ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅಕಾಲಿಕ ಮರಣಕ್ಕೆ’ ಮಾಡಿದ ಕರ್ಮ ‘ ಎಂದು ಟ್ವೀಟ್ ಮಾಜಿ ಕರ್ನಲ್ ಭಕ್ಷಿ | ಟೀಕೆಗಳ ಸುರಿಮಳೆ, ಟ್ವೀಟ್ ಡಿಲೀಟ್ !!

ನವದೆಹಲಿ: ನಿನ್ನೆ (ಡಿಸೆಂಬರ್​ 8) ಭಾರತದ ಪಾಲಿಗೆ ಅತ್ಯಂತ ಕಡು ಕರಾಳ ದಿನ. ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್​ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್​ ರಾವತ್​ ಈ ಅನಿರೀಕ್ಷಿತ ನಿಧನದಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಭಾರತೀಯ ಸೇನೆಯ ನಿವೃತ್ತ ಕರ್ನಲ್​ ಒಬ್ಬರು ಮಾಡಿರುವ ಟ್ವೀಟ್​ ತೀವ್ರ ಟೀಕೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ನಿನ್ನೆ ಸೇನಾ ಹೆಲಿಕಾಪ್ಟರ್​ ಪತನವಾದ ಬೆನ್ನಲ್ಲೇ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿ ಸೇನಾ ಮುಖ್ಯಸ್ಥರು ಹಾಗೂ ಅವರ ಸಿಬ್ಬಂದಿಯ ಚೇತರಿಕೆಗಾಗಿ ಪಾರ್ಥನೆ ಸಲ್ಲಿಸುತ್ತಿದ್ದರು.
ಆದರೆ ಅತ್ತ ನಿವೃತ್ತ ಕರ್ನಲ್​ ಬಲ್ಜಿತ್​ ಬಕ್ಷಿ, ಹೆಲಿಕಾಪ್ಟರ್​ ಪತನವನ್ನು “ಕರ್ಮವೂ ಜನರೊಂದಿಗೆ ವ್ಯವಹರಿಸಲು ತನ್ನದೇ ಆದ ಮಾರ್ಗವನ್ನು ಹೊಂದಿದೆ” ಎಂದಿದ್ದಾರೆ. ಆ ಮೂಲಕ ಈ ನಿವೃತ್ತ ಕರ್ನಲ್ ಬಲ್ಜಿತ್​ ಬಕ್ಷಿ ಅವರು ಟ್ವೀಟ್​ ಮಾಡುವ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ.

ಟ್ವೀಟ್​ನಲ್ಲಿ ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲದಿದ್ದರೂ, ಅವರು ಟ್ವೀಟ್​ ಮಾಡಿದ್ದ ಸಮಯ ಸಂದರ್ಭ ಅದರ ಹಿಂದಿನ ಉದ್ದೇಶವನ್ನು ಎತ್ತಿ ಹೇಳುತ್ತಿತ್ತು. ಯಾವಾಗ ಟ್ವೀಟ್​ ಎಲ್ಲಡೆ ವೈರಲ್​ ಆಗಿ ಸಾಕಷ್ಟು ಟೀಕೆಗಳು ಹರಿದುಬರಲು ಆರಂಭಿಸಿತೋ ತಕ್ಷಣ ಟ್ವೀಟ್​ ಅನ್ನು ಬಕ್ಷಿ ಅವರು ಡಿಲೀಟ್​ ಮಾಡಿದ್ದಾರೆ. ಆದರೂ, ಟ್ವೀಟ್​ನ ಸ್ಕ್ರೀನ್​ಶಾಟ್​ ಎಲ್ಲೆಡೆ ವೈರಲ್​ ಆಗುತ್ತಿದ್ದು, ಅದಕ್ಕೆ ಟೀಕೆಗಳು ಸಾಮಾನ್ಯ ಆಗಿದೆ.

ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್​ಗೆಂದು ಸಿಡಿಎಸ್​ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​, ಬ್ರಿಗೇಡಿಯರ್​ ಎಲ್​.ಎಸ್​.ಲಿಡ್ಡರ್​, ಲೆಫ್ಟಿನೆಂಟ್ ಕರ್ನಲ್​ ಹರ್ಜಿಂದರ್ ಸಿಂಗ್​, ನಾಯಕ್​ ಗುರುಸೇವಕ್​ ಸಿಂಗ್, ನಾಯಕ್​ ಜಿತೇಂದರ್​ ಕುಮಾರ್​, ಲ್ಯಾನ್ಸ್ ನಾಯಕ್​ ವಿವೇಕ್ ಕುಮಾರ್​, ಲ್ಯಾನ್ಸ್ ನಾಯಕ್​ ಬಿ ಸಾಯ್​ತೇಜ್​, ಹವಲ್ದಾರ್​ ಸತ್ಪಾಲ್​ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ​ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್​ ಪತನಗೊಂಡು ಬಿಪಿನ್​ ರಾವತ್​ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್​ ಬಿಪಿನ್​ ರಾವತ್​ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ.

Leave A Reply

Your email address will not be published.