ತಪ್ಪು ಮಾಡಿದ ಮಗನಿಗೆ ಬೈಯ್ಯದೆ, ಹೊಡೆಯದೆ ಶಾಂತರೀತಿಯಲ್ಲಿ ಆತನ ತಪ್ಪು ತಿದ್ದಿದ ತಾಯಿ | ತಪ್ಪನ್ನು ತಿದ್ದಿಕೊಂಡು ತಾಯಿಯನ್ನು ಅಪ್ಪಿಕೊಂಡ ಪುಟ್ಟ ಕಂದ

ಪ್ರತಿಯೊಂದು ಹೆಣ್ಣಿಗೂ ತಾನು ತಾಯಿಯಾಗಿ ಕರ್ತವ್ಯ ನಿರ್ವಹಿಸುವುದು ಬಹಳ ಮುಖ್ಯವಾದ ಘಟ್ಟವಾಗಿರುತ್ತದೆ.ತನ್ನ ಮಗುವನ್ನು ಯಾವ ರೀತಿ ನೋಡಿಕೊಳ್ಳುತ್ತಾಳೆ ಎಂಬುದರ ಮೇಲೆ ಮಗುವಿನ ಬದುಕು ರೂಪಿತವಾಗುತ್ತದೆ. ಕೆಲವೊಬ್ಬರ ಮಕ್ಕಳು ಹಠವಾದಿಗಳು, ತುಂಟವಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ರೀತಿಯಾಗಿ ನಿಭಾಯಿಸುವುದು ಎಂಬುದು ಮುಖ್ಯ.

ಇದೇ ರೀತಿ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆಯೊಬ್ಬರು ತಮ್ಮ ಮಗುವಿಗೆ ಕೂಗದೆ ಅಥವಾ ಬಯ್ಯದೆ ಹೇಗೆ ಶಾಂತಗೊಳಿಸಬೇಕು ಎಂಬುದಕ್ಕೆ ಪರಿಪೂರ್ಣ ಉದಾಹರಣೆಯನ್ನು ನೀಡಿದ್ದಾರೆ.ಅಲ್ಲದೆ ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೀಡಾಗುವಂತೆ ಮಾಡಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಇನ್‌ಸ್ಟಾಗ್ರಾಮ್‌ನಲ್ಲಿ ಡೆಸ್ಟಿನಿ ಬೆನೆಟ್ ಎಂಬುವವರು ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಮಗ ಕೋಪಗೊಂಡು ನಿಂತಿರುವಾಗ ತಾಯಿಯು ತನ್ನೆರಡು ಮೊಣಕಾಲುಗಳ ಮೇಲೆ ಕುಳಿತುಕೊಂಡು ಮಗುವಿಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾಳೆ. ಜೀವನ ಹೇಗೆ ಇರುತ್ತದೋ ಅದಕ್ಕೆ ನಾವು ಎಷ್ಟಾಗುತ್ತೋ ಅಷ್ಟು ಹೊಂದಿಕೊಳ್ಳಬೇಕಾಗುತ್ತದೆ ಎಂದು ವಿವರಿಸಿದ್ದಾಳೆ. ಆಕೆ ಎಲ್ಲಿಯೂ ತನ್ನ ಧ್ವನಿಯನ್ನು ಏರಿಸಿ ಮಾತನಾಡಲಿಲ್ಲ. ಕೊನೆಗೆ ತಾಯಿ-ಮಗ ಇಬ್ಬರೂ ಅಪ್ಪಿಕೊಂಡಿದ್ದಾರೆ.

ಈ ವಿಡಿಯೋ ಈಗ ವೈರಲ್ ಆಗಿದ್ದು, 268k ಮಂದಿ ವೀಕ್ಷಿಸಿದ್ದಾರೆ. ಹಾಗೂ ಹಲವಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ತಾಯಿ ತನ್ನ ಮಗುವಿಗೆ ಸಮಾಧಾನದಲ್ಲಿ ಹೇಳಿರುವ ಮಾತುಗಳು ನೆಟ್ಟಿಗರನ್ನು ಖುಷಿಪಡಿಸಿದೆ.

error: Content is protected !!
Scroll to Top
%d bloggers like this: