Day: December 15, 2021

ಉಪ್ಪಿನಂಗಡಿ :ಠಾಣೆಗೆ ನುಗ್ಗಿ ಹಾನಿ ಮಾಡಲು ಯತ್ನಿಸಿದರಿಂದ ಲಾಠಿಚಾರ್ಜ್ – ಎಸ್ಪಿ ಋಷಿಕೇಶ್ ಸೋನಾವಣೆ

ಪುತ್ತೂರು : ಉಪ್ಪಿನಂಗಡಿಯಲ್ಲಿ ನಡೆದ ಗಲಭೆ ಮತ್ತು ಲಾಠಿಚಾರ್ಜ್‌ಗೆ ಸಂಬಂಧಿಸಿದಂತೆ ಎಸ್‌ಪಿ ರಿಷಿಕೇಶ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಉಪ್ಪಿನಂಗಡಿ ಗಲಭೆ ಕುರಿತು ಎಸ್​​ಪಿ ರಿಷಿಕೇಶ್ ಸೋನಾವಣೆ ಪ್ರತಿಕ್ರಿಯೆಕೆಲ ಯುವಕರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಡಿ.13 ರಂದು ಸಿನಾನ್ ಎಂಬಾತನನ್ನು ಬಂಧಿಸಲಾಗಿತ್ತು. ಬಂಧಿತ ಸಿನಾನ್ ನೀಡಿದ ಮಾಹಿತಿಯಂತೇ ಮುಸ್ತಫಾ, ಹಮೀದ್, ಝಕಾರಿಯಾ ಎಂಬ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಅವರನ್ನು ಬಿಡುಗಡೆಗೊಳಿಸುವಂತೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಂದ ಠಾಣೆ ಮುಂದೆ ಪ್ರತಿಭಟನೆ ನಡೆದಿತ್ತು.ಪ್ರತಿಭಟನಾಕಾರರು ಉದ್ರೇಕಕಾರಿಯಾಗಿ ವರ್ತಿಸುತ್ತಿದ್ದರಿಂದ ಪೊಲೀಸರು ಹಲವು ಬಾರಿ ಅವರಿಗೆ …

ಉಪ್ಪಿನಂಗಡಿ :ಠಾಣೆಗೆ ನುಗ್ಗಿ ಹಾನಿ ಮಾಡಲು ಯತ್ನಿಸಿದರಿಂದ ಲಾಠಿಚಾರ್ಜ್ – ಎಸ್ಪಿ ಋಷಿಕೇಶ್ ಸೋನಾವಣೆ Read More »

ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ಮಾಡುವಂತಿಲ್ಲ !! | “ಪ್ರತಿಷ್ಠಾಪಿಸಿದ ಪ್ರತಿಮೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ” ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್

ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ಕುರಿತು ಹೈಕೋರ್ಟ್ ತನ್ನ ಮಹತ್ವದ ತೀರ್ಪು ನೀಡಿದೆ. ‘ಸಾರ್ವಜನಿಕ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು’ ಎಂದು ರಾಜ್ಯ ಸರ್ಕಾರಕ್ಕೆ, ಹೈಕೋರ್ಟ್ ಮೌಖಿಕವಾದ ಖಡಕ್‌ ಸೂಚನೆ ನೀಡಿದೆ. ‘ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆ ಸ್ಥಾಪನೆ ಮಾಡುವುದಕ್ಕೆ ನಿರ್ಬಂಧವಿದೆ. ಅದು ದೇವರ ಮೂರ್ತಿಯಾಗಲಿ ಅಥವಾ ಮಹಾನ್ ವ್ಯಕ್ತಿಯ ಪ್ರತಿಮೆಯೇ ಆಗಲಿ ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ. ಬೇಕಾದರೆ ಸ್ವಂತ ಜಾಗದಲ್ಲಿ ಪ್ರತಿಮೆ ಸ್ಥಾಪನೆ ಮಾಡಲಿ ಹಾಗೂ ಆರಾಧಿಸಲಿ. ಅದಕ್ಕೆ ನ್ಯಾಯಾಲಯದ ಆಕ್ಷೇಪವಿಲ್ಲ’ ಎಂದು ಕಟು …

ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪನೆ ಮಾಡುವಂತಿಲ್ಲ !! | “ಪ್ರತಿಷ್ಠಾಪಿಸಿದ ಪ್ರತಿಮೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ” ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ ಹೈಕೋರ್ಟ್ Read More »

ಪೊಲೀಸರಿಗೆ ಪರಿಸ್ಥಿತಿ ಎದುರಿಸಲು ಮುಕ್ತ ಅವಕಾಶ ನೀಡಬೇಕು -ಯು.ಟಿ.ಖಾದರ್ | ಸಮಾಜ ವಿರೋಧಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಇಲ್ಲ-ಆರಗ ಜ್ಞಾನೇಂದ್ರ

ಕರಾವಳಿ ಜಿಲ್ಲೆಯಲ್ಲಿ, ಕೋಮು ಸೌಹಾರ್ದವನ್ನು ಕಲುಷಿತ ಗೊಳಿಸುವ, ಸಮಾಜ ವಿರೋಧಿ ಶಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ, ಬಗ್ಗು ಬಡಿಯಲಾಗುವುದು, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ವಿಧಾನಸಭೆಯಲ್ಲಿ,ತೀವ್ರ ಎಚ್ಚರಿಕೆ ನೀಡಿದ್ದಾರೆ. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ, ಕಾಂಗ್ರೆಸ್ ಸದಸ್ಯ ಯು ಟಿ ಖಾದರ್ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, “ಕರಾವಳಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೋಮು ಸಾಮರಸ್ಯ ವಾತಾವರಣವನ್ನು ಕೆಡಿಸುವ, ಕೆಲವರ, ಪ್ರಯತ್ನಗಳ ಬಗ್ಗೆ ವರದಿಗಳನ್ನು ಗಮನಿಸಿದ್ದೇನೆ, ಅವುಗಳಿಗೆ ನಿಯಂತ್ರಣ ಹೇರುವ ಬಗ್ಗೆ ಗಂಭೀರ ಪ್ರಯತ್ನ ನಡೆದಿದೆ” …

ಪೊಲೀಸರಿಗೆ ಪರಿಸ್ಥಿತಿ ಎದುರಿಸಲು ಮುಕ್ತ ಅವಕಾಶ ನೀಡಬೇಕು -ಯು.ಟಿ.ಖಾದರ್ | ಸಮಾಜ ವಿರೋಧಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಇಲ್ಲ-ಆರಗ ಜ್ಞಾನೇಂದ್ರ Read More »

ಆದೇಶ ಉಲ್ಲಂಘನೆ ಕಾಂಗ್ರೆಸ್ ನ 14 ಮಂದಿ ವಿಧಾನಪರಿಷತ್‌ ಸದಸ್ಯರನ್ನು ಅಮಾನತು ಮಾಡಿದ ಸಭಾಪತಿ

ಬೆಂಗಳೂರು : ಸಭಾಪತಿಯವರ ಅದೇಶವನ್ನು ಉಲ್ಲಂಘನೆ ಮಾಡಿದ್ದಾರೆಂಬ ಆರೋಪದಡಿಯಲ್ಲಿ ವಿಧಾನ ಪರಿಷತ್ತಿನ 14 ಮಂದಿ ಸದಸ್ಯರನ್ನು ಸಭಾಪತಿಯವರು ಅಮಾನತು ಮಾಡಿದ್ದಾರೆ. ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. ಕಾಂಗ್ರೆಸ್ ನ 14 ಮಂದಿ ಸದಸ್ಯರನ್ನು ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ಆದೇಶ ಹೊರಡಿಸಿದ್ದಾರೆ.

