ರಾಜ್ಯಾದ್ಯಂತ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇನ್ನು ಮುಂದೆ ಫ್ರೀ ಬಸ್ ಪಾಸ್ !! | ಈ ಕುರಿತು ಅಧಿಕೃತ ಘೋಷಣೆ ಮಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್

ಬೆಂಗಳೂರು: ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಇನ್ನು ಮುಂದೆ ಫ್ರೀ ಬಸ್ ಪಾಸ್ ಸಿಗಲಿದ್ದು,ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅಧಿಕೃತವಾಗಿ ಈ ಕುರಿತು ಘೋಷಣೆ ಮಾಡಿದ್ದಾರೆ.

ಕಟ್ಟಡ ಕಾರ್ಮಿಕರಿಗೆ ವಾಸಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಿ ಬರಲು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಹಿಂದೆ ರಾಜಾಧಾನಿಯಲ್ಲಿ ಮಾತ್ರ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಆದರೆ ಇದೀಗ ಈ ಯೋಜನೆಯನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುತ್ತಿದೆ.

ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ ಯೋಜನೆಯನ್ನು ಕಲ್ಪಿಸಲು ಕೆಎಸ್‌ಆರ್‌ಟಿಸಿ, ಈಶಾನ್ಯ, ವಾಯುವ್ಯ ಸಾರಿಗೆ ಸಂಸ್ಥೆಯೊಂದಿಗೆ ಸಭೆ ನಡೆಸಲಾಗಿತ್ತು,ಈ ಸಭೆಯಲ್ಲಿ ಕಾರ್ಮಿಕ ಇಲಾಖೆಯಿಂದಲೇ ಶೇಕಡಾ ನೂರರಷ್ಟು ವೆಚ್ಚ ಬರಿಸಿ ಬಸ್ ಪಾಸ್ ವಿತರಣೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

ಈ ಹಿಂದೆ ಪಾಸ್ ವಿತರಣೆಯ ಶೇಕಡಾ 80ರಷ್ಟು ವೆಚ್ಚವನ್ನು ಕಾರ್ಮಿಕ ಇಲಾಖೆ ವಹಿಸುತ್ತಿತ್ತು. ಉಳಿದ ಶೇಕಡಾ 20 ರಷ್ಟು ವೆಚ್ಚವನ್ನು ಬರಿಸುವ ಪ್ರಸ್ತಾವನೆಗೆ ಬಿಎಂಟಿಸಿಯಿಂದ ಮೌಖಿಕ ಸಂದೇಶ ಸಿಕ್ಕಿತ್ತು. ಆದರೆ ಬಿಎಂಟಿಸಿ ಸಂಕಷ್ಟದಲ್ಲಿ ಇದ್ದ ಕಾರಣದಿಂದಾಗಿ ರಿಯಾಯಿತಿ ನೀಡಲು ಸಾಧ್ಯವಾಗಿರಲಿಲ್ಲ. ಇದೀಗಾ ಕಾರ್ಮಿಕ ಇಲಾಖೆಯಿಂದಲೇ ಶೇಕಡಾ 100 ರಷ್ಟು ವೆಚ್ಚ ಭರಿಸಿ ಉಚಿತ ಬಸ್ ಪಾಸ್ ನೀಡಲು ನಿರ್ಧಾರ ಮಾಡಲಾಗಿದೆ.

ಉಚಿತ ಬಸ್ ಪಾಸ್ ಪಡೆಯಲು ಅರ್ಹತೆ ಏನು?

1. ಕರ್ನಾಟಕ ಕಟ್ಟಡ ಮತ್ತು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಹೆಸರು ನೊಂದಾಣಿಯಾಗಿರಬೇಕು .

2. ಮಂಡಳಿಯ ಗುರುತಿನ ಚೀಟಿ ಹೊಂದಿರಬೇಕು.

3. ಎರಡು ಸ್ಟಾಂಪ್ ಅಳತೆಯ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಸಲ್ಲಿಸಬೇಕು.

4. ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ವಿಜಯನಗರ, ಯಶವಂತಪುರ, ಬನಶಂಕರಿ, ಶಾಂತಿನಗರ, ದೊಮ್ಮಲೂರು, ಕೋರಮಂಗಲ, ಕೆಂಗೇರಿ, ಯಲಹಂಕ, ಹೊಸಕೋಟೆ, ಕೆಆರ್​ ಪುರ , ಹೆಚ್​ಎಸ್​ಆರ್​ ಬಡಾವಣೆ, ಹೆಬ್ಬಾಳ, ನಾಗಮಂಗಲ,ಬಾಗಲಗುಂಟೆ ಕಾರ್ಮಿಕ‌ ಇಲಾಖೆಗಳಲ್ಲಿ ದಾಖಲೆ‌ ಸಲ್ಲಿಸಿ ಪಾಸ್ ಪಡೆಯಬಹುದು.

Leave A Reply

Your email address will not be published.