Day: December 13, 2021

ಬೆಳ್ತಂಗಡಿ : ನಾಲ್ಕನೇ ತರಗತಿಯ ಬಾಲಕಿಯ ಅತ್ಯಾಚಾರ,ಅರೋಪಿ ವಶಕ್ಕೆ

ಬೆಳ್ತಂಗಡಿ: ನಾಲ್ಕನೇ ತರಗತಿಯ ಬಾಲಕಿಯನ್ನು ಯುವಕನೋರ್ವ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಜಯಾನಂದ ಬಾಲಕಿಯನ್ನು ನಿರ್ಮಾಣ ಹಂತದಲ್ಲಿರುವ ಮನೆಗೆ ಕರೆದೊಯ್ದು ಬೆದರಿಸಿ ಅತ್ಯಾಚಾರವೆಸಗಿದ್ದು, ಬಾಲಕಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿ ಈ ವಿಚಾರವನ್ನು ಮನೆಯವರಿಗೆ ತಿಳಿಸಿದ್ದು, ಕೂಡಲೇ ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಜಯಾನಂದ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ನೆಲ್ಯಾಡಿ:ಬೈಕ್ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ | ಬೈಕ್ ಸವಾರ ಇಚ್ಲಂಪಾಡಿ ನಿವಾಸಿ ಸಾವು-ಸಹ ಸವಾರ ಗಂಭೀರ

ನೆಲ್ಯಾಡಿ:ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಎಂಬಲ್ಲಿ ನಡೆದಿದೆ. ಮೃತ ಬೈಕ್ ಸವಾರನನ್ನು ಇಚ್ಲಂಪಾಡಿ ನಿವಾಸಿ ಆಲ್ವಿನ್ ಹಾಗೂ ಗಂಭೀರ ಗಾಯಗೊಂಡ ಸಹಸವಾರನನ್ನು ನೆಲ್ಯಾಡಿ ಪಡ್ಡಡ್ಕ ನಿವಾಸಿ ಸೆಬಿನ್ ಎಂದು ಗುರುತಿಸಲಾಗಿದೆ. ಸೆಬಿನ್ ನೆಲ್ಯಾಡಿಯಲ್ಲಿ ಕೊರಿಯರ್ ಸರ್ವಿಸ್ ನಡೆಸುತ್ತಿದ್ದೂ, ಅದರಂತೆ ನಿನ್ನೆ ರಾತ್ರಿ ಕೊರಿಯರ್ ಹಿಡಿದುಕೊಂಡು ಆಲ್ವಿನ್ ಜೊತೆ ಬೈಕ್ ನಲ್ಲಿ ತೆರಳುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ತಕ್ಷಣವೇ ಆಸ್ಪತ್ರೆಗೆ …

ನೆಲ್ಯಾಡಿ:ಬೈಕ್ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ | ಬೈಕ್ ಸವಾರ ಇಚ್ಲಂಪಾಡಿ ನಿವಾಸಿ ಸಾವು-ಸಹ ಸವಾರ ಗಂಭೀರ Read More »

ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ | ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರನಿಗೆ ಹೈಕೋರ್ಟ್‌ ಛೀಮಾರಿ

ಕೊಚ್ಚಿ: ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರನಿಗೆ ಕೇರಳ ಹೈಕೋರ್ಟ್‌ ಛೀಮಾರಿ ಹಾಕಿದೆ. ಆರ್‌ಟಿಐ ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ಲಸಿಕೆ ಪ್ರಮಾಣಪತ್ರದಲ್ಲಿ ಹಾಕಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಪಿವಿ ಕುಂಞಿಕೃಷ್ಣನ್ ಅವರ ಏಕ ಪೀಠ ಪ್ರತಿಕ್ರಿಯೆ ನೀಡಿ, “ಅವರು ನಮ್ಮ ಪ್ರಧಾನಿಯೇ ಹೊರತು ಬೇರೆ ಯಾವುದೇ ದೇಶದ ಪ್ರಧಾನಿ …

ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ | ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರನಿಗೆ ಹೈಕೋರ್ಟ್‌ ಛೀಮಾರಿ Read More »

