Day: December 11, 2021

ಖಾಸಗಿ ಬಸ್‌ನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳ ಅಸಭ್ಯ ವರ್ತನೆ ಪ್ರಶ್ನಿಸಿದ ನಾಲ್ವರ ಬಂಧನ

ಮಂಗಳೂರು : ಮಂಗಳೂರಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಶುಕ್ರವಾರ ಖಾಸಗಿ ಬಸ್‌ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಗೆ ಬುದ್ದಿಮಾತು ಹೇಳಿದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಎಂದು ಗುರುತಿಸಲಾಗಿದೆ. ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಬಸ್‌ನಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ 5-6 ಮಂದಿ ಐಡಿ ಪ್ರೊಫ್ ಕೇಳಿ ಅವರ ಮನೆಯವರ ಬಗ್ಗೆ ವಿಚಾರಿಸಿದ್ದರು.ಈ ಪ್ರಕರಣದಲ್ಲಿ ಯುವತಿಯ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸಿದ್ದರಿಂದ ಪಾಂಡೇಶ್ವರ ಠಾಣೆಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ …

ಖಾಸಗಿ ಬಸ್‌ನಲ್ಲಿ ಅನ್ಯಧರ್ಮದ ವಿದ್ಯಾರ್ಥಿಗಳ ಅಸಭ್ಯ ವರ್ತನೆ ಪ್ರಶ್ನಿಸಿದ ನಾಲ್ವರ ಬಂಧನ Read More »

ಸೈಕಲ್‌ಗೆ ಕಾರು ಢಿಕ್ಕಿ : ಸೈಕಲ್ ಸವಾರ ಮೃತ್ಯು

ಉಡುಪಿ : ಸೈಕಲ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಕಟಪಾಡಿ ಸಮೀಪದ ಬಿಸ್ಮಿಲ್ಲಾ ಹೋಟೆಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.10ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಮೂಡಬೆಟ್ಟು ಪೊಸಾರು ನಿವಾಸಿ ರಾಜೇಂದ್ರ ಕಾಮತ್(56) ಎಂದು ಗುರುತಿಸಲಾಗಿದೆ.ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರು ಎದುರಿನಲ್ಲಿದ್ದ ಸೈಕಲ್‌ಗೆ ಢಿಕ್ಕಿಯಾಗಿ ಸೈಕಲ್ ಸವಾರ ರಾಜೇಂದ್ರ ಕಾಮತ್ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ …

ಸೈಕಲ್‌ಗೆ ಕಾರು ಢಿಕ್ಕಿ : ಸೈಕಲ್ ಸವಾರ ಮೃತ್ಯು Read More »

ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ ನಿಂದನೆ,ಬೆದರಿಕೆ | ಮೂವರ ವಿರುದ್ದ ದೂರು

ಉಡುಪಿ : ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವ ಘಟನೆ ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ನಡೆದಿದೆ. ಈ ಕುರಿತು ಸಾಲಿಗ್ರಾಮದ ಅಲ್ತಾಫ್ (27) ಎಂಬವರು ಪ್ರಾಣೇಶ್, ವಿನೂತ್ ಪೂಜಾರಿ, ಸಂಜಯ ಕುಮಾರ್ ಎಂಬವರ ವಿರುದ್ಧ ಮಣಿಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ತಾಫ್ ಅವರು ಮಧ್ಯಾಹ್ನದ ವೇಳೆಗೆ ತನ್ನ ಮನೆಯ ಪಕ್ಕದ ಮನೆಯ ಸ್ನೇಹಿತೆಯೊಂದಿಗೆ ತಿರುಗಾಡಲು ಮಣಿಪಾಲದ ಮಣ್ಣಪಳ್ಳದ ಗೇಟ್ ಬಳಿ ಹೋಗಿದ್ದರು. ಈ ವೇಳೆ ಆರೋಪಿಗಳಾದ ಪ್ರಾಣೇಶ್, ವಿನೂತ್ …

ಸ್ನೇಹಿತೆಯೊಂದಿಗೆ ತಿರುಗಾಡಲು ಹೋಗಿದ್ದ ಯುವಕನಿಗೆ ನಿಂದನೆ,ಬೆದರಿಕೆ | ಮೂವರ ವಿರುದ್ದ ದೂರು Read More »

ತಬ್ಲಿಖಿ ಜಮಾತ್ ನಿಷೇಧ ಮಾಡಿ ಬಿಸಾಕಿದ ಮುಸ್ಲಿಂ ಸಾಂಪ್ರಾದಾಯಿಕ ರಾಷ್ಟ್ರ

ಸೌದಿ ಅರೇಬಿಯಾ : ಇಸ್ಲಾಮಿಕ್ ಸಾಂಪ್ರದಾಯಿಕ ದೇಶ ಎನಿಸಿಕೊಂಡಿರುವ ಸೌದಿ ಅರೇಬಿಯಾವು ತಬ್ಲಿಘಿ ಜಮಾತ್ ಇಸ್ಲಾಮಿಕ್ ಧಾರ್ಮಿಕ ಸಂಘಟನೆಯನ್ನ ನಿಷೇಧಿಸಿದೆ. ಭಯೋತ್ಪಾದನೆಯ ಬಾಗಿಲು ಆಗಿದೆ ಎಂದು ತಬ್ಲಿಘಿ ಜಮಾತ್ ಸಂಘಟನೆಯನ್ನು ಬಣ್ಣಿಸಿರುವ ಸೌದಿ ಸರ್ಕಾರವು ತಬ್ಲಿಘಿ ಜಮಾತ್ ಸಂಘಟನೆಯಿಂದ ಜನರನ್ನು ದೂರವಿರುವಂತೆ ನಿರ್ದೇಶಿಸಿದೆ. ಮುಂದಿನ ಶುಕ್ರವಾರದಂದು ಎಲ್ಲಾ ಮಸೀದಿಗಳಲ್ಲೂ ತಬ್ಲಿಘಿ ಜಮಾತ್ ಸಂಘಟನೆ ವಿರುದ್ಧ ಜನರಿಗೆ ಅರಿವು ಮೂಡಿಸಬೇಕೆಂದು ಧರ್ಮ ಬೋಧಕರಿಗೆ ಸೌದಿ ಸರ್ಕಾರ ಸೂಚಿಸಿದೆ. ತಬ್ಲಿಘಿ ಜಮಾತ್ ಅನ್ನು ನಿಷೇಧ ಮಾಡಿರುವ ವಿಚಾರವನ್ನು ಸೌದಿ ಅರೇಬಿಯಾದ …

ತಬ್ಲಿಖಿ ಜಮಾತ್ ನಿಷೇಧ ಮಾಡಿ ಬಿಸಾಕಿದ ಮುಸ್ಲಿಂ ಸಾಂಪ್ರಾದಾಯಿಕ ರಾಷ್ಟ್ರ Read More »

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ನಟ ಸುದೀಪ್ ಭೇಟಿ

ಕಡಬ : ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಸುದೀಪ್, ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ವಿದ್ಯಾಪ್ರಸನ್ನ ಸ್ವಾಮೀಜಿಯವರನ್ನು ಭೇಟಿ ಮಾಡಿದರು. ಮಠದಲ್ಲಿ ಆಶ್ಲೇಷ,ನಾಗಪ್ರತಿಷ್ಠೆ ಪೂಜೆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದರು. ಪತ್ನಿ ಪ್ರಿಯಾ ಹಾಗೂ ಮಕ್ಕಳು ಜೊತೆಗಿದ್ದರು. ನಿನ್ನೆ ಉಡುಪಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ …

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ನಟ ಸುದೀಪ್ ಭೇಟಿ Read More »

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಆಲಿ ಅಕ್ಬರ್ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ

ಮಲಯಾಳಂ ಸಿನಿಮಾ ರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಾಗೂ ಅವರ ಪತ್ನಿ ಇಸ್ಲಾಂ ಧರ್ಮವನ್ನು ತೊರೆದು ಹಿಂದು ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದಾರೆ. ಅಲಿ ಅಕ್ಬರ್ ಅವರು ಈ ನಿರ್ಧಾರ ಕೈಗೊಳ್ಳಲು ಕಾರಣ, ಸಿಡಿಎಸ್ ಬಿಪಿನ್ ರಾವತ್ ಅವರು ದುರ್ಮರಣಕ್ಕೀಡಾಗಿ ಸಾವನ್ನಪ್ಪಿದ್ದ ವಿಷಯದಲ್ಲಿ ಕೆಲವು ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ಹಂಚಿಕೊಂಡಿದ್ದರು. ಈ ವಿಚಾರವಾಗಿ ಬೇಸತ್ತ ನಿರ್ದೇಶಕ ಅಲಿ ಅಕ್ಬರ್ ಧರ್ಮ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ವಿಚಾರವಾಗಿ ಸ್ವತಃ ನಿರ್ದೇಶಕ ಅಲಿ ಅಕ್ಬರ್ …

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಆಲಿ ಅಕ್ಬರ್ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರ Read More »

ಬ್ರೈಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ, ಆಡಳಿತ ನಿರ್ದೇಶಕ ಕನ್ನಡ್ಕ ಗಣೇಶ್ ನಾಯಕ್ ಇಂದಾಜೆ ನಿಧನ

