ಮಹಾಮಾರಿಯಿಂದ ರಾಜ್ಯದಲ್ಲಿ ಶಾಲೆಗಳ ಬಾಗಿಲು ಮುಚ್ಚುವುದು ಕನಸಿನ ಮಾತು!! ಹುಸಿ ಮಾತಿಗೆ ಉತ್ತರಿಸಿದ ಸಚಿವರು ಹೇಳಿದ್ದೇನು!??
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಕಂಡುಬಂದಿದ್ದು, ರೂಪಾಂತರಿ ವೈರಸ್ ಬಗೆಗೆ ಸರ್ಕಾರಿ-ಖಾಸಗಿ ಸಹಿತ ವಸತಿ ಶಾಲೆಗಳಲ್ಲಿ ಕೋವಿಡ್ ಸುರಕ್ಷತಾ ವಿಚಾರವಾಗಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಮಾಧ್ಯಮದೊಂದಿಗೆ ಮಾತನಾಡಿದರು. ಸದ್ಯ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಹೆಚ್ಚಿನ ನಿಗಾ ವಹಿಸಿ ಸೂಕ್ತ ಸುರಕ್ಷತೆಯನ್ನು ಪಾಲಿಸಲಾಗುತ್ತಿದ್ದು, ಕೆಲವೊಂದು ಪ್ರಕರಣಗಳು ಸೂಕ್ಷ್ಮವಾಗಿವೆ. ಈ ನಡುವೆ ಯಾವ ಶಾಲೆಗಳಲ್ಲೂ ಹಾಜರಾತಿ ಕಡಿಮೆಯಾಗಿಲ್ಲ, ಎಲ್ಲಾ ವಿದ್ಯಾರ್ಥಿಗಳು ಉತ್ಸಾಹದಿಂದ ತರಗತಿಗೆ ಹಾಜರಾಗುತ್ತಿದ್ದಾರೆ ಹೀಗಿರುವಾಗ ಶಾಲಾ ಕಾಲೇಜು ಬಂದ್ ಮಾಡುವ ಯೋಚನೆ ಇಲ್ಲವೆಂದು ಹೇಳಿದ್ದಾರೆ. ಮಕ್ಕಳು ಹಾಗೂ …