ಉಪ್ಪಿನಂಗಡಿ : ಹಿಂದೂ ಮುಖಂಡರ ಮೇಲೆ ತಲ್ವಾರ್ ದಾಳಿ,ಪಿಎಫ್‌ಐ ಮುಖಂಡರ ವಶಕ್ಕೆ | ಸ್ಥಳದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು,ಪ್ರತಿಭಟನೆ | ಪೊಲೀಸ್ ,ಕಾರ್ಯಕರ್ತರ ನಡುವೆ ಹೊಯ್‌ಕೈ,

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಉಪ್ಪಿನಂಗಡಿಯ ಹಳೇ ಗೇಟು ಎಂಬಲ್ಲಿ ಹಸಿ ಮೀನು ಸ್ಟಾಲ್ ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಮೇಲೆ ನಡೆದ ತಲ್ವಾರು ದಾಳಿಗೆ ಸಂಬಂಧಿಸಿ ಡಿ 14 ರಂದು ಬೆಳಿಗ್ಗೆ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಠಾಣೆ ಮುಂಭಾಗ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಪಿಎಫ್‌ಐ ಪ್ರತಿಭಟನೆಗೆ ಮಣಿದ ಸರಕಾರ ಒಬ್ಬನನ್ನು ಬಿಡುಗಡೆಗೊಳಿಸಿದ್ದು, ಇನ್ನಿಬ್ಬರನ್ನು ಬಿಡುಗಡೆಗೊಳಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಉಪ್ಪಿನಂಗಡಿಯ ಪಾಪ್ಯುಲರ್ ಫ್ರೆಂಟ್ ಇಂಡಿಯಾ ಸಂಘಟನೆಯ ಮುಖಂಡರು ಎನ್ನಲಾಗುತ್ತಿರುವ ಪಿಎಫ್‌ಐ ಜಿಲ್ಲಾಧ್ಯಕ್ಷ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಕಡವಿನಬಾಗಿಲು, ಝಕರಿಯಾ ಎಂಬವರನ್ನು ತಲ್ವಾರ್ ದಾಳಿಯ ದಾಳಿಯ ವಿಚಾರಣೆ ನಡೆಸಲು ಪೊಲೀಸರು ವಶಕ್ಕೆ ಪಡೆದಿದ್ದರು.

ಉಪ್ಪಿನಂಗಡಿ : ಸೆಕ್ಷನ್ 144 ಜಾರಿ, ಠಾಣೆಗೆ ಮುತ್ತಿಗೆ ಯತ್ನ, ಲಾಠಿ ಚಾರ್ಜ್

ಅಮಾಯಕ ಮುಸ್ಲಿಂ ಯುವಕರನ್ನು ಪ್ರಕರಣದ ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಸಿ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ನಿರಪರಾಧಿಗಳಿಗೆ ತೊಂದರೆ ಕೊಡದಂತೆ ಪೊಲೀಸರಿಗೆ ಸೂಚಿಸಲು ಈ ಮೂವರು ಠಾಣೆಗೆ ಬಂದಿದ್ದ ವೇಳೆ ಪೊಲೀಸರು ಅಕ್ರಮವಾಗಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಸಾಮಾಜಿಕ ಜಾಲಾತಾಣದಲ್ಲಿ ಹಬ್ಬಿದ್ದ ಕಾರಣ ಪಿಎಫ್‌ಐ ಕಾರ್ಯಕರ್ತರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನಾಕಾರರು ರಸ್ತೆಯಲ್ಲೇ ನಮಾಜ್ ಮಾಡಿದರು. ಸಂಜೆಯಾಗುತ್ತಿದ್ದಂತೆ ಪಿಎಫ್‌ಐ ಹಾಗೂ ಪೊಲೀಸರ ಜೊತೆ ಹೊಯಿಕೈ ನಡೆಯಿತು.
ಇದೀಗ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಪಿಎಫ್ ಐ ಜಿಲ್ಲಾಧ್ಯಕ್ಷ ಹಮೀದ್ ಮೆಜಿಸ್ಟಿಕ್ ಬಿಡುಗಡೆಗೊಳಿಸಿದೆ.

Leave A Reply

Your email address will not be published.