ಮಂಗಳೂರು: ಪುತ್ತೂರಿನ ಬ್ರೈಟ್ ವಿದ್ಯಾ ಸಂಸ್ಥೆ ಗಳ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ರಾಗಿದ್ದ ಕನ್ನಡ್ಕ ಗಣೀಶ ನಾಯಕ್ ಇಂದಾಜೆ (59)ನಗರದ ಖಾಸಗಿ ಆಸ್ಪತ್ರೆಯ ಲ್ಲಿಂದು ನಿಧನ ಹೊಂದಿದರು. ದೆಹಲಿ ನ್ಯಾಶನಲ್ ಯೂತ್ ಪ್ರೋಜೆಕ್ಟ್ ನ ಜಿಲ್ಲಾ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿರುವ ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗಣೇಶೋ ತ್ಸವ ಸಮಿತಿಯ ಕಾರ್ಯ ದರ್ಶಿಯಾಗಿ, ಪುತ್ತೂರು ಗ್ರಾಹಕರ ವೇದಿಕೆ ಯ ಸದಸ್ಯ ರಾಗಿ ಸೇವೆ ಸಲ್ಲಿಸಿರುತ್ತಾರೆ. ಮೃತರು ಪತ್ನಿ, ಪುತ್ರ,ಪುತ್ರಿಹಾಗೂ ದ.ಕ ಜಿಲ್ಲಾ …

ಬ್ರೈಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ, ಆಡಳಿತ ನಿರ್ದೇಶಕ ಕನ್ನಡ್ಕ ಗಣೇಶ್ ನಾಯಕ್ ಇಂದಾಜೆ ನಿಧನ Read More »

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ |ಮುಸ್ಲಿಂ ಮಹಿಳೆಯಿಂದ ಮತಾಂತರಕ್ಕೆ ಯತ್ನಿಸಿರುವುದು ತನಿಖೆಯಿಂದ ಬೆಳಕಿಗೆ

ಮಂಗಳೂರಿನ ಜೆಪ್ಪು ಬಳಿ ನಡೆದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ಮೃತ ವಿಜಯಲಕ್ಷ್ಮಿಯನ್ನು ಮಹಿಳೆಯೊಬ್ಬಳು ಮತಾಂತರಕ್ಕೆ ಯತ್ನಿಸಿರುವ ಅಂಶ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದಿದ್ದ ನೂರ್ ಜಹಾನ್ ಎಂಬಾಕೆಯನ್ನು ಬಂಧಿಸಲಾಗಿದೆ. ಈಕೆ ವಿಜಯಲಕ್ಷ್ಮಿಯನ್ನು ಮುಸ್ಲಿಂ ಸಮುದಾಯದವರ ಜತೆ ಮದುವೆಗೆ ಯತ್ನಿಸಿರುವುದು ಸಾಂದರ್ಭಿಕ ದಾಖಲೆಗಳಿಂದ ದೃಢಗೊಂಡಿದೆ ಎಂದು ಹೇಳಿದ್ದಾರೆ. ನೂರ್ ಜಹಾನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮೃತ ಮಹಿಳೆ …

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣ |ಮುಸ್ಲಿಂ ಮಹಿಳೆಯಿಂದ ಮತಾಂತರಕ್ಕೆ ಯತ್ನಿಸಿರುವುದು ತನಿಖೆಯಿಂದ ಬೆಳಕಿಗೆ Read More »

ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಅಪಘಾತದ ಗಾಯಾಳುವಿಗೆ ನೆರವು

ಬೆಳ್ತಂಗಡಿ : ಕೆಲದಿನಗಳ ಹಿಂದೆ ಉಜಿರೆ ಪೇಟೆಯಲ್ಲಿ ಅಪಘಾತದಿಂದ ಗಾಯಗೊಂಡಿದ್ದ ಬೆಳ್ತಂಗಡಿ ತಾಲೂಕಿನ ಬಂಗಾಡಿ ಗ್ರಾಮದ ದೇರಜೆ ಮನೆಯ ಕೃಷ್ಣಪ್ಪ ಗೌಡರ ಪುತ್ರ ಪ್ರವೀಣ್ ಗೌಡ ಅವರಿಗೆ ಶ್ರೀಕ್ಷೇತ್ರ ಆರಿಕೋಡಿಯಿಂದ ನೆರವು ನೀಡಲಾಯಿತು. ಅಪಘಾತದಿಂದ ಗಾಯಗೊಂಡಿದ್ದ ಪ್ರವೀಣ್ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಆರ್ಥಿಕ ನೆರವನ್ನು ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಕ್ಷೇತ್ರದ ವತಿಯಿಂದ ಹತ್ತು ಸಾವಿರ ರೂಪಾಯಿಯ ಚೆಕ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೋ ಪಲ್ಟಿ

ಬೆಳ್ತಂಗಡಿ : ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೊ ವಾಹನವೊಂದು ಚರಂಡಿಗೆ ಉರುಳಿಬಿದ್ದ ಘಟನೆ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ. ಟೆಂಪೋದಲ್ಲಿ ತುಂಬಿದ್ದ ಮೀನುಗಳನ್ನು ಖಾಲಿ ಮಾಡಿ ವಾಪಾಸಾಗುತ್ತಿದ್ದ ವೇಳೆ ವಾಹನವು ಚರಂಡಿಗೆ ಉರುಳಿ ಬಿದ್ದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರ ಸಹಕಾರದಿಂದ ಗಾಡಿಯನ್ನು ಚರಂಡಿಯಿಂದ ಮೇಲಕ್ಕೆತ್ತಲಾಯಿತು.

error: Content is protected !!
Scroll to Top