿಂದ ನಡೆದಿದೆ.

ಅರಂತೋಡು ಉದಯನಗರ ತಿರುವಿನಲ್ಲಿ ಮುಂಜಾನೆ 4 ಗಂಟೆಗೆ ಅವಘಡ ಸಂಭವಿಸಿದ್ದು, ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಜ್ಪೆಯಿಂದ ಪ್ರವಾಸ ಹೊರಟಿದ್ದ ತಂಡದ ವಾಹನ ಇದಾಗಿದ್ದು, ಸ್ಥಳೀಯರು ಗಾಯಾಳುಗಳನ್ನು ವಿಚಾರಿಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.