ಮಂಗಳೂರು: ಹಾಡುಹಗಲೇ ಮುಸ್ಲಿಂ ಮಹಿಳೆಯ ಮನೆಗೆ ನುಗ್ಗಿ ಹಿಗ್ಗಾಮುಗ್ಗಾ ಹಲ್ಲೆ , ಹಲ್ಲೆಯ ವೀಡಿಯೋ ವೈರಲ್

ಹಾಡುಹಗಲೇ ಮುಸ್ಲಿಂ ಮಹಿಳೆಯೊಬ್ಬರ ಮನೆಯೊಳಗೆ ನುಗ್ಗಿ ಆಕೆಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.

ಹಲ್ಲೆಗೊಳಗಾದ ಮಹಿಳೆಯನ್ನು ಬಂಟ್ವಾಳ ತಾಲೂಕಿನ ನಂದಾವರದ ನಿವಾಸಿ ಎನ್ನಲಾಗುತ್ತಿದ್ದು, ನಿರ್ಮಾಣ ಹಂತದ ಮನೆಯೊಳಗಿದ್ದ ವೇಳೆ ಹಿಂಬಾಗಿಲ ಮೂಲಕ ನುಗ್ಗಿದ ಇಬ್ಬರು ಮಹಿಳೆ ಮತ್ತು ಕೆಲವು ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ.

ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿ ಪೈಪ್ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಮೇಲೆ ಯಾವುದು ವೈಯಕ್ತಿಕ ಸಿಟ್ಟಿನಲ್ಲಿ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಹಲ್ಲೆ ನಡೆಸಿದ ಮಹಿಳೆ ಮತ್ತು ಯುವಕರು ಆಕೆಯ ಸಂಬಂಧಿಕರೇ ಎನ್ನಲಾಗುತ್ತಿದ್ದು, ಎಲ್ಲಿ ಘಟನೆ ನಡೆದಿದೆ ಎನ್ನುವ ಬಗ್ಗೆ ಮಾಹಿತಿಯಿಲ್ಲ. ಪೊಲೀಸರಿಗೂ ಈ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಉಪ್ಪಿನಂಗಡಿ ಬಳಿ ನಡೆದಿರುವ ಘಟನೆ ಎನ್ನುವ ಮಾಹಿತಿಗಳಿವೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆಲವರ ಪ್ರಕಾರ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಸಂಬಂಧಿಕರೇ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ, ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.