ಜಮೀನಿನ ಆಸೆಗಾಗಿ 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದ ಸಂಬಂಧಿಕರು !! | ಸಿಸಿಟಿವಿಯಲ್ಲಿ ಈ ಪಾಪಿ ಕೃತ್ಯ ಸೆರೆ

ಆಸ್ತಿಗಾಗಿ ಮಕ್ಕಳು ತಂದೆ-ತಾಯಿಯನ್ನು ತುಂಬಾ ಕೀಳಾಗಿ ನಡೆಸಿಕೊಂಡ ಘಟನೆಗಳು ಅದೆಷ್ಟೋ ನಡೆದಿವೆ. ಹಣದಾಸೆಗಾಗಿ ಅದೆಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಕೊಲ್ಲುವ ಸಂಚು ನಡೆಸಿ, ಅದರಲ್ಲಿ ಯಶಸ್ವಿ ಕೂಡ ಆಗಿದ್ದುಂಟು. ಹಾಗೆಯೇ ಆಸ್ತಿಗಾಗಿ 98 ವರ್ಷದ ಅಜ್ಜಿಯನ್ನೇ ಸಂಬಂಧಿಕರು ಹೊತ್ತೊಯ್ದಿರುವ ಆತಂಕಕಾರಿ ಘಟನೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದಲ್ಲಿ ನಡೆದಿದೆ. 98 ವರ್ಷದ ದೇವಕ್ಕ ದುಂಡಣ್ಣನವರ ಅಪಹರಣಕ್ಕೀಡಾದ ಅಜ್ಜಿ. ಆಕೆಯ ಮನೆಗೆ ನುಗ್ಗಿದ ಸಂಬಂಧಿಕರು ಅಜ್ಜಿಯನ್ನು ಹೆಗಲ ಮೇಲೆ ಹೊತ್ತೊಯ್ದಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ದೇವಕ್ಕ …

ಜಮೀನಿನ ಆಸೆಗಾಗಿ 98 ವರ್ಷದ ಅಜ್ಜಿಯನ್ನೇ ಹೊತ್ತೊಯ್ದ ಸಂಬಂಧಿಕರು !! | ಸಿಸಿಟಿವಿಯಲ್ಲಿ ಈ ಪಾಪಿ ಕೃತ್ಯ ಸೆರೆ Read More »

ಉಪ್ಪಿನಂಗಡಿ ಅಹಿತಕರ ಘಟನೆ ಖಂಡಿಸಿ ಡಿ. 17 ರಂದು ಪಿಎಫ್‌ಐನಿಂದ ಎಸ್ಪಿ ಕಚೇರಿ ಚಲೋ

ಮಂಗಳೂರು:ಅಕ್ರಮವಾಗಿ ಬಂಧಿಸಿದ ಪಾಪ್ಯುಲರ್ ಫ್ರಂಟ್ ನಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ನಾಗರಿಕರ ಮೇಲೆ ನಿರ್ದಯವಾಗಿ ಲಾಠಿಚಾರ್ಚ್ ನಡೆಸಿದ ಉಪ್ಪಿನಂಗಡಿ ಪೊಲೀಸರ ಕೃತ್ಯವನ್ನು ಖಂಡಿಸಿ ಸರ್ವ ನಾಗರಿಕರನ್ನು ಒಗ್ಗೂಡಿಸಿ ಡಿ. 17 ರಂದು ಎಸ್ಪಿ ಕಚೇರಿ ಚಲೋ ನಡೆಸಲಿರುವುದಾಗಿ ಪಾಪ್ಯುಲರ್ ಫ್ರಂಟ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಎಕೆ ಅಶ್ರಫ್ ತಿಳಿಸಿದ್ದಾರೆ. ಮಂಗಳೂರು ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೊಲೀಸರ ಲಾಠಿ ಕೇವಲ ಮುಸ್ಲಿಮರ ಮೇಲೆ ಮಾತ್ರ ಯಾಕೆ ಪ್ರಯೋಗ ಮಾಡಲಾಗುತ್ತದೆ ಎಂಬುದಕ್ಕೆ ಇಲಾಖೆ ಉತ್ತರ …