ಪಾಲ್ತಾಡು : ದ್ರಾವಿಡ ಸಂಗಮ 2021 ಆಮಂತ್ರಣ ಬಿಡುಗಡೆ

ಪುತ್ತೂರು : ಕೊಳ್ತಿಗೆ ಗ್ರಾಮದ ಪಾಲ್ತಾಡುಶ್ರೀ ದೇವಿ ಸ್ಪೋರ್ಟ್ಸ್ ಕ್ಲಬ್, ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.)ಇದರ ವತಿಯಿಂದ ನಡೆಯುವ ಆದಿದ್ರಾವಿಡ ಸಮಾಜ ಬಾಂಧವರ ಕ್ರೀಡಾಕೂಟ ದ್ರಾವಿಡ ಸಂಗಮ – 2021 ಡಿ.25 ಹಾಗೂ ಡಿ.26ರಂದು ನಡೆಯಲಿದ್ದು ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ಪಾಲ್ತಾಡು ಶ್ರೀ ಅಮ್ಮನವರ ದೇವಸ್ಥಾನದಲ್ಲಿ ನಡೆಯಿತು. ಪಾಲ್ತಾಡು ಶ್ರೀ ದೇವಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಅಣ್ಣು ಪಾಲ್ತಾಡು ಅವರು ಆಮಂತ್ರಣ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸತೀಶ್ ಪರ್ಲಡ್ಕ ,ರವಿ ಪರ್ಲಡ್ಕ , ಆದಿದ್ರಾವಿಡ ಸಮಾಜ …

ಪಾಲ್ತಾಡು : ದ್ರಾವಿಡ ಸಂಗಮ 2021 ಆಮಂತ್ರಣ ಬಿಡುಗಡೆ Read More »

ಚಾಲಕನ ಸಮೇತ ಸಮುದ್ರಕ್ಕೆ ಬಿದ್ದ ರಿಕ್ಷಾ | ಆಪತ್ಪಾಂದ ಈಶ್ವರ ಮಲ್ಪೆ‌ ಅವರಿಂದ ರಕ್ಷಣೆ

ಉಡುಪಿ : ಚಾಲಕ ಸಹಿತ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಲ್ಪೆ ಬಂದರಿನ ದಕ್ಕೆಯಲ್ಲಿ ಸಮುದ್ರಕ್ಕೆ ಬಿದ್ದ ಘಟನೆ ನಡೆದಿದೆ.ಕೂಡಲೇ ಸ್ಥಳಕ್ಕೆ ಆಗಮಿಸಿದ ಆಪತ್ಪಾಂದವ ಈಶ್ವರ್ ಮಲ್ಪೆ ಅವರು ಆಟೋ ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಚಂದ್ರ ಸುವರ್ಣ ಎಂಬವರ ನಿಯಂತ್ರಣ ಕಳೆದುಕೊಂಡು ರಿಕ್ಷಾ ಸಹಿತ ಅವರ ಧಕ್ಕೆಯ ನೀರಿಗೆ ಬಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್ ಮಲ್ಪೆ ಆಟೊ ಚಾಲಕನನ್ನು ರಕ್ಷಿಸಿದ್ದಾರೆ. ಕ್ರೇನ್ ಮೂಲಕ ಆಟೋವನ್ನು ಮೇಲಕ್ಕೆತ್ತಲಾಗಿದೆ.

ಬೆಳ್ತಂಗಡಿ: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿಯ ಸಂತೆಕಟ್ಟೆ ಬಳಿ ದ್ವಿಚಕ್ರ ವಾಹನ ಮತ್ತು ಕಾರು ನಡುವೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಮಡಂತ್ಯಾರಿನ ಬಂಗೇರ ಕಟ್ಟೆ ನಿವಾಸಿ ಯತಿನ್ ಎಂದು ಗುರುತಿಸಲಾಗಿದೆ. ದ್ವಿಚಕ್ರ ವಾಹನದಲ್ಲಿ ಇನ್ನೋರ್ವ ಸವಾರ ಪ್ರದೀಪ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಯತಿನ್ ಗುರುವಾಯನಕೆರೆಯಲ್ಲಿ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಇಂದು ‌ಗೀತಾ ಜಯಂತಿ ಅಂಗವಾಗಿ ಮೇಲಂತಬೆಟ್ಟಿನ ಕಿನ್ಯಮ್ಮ ಸಭಾಭವನದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮ …

ಬೆಳ್ತಂಗಡಿ: ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಜಮ್ಮು-ಕಾಶ್ಮೀರ : ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರ ಗುಂಡಿನ ದಾಳಿ | ಇಬ್ಬರು ಬಲಿ, 12 ಮಂದಿಗೆ ಗಾಯ

ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿವೆ. ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಸಂಜೆ ವೇಳೆ ಪಂಥಾ ಚೌಕ್ ಬಳಿಯ ಝೆವಾನ್ ನಲ್ಲಿ ಈ ದಾಳಿ ನಡೆದಿದ್ದು, 12 ಮಂದಿ ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅದರಲ್ಲಿ ನಾಲ್ಕು ಮಂದಿಯ ಸ್ಥಿತಿ ಗಂಭೀರ ಎಂದು ತಿಳಿದುಬಂದಿದೆ. ಘಟನಾ ಪ್ರದೇಶವನ್ನು ಸಂಪೂರ್ಣ ಪೊಲೀಸ್, ಭದ್ರತಾ ಸಿಬ್ಬಂದಿಗಳು ಸುತ್ತುವರೆದಿದ್ದು, ಉಗ್ರರನ್ನು ಹಿಡಿಯಲು …

ಜಮ್ಮು-ಕಾಶ್ಮೀರ : ಶ್ರೀನಗರದಲ್ಲಿ ಪೊಲೀಸ್ ಸಿಬ್ಬಂದಿ ಬಸ್ ಮೇಲೆ ಉಗ್ರರ ಗುಂಡಿನ ದಾಳಿ | ಇಬ್ಬರು ಬಲಿ, 12 ಮಂದಿಗೆ ಗಾಯ Read More »

ಬೆಳ್ತಂಗಡಿ: ಶಿಶಿಲ ಗ್ರಾಮದ ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಬೆಳ್ತಂಗಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಶಿಶಿಲ ಗ್ರಾಮದ ಪೇರಿಕೆ ನಿವಾಸಿ ಲಕ್ಷ್ಮೀಶ(16.ವ) ಮೃತರು.ಇವರು ಲಿಂಗಪ್ಪ ಗೌಡ ಎಂಬುವವರ ಪುತ್ರನಾಗಿದ್ದು ಸರಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಡಿ.12 ರಂದು ಭಾನುವಾರ ರಜಾದಿನವಾದ ಕಾರಣ ವಿದ್ಯಾರ್ಥಿ ಮನೆಯಲ್ಲಿಯೇ ಇದ್ದು,ಕೆಲಸಕ್ಕೆಂದು ಹೋಗಿದ್ದ ಈತನ ತಾಯಿ ಮಧ್ಯಾಹ್ನ ಮನೆಗೆ ಬಂದು ಬಳಿಕ ಮತ್ತೆ ಕೆಲಸದ ಸ್ಥಳಕ್ಕೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದ ವೇಳೆ ಬಾಲಕ ಮನೆಯ ಪಕ್ಕಾಸಿಗೆ …

ಬೆಳ್ತಂಗಡಿ: ಶಿಶಿಲ ಗ್ರಾಮದ ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣು Read More »

ಪುತ್ತೂರು : ಪ್ರೀತಿ ನಿರಾಕರಿಸಿದ ಮಹಿಳೆಯನ್ನು ತಿಂಗಳಾಡಿ ಪೇಟೆಗೆ ಬರಹೇಳಿ ಕಿಡ್ನಾಪ್!!! ತಡವಾಗಿ ಬೆಳಕಿಗೆ ಬಂದ ಪ್ರಕರಣ – ಇಬ್ಬರ ಬಂಧನ

ಪುತ್ತೂರು: ನಗರದ ಹೊರವಲಯದ ತಿಂಗಳಾಡಿ ಎಂಬಲ್ಲಿ ಪ್ರೀತಿ ನಿರಾಕರಿಸಿದ ಯುವತಿಯನ್ನು ಅಪಹರಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಇಬ್ಬರ ಬಂಧನವಾಗಿದೆ. ತಿಂಗಳಾಡಿಯ ಯುವತಿಯೊರ್ವಳನ್ನು ಇಬ್ಬರು ಯುವಕರು ಸೇರಿ ಕಿಡ್ನಾಪ್ ನಡೆಸಿದ ಪ್ರಕರಣದ ಸಂಬಂಧ ಸಂಪ್ಯ ಠಾಣೆಯಲ್ಲಿ ಪ್ರಕರಣದ ಕಲಂ 341,506,363,342,34 ರಂತೆ ದಾಖಲಾಗಿದ್ದು,ಬಂಧಿತರನ್ನು ಕೆದಂಬಾಡಿ ಕೊಡುಂಗೋಣಿ ನಿವಾಸಿಗಳಾದ ಚಂದ್ರಶೇಖರ್(29) ಮತ್ತು ಜಗದೀಶ್(26) ಎಂದು ಗುರುತಿಸಲಾಗಿದೆ. ಘಟನೆ ವಿವರ:ತಿಂಗಳಾಡಿ ನಿವಾಸಿ ಮಹಿಳೆಯೋರ್ವರನ್ನು ಆರೋಪಿಗಳ ಪೈಕಿ ಓರ್ವ ಪ್ರೀತಿ ಮಾಡುತ್ತಿದ್ದ ಅದೇ ಮಹಿಳೆಗೆ ಬೇರೊಬ್ಬರ ಜೊತೆ ಪ್ರೇಮ ಇದ್ದ ಕಾರಣ …

ಪುತ್ತೂರು : ಪ್ರೀತಿ ನಿರಾಕರಿಸಿದ ಮಹಿಳೆಯನ್ನು ತಿಂಗಳಾಡಿ ಪೇಟೆಗೆ ಬರಹೇಳಿ ಕಿಡ್ನಾಪ್!!! ತಡವಾಗಿ ಬೆಳಕಿಗೆ ಬಂದ ಪ್ರಕರಣ – ಇಬ್ಬರ ಬಂಧನ Read More »

ಸುಳ್ಯ: ವಿಹಿಂಪ ಸುಳ್ಯ ಪ್ರಖಂಡ ವತಿಯಿಂದ ಸುಳ್ಯದಲ್ಲಿ ಗೀತಾ ಜಯಂತಿ ಅಂಗವಾಗಿ ಶೌರ್ಯ ಸಂಚಲನ!! ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಾಗಿ-ಸುಳ್ಯ ಪೇಟೆಯೇ ಕೇಸರಿಮಯ

ಎತ್ತ ನೋಡಿದರೂ ಕೇಸರಿಮಯ. ಕೇಸರಿ ಬಾವುಟ, ಶಾಲು, ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು. ಇದೆಲ್ಲಾ ಕಂಡುಬಂದದ್ದು ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಭದ್ರಕೋಟೆ ಸುಳ್ಯ ದಲ್ಲಿ.ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡ ವತಿಯಿಂದ ನಡೆದ ಹಿಂದೂ ಶೌರ್ಯ ಸಂಚಲನ ಕಾರ್ಯಕ್ರಮದಲ್ಲಿ. ಸುಳ್ಯದ ಹಳೇಗೇಟಿನಿಂದ ಪ್ರಾರಂಭವಾದ ಶೌರ್ಯ ಸಂಚಲನವು ನಿವೃತ್ತ ಶಿಕ್ಷಕ ಕೇಶವ ಮಾಸ್ಟರ್ ಅವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು. ಬಳಿಕ ಸುಳ್ಯದ ಉದ್ಯಮಿ ಪ್ರಭಾಕರ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಚೆನ್ನಕೇಶವ ದೇವಾಲಯದ ವಠಾರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ …

ಸುಳ್ಯ: ವಿಹಿಂಪ ಸುಳ್ಯ ಪ್ರಖಂಡ ವತಿಯಿಂದ ಸುಳ್ಯದಲ್ಲಿ ಗೀತಾ ಜಯಂತಿ ಅಂಗವಾಗಿ ಶೌರ್ಯ ಸಂಚಲನ!! ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಾಗಿ-ಸುಳ್ಯ ಪೇಟೆಯೇ ಕೇಸರಿಮಯ Read More »

error: Content is protected !!
Scroll to Top