ಉಪ್ಪಿನಂಗಡಿ ಅಹಿತಕರ ಘಟನೆ ಖಂಡಿಸಿ ಡಿ. 17 ರಂದು ಪಿಎಫ್‌ಐನಿಂದ ಎಸ್ಪಿ ಕಚೇರಿ ಚಲೋ Read More »

ನೂರ್ ಜಹಾನ್‌ ರ ಮೇಲೆ ಸುಳ್ಳಾರೋಪದ ಪ್ರಕರಣವು ರಾಜಕೀಯ ಷಡ್ಯಂತ್ರದ ಭಾಗ : ಪಾಪ್ಯುಲರ್ ಫ್ರಂಟ್

ಮಂಗಳೂರು : ಹಿಂದು ಯುವತಿಯೊಬ್ಬಳಿಗೆ ನೆರವು ನೀಡಿ ಮಾನವೀಯತೆ ಮೆರೆದ ನೂರ್ ಜಹಾನ್ ಎಂಬವರ ಮೇಲೆ ಮತಾಂತರದ ಸುಳ್ಳಾರೋಪ ಹೊರಿಸಿ ಪ್ರಕರಣ ದಾಖಲಿಸಿರುವುದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ. ಗಂಡನಿಂದ ನಿರಂತರ ಕಿರುಕುಳ ಎದುರಿಸುತ್ತಿದ್ದ ವಿಜಯಲಕ್ಷ್ಮೀ ಎಂಬಾಕೆ ತಾನು ಕೆಲಸಕ್ಕಿದ್ದ ವಸತಿ ಸಂಕೀರ್ಣದಲ್ಲಿ ವಾಸವಾಗಿದ್ದ ನೂರ್ ಜಹಾನ್ ರೊಂದಿಗೆ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ಸಹಜವಾಗಿ ಇದಕ್ಕೆ ಸ್ಪಂದಿಸಿದ್ದ ನೂರ್ ಜಹಾನ್ ತನ್ನಿಂದಾದ ನೆರವನ್ನು ನೀಡಿದ್ದರು. ಆದರೆ …

ನೂರ್ ಜಹಾನ್‌ ರ ಮೇಲೆ ಸುಳ್ಳಾರೋಪದ ಪ್ರಕರಣವು ರಾಜಕೀಯ ಷಡ್ಯಂತ್ರದ ಭಾಗ : ಪಾಪ್ಯುಲರ್ ಫ್ರಂಟ್ Read More »

ಕೋಮು ಗಲಭೆ ನಡೆಸುವ ಸಂಘಪರಿವಾರದ ಷಡ್ಯಂತ್ರವನ್ನು ಸೋಲಿಸಿ : ರಾಜ್ಯದ ಜನತೆಗೆ ಪಾಪ್ಯುಲರ್ ಫ್ರಂಟ್ ಕರೆ

ಮಂಗಳೂರು : ಕೋಮು ಉನ್ಮಾದ‌ ಸೃಷ್ಟಿಸಿ ರಾಜ್ಯದಲ್ಲಿ ಗಲಭೆ ನಡೆಸಲು ಯೋಜನೆ ಸಿದ್ಧವಾಗುತ್ತಿದ್ದು, ಸಂಘಪರಿವಾರದ ಈ ಷಡ್ಯಂತ್ರದ ವಿರುದ್ಧ ರಾಜ್ಯದ ಜನತೆ ಎಚ್ಚರದಿಂದ ಇರಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಎಚ್ಚರಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಘಟನೆಗಳು ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳನ್ನು ಗಮನಿಸಿದರೆ, ಅಪಾಯದ ಮುನ್ಸೂಚನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಗೋ ಹತ್ಯೆ, ಲವ್ ಜಿಹಾದ್, ಮತಾಂತರದ ನೆಪದಲ್ಲಿ ಸಂಘಪರಿವಾರದ ಗೂಂಡಾಗಳ ಅನೈತಿಕ ಪೊಲೀಸ್ ಗಿರಿ ಮಿತಿಮೀರುತ್ತಿದೆ. ಪ್ರತಿಯೊಂದು ಸಣ್ಣಪುಟ್ಟ ಘಟನೆಗಳಿಗೂ …

ಕೋಮು ಗಲಭೆ ನಡೆಸುವ ಸಂಘಪರಿವಾರದ ಷಡ್ಯಂತ್ರವನ್ನು ಸೋಲಿಸಿ : ರಾಜ್ಯದ ಜನತೆಗೆ ಪಾಪ್ಯುಲರ್ ಫ್ರಂಟ್ ಕರೆ Read More »

ಸುಳ್ಯ: ಕಾಳುಮೆಣಸು ಕೊಯ್ಯುವಾಗ ವಿದ್ಯುತ್ ತಂತಿ ಸ್ಪರ್ಶಿಸಿದ ಏಣಿ, ಕೃಷಿಕ ಸ್ಥಳದಲ್ಲೇ ಸಾವು

ತಮ್ಮ ತೋಟದಲ್ಲಿ ಕಾಳುಮೆಣಸು ಕೊಯ್ಯಲು ಬಳಸಿದ್ದ ಏಣಿ ಪಕ್ಕದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕೃಷಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸುಳ್ಯದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸುಳ್ಯ ತಾಲೂಕು ಚೆಂಬು ಗ್ರಾಮದ ದಾಸಪ್ಪ ಎಂದು ಗುರುತಿಸಲಾಗಿದೆ. ಇವರು ತಮ್ಮ ತೋಟದಲ್ಲಿ ಏಣಿಯ ಸಹಾಯದಿಂದ ಕಾಳುಮೆಣಸು ಕೊಯ್ಯುತ್ತಿದ್ದಾಗ, ಏಣಿಯು ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಾಗಿದೆ. ಕೂಡಲೇ ವಿದ್ಯುತ್ ಶಾಕ್ ಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ : ಮುಂದುವರಿದ ಸೆಕ್ಷನ್, ಸಹಜ ಸ್ಥಿತಿಗೆ ಪೇಟೆ,ಬಿಗಿ ಪೊಲೀಸ್ ಬಂದೋಬಸ್ತ್

ಉಪ್ಪಿನಂಗಡಿ: ನಿನ್ನೆ ಪ್ರತಿಭಟನೆ, ಲಾಠಿಚಾರ್ಜ್ ಗೆ ಕಾರಣವಾಗಿದ್ದ ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಬುಧವಾರ ಪೇಟೆ ಶಾಂತ ಸ್ಥಿತಿಯಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಉಪ್ಪಿನಂಗಡಿಗೆ ಉಡುಪಿ ಜಿಲ್ಲೆ ಸೇರಿದಂತೆ ವಿವಿಧ ಕಡೆಗಳಿಂದ ಪೊಲೀಸರನ್ನು ಕರೆಸಲಾಗಿದ್ದು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಇಲ್ಲಿನ ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿ ಇತ್ತೀಚೆಗೆ ನಡೆದ ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಪಿಎಫ್‌ಐ ಮುಖಂಡರನ್ನು ವಶಕ್ಕೆ ಪಡೆದು ಮಂಗಳವಾರ ಉಪ್ಪಿನಂಗಡಿ ಠಾಣೆಗೆ ಕರೆದುಕೊಂಡು ಬಂದಿದ್ದರು. ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪಿಎಫ್‌ಐ ಕಾರ್ಯಕರ್ತರು …

ಉಪ್ಪಿನಂಗಡಿ : ಮುಂದುವರಿದ ಸೆಕ್ಷನ್, ಸಹಜ ಸ್ಥಿತಿಗೆ ಪೇಟೆ,ಬಿಗಿ ಪೊಲೀಸ್ ಬಂದೋಬಸ್ತ್ Read More »

error: Content is protected !!
Scroll to Top